Thursday, 12th December 2024

Champions Trophy 2025: ಹೈಬ್ರಿಡ್‌ ಮಾದರಿಗೆ ಒಪ್ಪದ ಪಿಸಿಬಿ, ಮಹತ್ವದ ಸಭೆಯನ್ನು ಮುಂದೂಡಿದ ಐಸಿಸಿ!

Champions Trophy 2025: ICC board meeting pushed tomorrow after PCB stays adamant against hybrid model

ನವದೆಹಲಿ: ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ (Champions Trophy 2025) ಸಂಬಂಧಿಸಿದ ಬೆಳವಣಿಗೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಪಿಸಿಬಿಗೆ ತಲೆ ನೋವು ಜಾಸ್ತಿಯಾಗುತ್ತಿದೆ. ಟೀಮ್ ಇಂಡಿಯಾದ ಪಾಕಿಸ್ತಾನ ಪ್ರವಾಸ ಅಥವಾ ಹೈಬ್ರಿಡ್ ಮಾದರಿ ಅಥವಾ ಪಾಕಿಸ್ತಾನದಿಂದ ಆತಿಥ್ಯವನ್ನು ಕಸಿದುಕೊಳ್ಳುವುದು ಮುಂತಾದ ಹಲವು ವಿಷಯಗಳ ಕುರಿತು ಮಹತ್ವದ ಐಸಿಸಿ ಸಭೆ ಶುಕ್ರವಾರ ನಡೆದು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಿತ್ತು. ಆದರೆ, ಈ ಸಭೆಯನ್ನು ಮತ್ತೆ ಮುಂದೂಡಲಾಗಿದೆ.

ಶುಕ್ರವಾರ ಸಂಜೆ 4 ಗಂಟೆಗೆ ನಡೆಯಬೇಕಿದ್ದ ಮಹತ್ವದ ಐಸಿಸಿ ಮಂಡಳಿ ಸಭೆಯನ್ನು ಇದೀಗ ಶನಿವಾರಕ್ಕೆ ಮರು ನಿಗದಿಪಡಿಸಲಾಗಿದೆ. ಚಾಂಪಿಯನ್ಸ್ ಟ್ರೋಫಿ ನಡೆಯುವ ಸ್ಥಳದ ಬಗೆಗಿನ ಹೈಡ್ರಾಮಾ ಮುಂದುವರಿದಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಕೋಚ್ ರಶೀದ್ ಲತೀಫ್ ಅವರು ಸಭೆಯನ್ನು ಮುಂದೂಡಲಾಗಿದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

Champions Trophy: ಇಂದು ಚಾಂಪಿಯನ್ಸ್​ ಟ್ರೋಫಿ ಭವಿಷ್ಯ ನಿರ್ಧಾರ

“2025ರ ಚಾಂಪಿಯನ್ಸ್ ಟ್ರೋಫಿ ನಿರ್ಧಾರವನ್ನು ನಾಳೆ ತೆಗೆದುಕೊಳ್ಳಲಾಗುವುದು,” ಎಂದು ರಶೀದ್‌ ಲತೀಫ್‌ ಟ್ವೀಟ್‌ ಮಾಡಿದ್ದಾರೆ. 2025ರ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುವ ಹಕ್ಕನ್ನು ಪಾಕಿಸ್ತಾನ ಹೊಂದಿದೆ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಟೂರ್ನಿಯಲ್ಲಿ ಸಂಪೂರ್ಣವಾಗಿ ತಮ್ಮ ದೇಶದಲ್ಲಿಯಹೇ ಆಡಿಸಬೇಕೆಂದು ಪಟ್ಟು ಹಿಡಿದಿದೆ. ಭಾರತ ತಂಡ, ಪಾಕಿಸ್ತಾನದ ಪ್ರವಾಸವನ್ನು ನಿರಾಕರಿಸಿದ ಕಾರಣ, ಹೈಬ್ರಿಡ್‌ ಮಾದರಿಯಲ್ಲಿ ನಡೆಸಬೇಕೆಂಬ ಒತ್ತಡ ಪಿಸಿಬಿ ಮೇಲೆ ಬಿದ್ದಿದೆ. ಹೈಬ್ರಿಡ್‌ ಅಂದರೆ ಭಾರತದ ಪಂದ್ಯಗಳನ್ನು ಬೇರೆ ಸ್ಥಳದಲ್ಲಿ ಆಯೋಜಿಸಿ ಇನ್ನುಳಿದ ಎಲ್ಲಾ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಯೋಜಿಸುವುದು.

