Thursday, 12th December 2024

Border Gavaskar Trophy: ಪರ್ತ್‌ ಟೆಸ್ಟ್‌ನಲ್ಲಿ ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಭಾರತಕ್ಕೆ ಓಪನರ್‌ ಯಾರು?

IND vs SA:'Why Are You Playing Him': Aakash Chopra Questions Suryakumar Yadav's Decision To Hold Back Axar Patel

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯು ( Border Gavaskar Trophy) ನವೆಂಬರ್ 22 ರಂದು ಆರಂಭವಾಗಲಿದೆ. ಪರ್ತ್‌ನ ಆಪ್ಟಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ವೈಯಕ್ತಿಕ ಕಾರಣಗಳಿಂದಾಗಿ ರೋಹಿತ್‌ ಶರ್ಮಾ ಅವರು ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ಬಹುಶಃ ಅವರು ತಮ್ಮ ಎರಡನೇ ಮಗುವಿನ ಜನನದ ಕಾರಣ ಸ್ವಲ್ಪ ತಡವಾಗಿ ಟೀಮ್ ಇಂಡಿಯಾಗೆ ಸೇರಬಹುದು.

ಒಂದು ವೇಳೆ ರೋಹಿತ್‌ ಶರ್ಮಾ ಅಲಭ್ಯರಾದರೆ ಯಶಸ್ವಿ ಜೈಸ್ವಾಲ್‌ ಅವರ ಜೊತೆ ಯಾರು ಇನಿಂಗ್ಸ್‌ ಆರಂಭಿಸಲಿದ್ದಾರೆಂದು ಇನ್ನೂ ಸ್ಪಷ್ಟತೆ ಇಲ್ಲ. ಜೈಸ್ವಾಲ್‌ ಅವರ ಜೊತೆ ಇನಿಂಗ್ಸ್‌ ಆರಂಭಿಸಲು ಮೂವರು ಆಟಗಾರರಿದ್ದಾರೆ. ಕೆಎಲ್‌ ರಾಹುಲ್‌, ಅಭಿಮನ್ಯು ಈಶ್ವರನ್‌ ಹಾಗೂ ಶುಭಮನ್‌ ಗಿಲ್ ಮೂವರು ಇನಿಂಗ್ಸ್‌ ಆರಂಭಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ.

  1. ಅಭಿಮನ್ಯು ಈಶ್ವರನ್

ರೋಹಿತ್ ಶರ್ಮಾ ಬದಲಿಗೆ 29ರ ಪ್ರಾಯದ ಬ್ಯಾಟ್ಸ್‌ಮನ್ ಅಭಿಮನ್ಯು ಈಶ್ವರನ್ ಪರ್ತ್ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಓಪನಿಂಗ್ ಮಾಡಬಹುದು. ಈಶ್ವರನ್ ದೇಶಿ ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇವರು ಹಲವು ಬಾರಿ ಭಾರತ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಆದರೆ ಭಾರತ ತಂಡದಲ್ಲಿ ಆಡಲು ಅವರಿಗೆ ಎಂದಿಗೂ ಅವಕಾಶ ಸಿಕ್ಕಿರಲಿಲ್ಲ. ಆದರೆ ಈಶ್ವರನ್ ಪರ್ತ್ ಟೆಸ್ಟ್‌ನಲ್ಲಿ ಅಂತಾರಾಷ್ಟ್ರೀಯ ಪದಾರ್ಪಣೆ ಮಾಡಬಹುದು. ಅಭಿಮನ್ಯು 101 ಪಂದ್ಯಗಳಲ್ಲಿ 27 ಶತಕಗಳೊಂದಿಗೆ 7675 ರನ್ ಗಳಿಸಿದ್ದಾರೆ.

  1. ಶುಭಮನ್ ಗಿಲ್

ಚೇತೇಶ್ವರ್‌ ಪೂಜಾರ ಅವರನ್ನು ಟೆಸ್ಟ್ ತಂಡದಿಂದ ಕೈಬಿಟ್ಟ ನಂತರ, ಶುಭಮನ್ ಗಿಲ್ ಈಗ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುತ್ತಿದ್ದಾರೆ. ಆದರೆ ಇದಕ್ಕೂ ಮುನ್ನ ಅವರು ಟೆಸ್ಟ್‌ನಲ್ಲಿ ಭಾರತಕ್ಕೆ ಓಪನರ್‌ ಆಗಿ ಆಡಿದ್ದಾರೆ ಹಾಗೂ ಸಕ್ಸಸ್‌ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಶುಭಮನ್‌ ಗಿಲ್ ಪರ್ತ್ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಆರಂಭಿಕರಾಗಿ ಆಡಬಹುದು.

  1. ಕೆಎಲ್ ರಾಹುಲ್

ಭಾರತ ತಂಡಕ್ಕಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಿರುವ ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಇನಿಂಗ್ಸ್‌ ಆರಂಭಿಸಿದ್ದಾರೆ. ರಾಹುಲ್ ಅವರು ಆರಂಭಿಕ ಆಟಗಾರರಾಗಿ 29 ಟೆಸ್ಟ್ ಪಂದ್ಯಗಳನ್ನು ವಿದೇಶ ನೆಲದಲ್ಲಿ ಆಡಿದ್ದಾರೆ. ಇದರಲ್ಲಿ ಅವರು 51 ಇನಿಂಗ್ಸ್‌ಗಳಲ್ಲಿ 1682 ರನ್ ಗಳಿಸಿದ್ದಾರೆ. ಆರಂಭಿಕರಾಗಿ, ಅವರು ವಿದೇಶಿ ನೆಲದಲ್ಲಿ 6 ಶತಕ ಮತ್ತು 5 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.

ಬಾರ್ಡರ್‌-ಗವಾಸ್ಕರ್‌ ಟ್ರೋಫಿಗೆ ಭಾರತ ಟೆಸ್ಟ್‌ ತಂಡ

ರೋಹಿತ್‌ ಶರ್ಮ (ನಾಯಕ), ಜಸ್‌ಪ್ರಿತ್‌ ಬುಮ್ರಾ, ಯಶಸ್ವಿ ಜೈಸ್ವಾಲ್‌, ಅಭಿಮನ್ಯು ಈಶ್ವರನ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಕೆಎಲ್‌ ರಾಹುಲ್‌, ರಿಷಭ್‌ ಪಂತ್‌, ಸರ್ಫರಾಝ್‌ ಖಾನ್‌, ಧ್ರುವ್‌ ಜುರೆಲ್‌, ಆರ್‌ ಅಶ್ವಿನ್‌, ರವೀಂದ್ರ ಜಡೇಜಾ, ಮೊಹಮ್ಮದ್‌ ಸಿರಾಜ್‌, ಆಕಾಶ್‌ ದೀಪ್‌, ಪ್ರಸಿಧ್‌ ಕೃಷ್ಣ, ಹರ್ಷಿತ್‌ ರಾಣಾ, ನಿತೇಶ್‌ ಕುಮಾರ್‌ ರೆಡ್ಡಿ, ವಾಷಿಂಗ್ಟನ್‌ ಸುಂದರ್‌