Saturday, 14th December 2024

ಬೂಮ್ರಾ, ಶಮಿ ಮಾರಕ ದಾಳಿ: ಅಲ್ಪ ಮೊತ್ತಕ್ಕೆ ಕುಸಿದ ರೂಟ್‌ ಪಡೆ

ನಾಟಿಂಗ್ ಹ್ಯಾಮ್: ಟ್ರೆಂಟ್ ಬ್ರಿಡ್ಜ್ ನಲ್ಲಿ ಆರಂಭವಾದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ದಿನದಾಟ ಅಂತ್ಯಕ್ಕೆ ಆತಿಥೇಯ ಇಂಗ್ಲೆಂಡ್ ತಂಡ 183 ರನ್ ಗಳಿಗೆ ಆಲ್ ಔಟ್ ಆಗಿದ್ದು, ಉತ್ತರವಾಗಿ ಭಾರತದ ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ಕ್ರೀಸ್ ನಲ್ಲಿದ್ದು, ತಲಾ 9 ರನ್ ಗಳಿಸಿದ್ದಾರೆ. ಭಾರತ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ರೋರಿ ಜೋಸೆಫ್ ಬರ್ನ್ಸ್ ಅವರನ್ನು ಮೊದಲ ಓವರ್ ನಲ್ಲಿಯೇ ಶೂನ್ಯಕ್ಕೆ ಜಸ್ಪ್ರೀತ್ ಬೂಮ್ರಾ ಎಲ್ ಬಿಡಬ್ಲ್ಯೂಬಲೆಗೆ ಕೆಡವಿದರೆ, ಡೊಮ್ಮಿ ಸಿಬ್ಲಿ 18 ರನ್ ಗಳಿಸಿ ಕೆ.ಎಲ್.ರಾಹುಲ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ನಂತರ ಝಾಕ್ ಕ್ರಾಲೀ 27, ರೂಟ್ 64, ಜಾನಿ ಬೇಸ್ಟೋರ್ವ್ 29, ಡನ್ ಲಾರೆನ್ಸ್ ಹಾಗೂ ಜೋಸ್ ಬಟ್ಲರ್ ಶೂನ್ಯಕ್ಕೆ ಔಟಾದರು. ಸ್ಯಾನ್ ಕರನ್ 27, ಸ್ಟುವರ್ಡ್ ಬ್ರಾಡ್ 4, ಜೀಮ್ಸ್ ಅಂಡರ್ಸನ್ ಕೇವಲ 1 ರನ್ ಗಳಿಸಿ ಔಟಾದರು.

ಬೂಮ್ರಾ (46ಕ್ಕೆ 4) ಮತ್ತು ಶಮಿ (28ಕ್ಕೆ 3) ಇವರಿಬ್ಬರ ಮಾರಕ ಬೌಲಿಂಗ್‌ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ 65.4 ಓವರ್ ಗಳಲ್ಲಿ 183 ರನ್ ಗಳಿಸಿ ಆಲೌಟ್ ಆಯಿತು.