ಕಳೆದ ವರ್ಷ, ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ನಂತರ ಪಿಸಿಬಿ ಹೈಬ್ರಿಡ್ ಮಾದರಿಯಲ್ಲಿ ಏಷ್ಯಾಕಪ್ ಅನ್ನು ಟೂರ್ನಿಯಲ್ಲಿ ಆಯೋಜಿಸಿತ್ತು. ಭಾರತವು ಸೆಮಿಫೈನಲ್ ಮತ್ತು ಫೈನಲ್ ಸೇರಿದಂತೆ ಟೂರ್ನಿಯಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಕೊಲಂಬೊದಲ್ಲಿ ಆಡಿತ್ತು.
ಈ ತಿಂಗಳ ಆರಂಭದಲ್ಲಿ ಬಿಸಿಸಿಐನ ಹೈಬ್ರಿಡ್‌ ಮಾದರಿಯ ನಿರ್ಧಾರದ ಬಗ್ಗೆ ಸ್ಪಷ್ಟೀಕರಣವನ್ನು ಕೋರಿ ಪಿಸಿಬಿ, ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ಗೆ ಪತ್ರ ಬರೆದಿತ್ತು.

Champions Trophy Schedule: ಇನ್ನೆರಡು ದಿನದಲ್ಲಿ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಪ್ರಕಟ

ಪಿಸಿಬಿ ಬಿಸಿಸಿಐನಿಂದ ಲಿಖಿತ ಉತ್ತರವನ್ನು ಕೋರಿದೆ

ಭಾರತ ತಂಡ ಚಾಂಪಿಯನ್ಸ್‌ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಏಕೆ ಬರುತ್ತಿಲ್ಲ ಎಂದು ಪಿಸಿಬಿ, ಐಸಿಸಿಗೆ ಲಿಖಿತ ಉತ್ತರವನ್ನು ಕೇಳಿದೆ. ಅಲ್ಲದೆ ಭಾರತಕ್ಕೆ ನನ್ನ ದೇಶದಲ್ಲಿ ಯಾವುದಾರೂ ಸಮಸ್ಯೆ ಇದ್ದರೆ, ನಾವು ಬಗೆಹರಿಸುತ್ತೇವೆಂದು ಕೂಡ ಐಸಿಸಿಗೆ ಪಿಸಿಬಿ ತಿಳಿಸಿತ್ತು. ಆ ಮೂಲಕ 1996ರ ಬಳಿಕ ಇದೇ ಮೊದಲ ಬಾರಿ ಐಸಿಸಿ ಟೂರ್ನಿಯನ್ನು ನಡೆಸಬೇಕೆಂದು ಪಿಸಿಬಿ ಪಣ ತೊಟ್ಟಿದೆ.

“ನಾವು ಅವರಿಗೆ ನಮ್ಮ ಪ್ರಶ್ನೆಗಳನ್ನು ಕಳುಹಿಸಿದ್ದೇವೆ. ಅವರ ಉತ್ತರಕ್ಕಾಗಿ ನಾವು ಇನ್ನೂ ಕಾಯುತ್ತಿದ್ದೇವೆ. ಕ್ರೀಡೆ ಮತ್ತು ರಾಜಕೀಯ ವಿಭಿನ್ನವಾಗಿದ್ದು, ಯಾವುದೇ ದೇಶ ಇದನ್ನು ಮಿಶ್ರಣ ಮಾಡಬಾರದು ಎಂದು ನಾನು ನಂಬುತ್ತೇನೆ. ಚಾಂಪಿಯನ್ಸ್ ಟ್ರೋಫಿ ಬಗ್ಗೆ ನನಗೆ ಇನ್ನೂ ಸಕಾರಾತ್ಮಕ ನಿರೀಕ್ಷೆಗಳಿವೆ,” ಎಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ತಿಳಿಸಿದ್ದಾರೆ.

2021ರ ನವೆಂಬರ್‌ನಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುವ ಹಕ್ಕನ್ನು ಗೆದ್ದಿದ್ದ ಪಾಕಿಸ್ತಾನ, 1996ರ ವಿಶ್ವಕಪ್ ನಂತರ ಐಸಿಸಿಯ ಯಾವುದೇ ಟೂರ್ನಿಯನ್ನು ಆಯೋಜಿಸಿಲ್ಲ.