Wednesday, 11th December 2024

ಸಿಡ್ನಿ ಟೆಸ್ಟ್’ನಲ್ಲಿ ವಿಶೇಷ ಸಾಧನೆಗೈದ ಚೇತೇಶ್ವರ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ದ ಟೀಮ್ ಇಂಡಿಯಾ, ಸೋಮವಾರ ಮೂರನೇ ಟೆಸ್ಟ್ ಪಂದ್ಯದ ಐದನೇ ದಿನದ ಆಟದಲ್ಲಿ ರಿಷಬ್ ಪಂತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಸುದ್ದಿಯಾದರು. ಉತ್ತಮ ಜತೆಯಾಟ ನೀಡಿರುವ ಟೀಮ್ ಇಂಡಿಯಾದ ಭರವಸೆಯ ಆಟಗಾರ ಚೇತೇಶ್ವರ ಪೂಜಾರ ಹೊಸ ಸಾಧನೆ ಮೂಲಕ ಗಮನ ಸೆಳೆದರು.

ಚೇತೇಶ್ವರ ಪೂಜಾರ, ರಿಷಬ್ ಪಂತ್ ಅವರಿಗೆ ಉತ್ತಮ ಜತೆಯಾಟದ ಆರಂಭ ಒದಗಿಸಿದರು. ಜತೆಗೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ 6000 ರನ್ ಗಳಿಕೆಯ ಸಾಧನೆ ಮಾಡಿದ್ದಾರೆ. ಈ ಸಾಧನೆಗೈದ 11ನೇ ಭಾರತೀಯ ಆಟಗಾರನಾಗಿ ಚೇತೇಶ್ವರ ಹೊರಹೊಮ್ಮಿದ್ದಾರೆ.

ಚೇತೇಶ್ವರ ಕೊನೆಯ ದಿನದಾಟದಲ್ಲಿ ಟೀಮ್ ಇಂಡಿಯಾ ಗೆಲುವಿನ ಆಸೆಗೆ ನೀರೆರೆದಿದ್ದಾರೆ. ರಿಷಬ್ ಪಂತ್ ಉತ್ತಮ ಆರಂಭ ದೊರಕಿಸಿಕೊಟ್ಟು ಬಳಿಕ ಔಟ್ ಆಗಿದ್ದು, ಪೂಜಾರ ಆಟ ಮುಂದುವರಿಸಿದ್ದಾರೆ. ಪೂಜಾರ ಸಾಧನೆಗೆ ಕ್ರಿಕೆಟ್ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದು, ಟ್ವಿಟರ್ ಮೂಲಕ ಶುಭಕೋರಿದ್ದಾರೆ.