IPL 2026: ಮುಂಬೈ ಇಂಡಿಯನ್ಸ್ ತೊರೆಯಲಿರುವ ಅರ್ಜುನ್ ತೆಂಡೂಲ್ಕರ್?
ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ಬದಲಿಗೆ ಲಖನೌ ಸೂಪರ್ ಜಯಂಟ್ಸ್ ಪರ ಆಡಬಹುದು. ಮುಂಬೈ ಇಂಡಿಯನ್ಸ್ ಮತ್ತು ಲಖನೌ ಸೂಪರ್ ಜಯಂಟ್ಸ್ ನಡುವೆ ಆಟಗಾರರ ವಿನಿಮಯ ಸಾಧ್ಯ. ಅರ್ಜುನ್ ಬದಲಿಗೆ ಶಾರ್ದುಲ್ ಠಾಕೂರ್ ಅವರನ್ನು ಮುಂಬೈಗೆ ವಿನಿಮಯ ಮಾಡಿಕೊಳ್ಳಬಹುದು.
ಮುಂಬೈ ಇಂಡಿಯನ್ಸ್ ತೊರೆಯಲಿರುವ ಅರ್ಜುನ್ ತೆಂಡೂಲ್ಕರ್. -
ನವದೆಹಲಿ: ಮುಂದಿನ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಅರ್ಜುನ್ ತೆಂಡೂಲ್ಕರ್ (Arjun Tendulkar) ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ತೊರೆದು ಬೇರೆ ತಂಡಕ್ಕೆ ಆಡಬಹುದು. ಆಟಗಾರರ ವಿನಿಮಯದ ಕುರಿತು ಮುಂಬೈ ಇಂಡಿಯನ್ಸ್ ಮತ್ತು ಲಖನೌ ಸೂಪರ್ ಜಯಂಟ್ಸ್ ನಡುವೆ ಮಾತುಕತೆ ನಡೆಯುತ್ತಿದೆ. ಶಾರ್ದುಲ್ ಠಾಕೂರ್ ಬದಲಿಗೆ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ತಂಡ ವಿನಿಮಯ ಮಾಡಿಕೊಳ್ಳಲು ಬಯಸುತ್ತಿದೆ. ರವೀಂದ್ರ ಜಡೇಜಾ-ಸಂಜು ಸ್ಯಾಮ್ಸನ್ ವಹಿವಾಟು ವ್ಯಾಪಕವಾಗಿ ಚರ್ಚಿಸಲ್ಪಡುತ್ತಿದ್ದರೂ, ಇದು ಈ ಋತುವಿನ ಎರಡನೇ ಅತಿದೊಡ್ಡ ವಹಿವಾಟಾಗಿರಬಹುದು. ಈ ಟ್ರೇಡ್ ಡೀಲ್ ಸ್ವಲ್ಪ ವಿಭಿನ್ನವಾಗಿದೆ. ಇಬ್ಬರೂ ಆಟಗಾರರನ್ನು ಫ್ರಾಂಚೈಸಿಗಳ ನಡುವೆ ಮುಕ್ತವಾಗಿ ವಿನಿಮಯ ಮಾಡಿಕೊಳ್ಳಬಹುದು.
ಕ್ರಿಕ್‌ಬಜ್ ವೆಬ್‌ಸೈಟ್ ಪ್ರಕಾರ, "ಶಾರ್ದುಲ್ ಠಾಕೂರ್ ಮತ್ತು ಅರ್ಜುನ್ ತೆಂಡೂಲ್ಕರ್ ಅವರ ವಹಿವಾಟಿನ ಕುರಿತು ಲಖನೌ ಸೂಪರ್ ಜಯಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಚರ್ಚೆಗಳು ನಡೆಯುತ್ತಿವೆ. ಐಪಿಎಲ್ ವ್ಯಾಪಾರ ನಿಯಮಗಳ ಪ್ರಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಟಗಾರರ ವಿನಿಮಯವನ್ನು ಅಧಿಕೃತವಾಗಿ ಘೋಷಿಸಬೇಕು. ಆದ್ದರಿಂದ, ಫ್ರಾಂಚೈಸಿ ತಂಡಗಳು ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ."
IPL 2026 Mini Auction: ಸಂಜು ಅಥವಾ ಸುಂದರ್?; ಐಪಿಎಲ್ 2026 ಮಿನಿ ಹರಾಜಿಗೂ ಮುನ್ನ ಸಿಎಸ್‌ಕೆ ಸಿಇಒ ಮಹತ್ವದ ಹೇಳಿಕೆ
ವರದಿಯ ಪ್ರಕಾರ, ಮುಂಬೈ ಫ್ರಾಂಚೈಸಿ ಆಟಗಾರರನ್ನು ಮಿನಿಮಯ ಮಾಡಿಕೊಳ್ಳುವ ಸಾಧ್ಯತೆ ಇದೆ. ಮುಂದಿನ ಕೆಲವು ದಿನಗಳಲ್ಲಿ ಇದರ ಬಗ್ಗೆ ಘೋಷಣೆ ಹೊರಬೀಳಬಹುದು. ರಿಟೈನ್ ಮಾಡಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ನವೆಂಬರ್ 15 ರಂದು ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕಾಗಿದೆ.
2 ಕೋಟಿ ರು. ಗಳಿಗೆ ಲಖನೌ ಸೇರಿದ್ದ ಶಾರ್ದುಲ್
ದೇಶಿ ಕ್ರಿಕೆಟ್‌ನಲ್ಲಿ ಮುಂಬೈ ತಂಡದ ನಾಯಕರಾಗಿರುವ ಶಾರ್ದುಲ್ ಠಾಕೂರ್ ಅವರನ್ನು ಕಳೆದ ಋತುವಿನ ಮೊದಲು ಲಖನೌ ಫ್ರಾಂಚೈಸಿ 2 ಕೋಟಿ ರು. ಗಳಿಗೆ ಖರೀದಿಸಿತ್ತು. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದಿದ್ದ 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾಗದೆ ಉಳಿದ ನಂತರ ಶಾರ್ದುಲ್ ಲಖನೌ ಸೇರಿದ್ದರು. ಶಾರ್ದುಲ್ ಠಾಕೂರ್ ಎಲ್‌ಎಸ್‌ಜಿ ಪರ 10 ಪಂದ್ಯಗಳನ್ನು ಆಡಿದ್ದಾರೆ. ಬ್ಯಾಟಿಂಗ್‌ನಲ್ಲಿ ಸಾಧಾರಣ ಕೊಡುಗೆ ನೀಡಿದರು (18 ರನ್‌ಗಳು) ಆದರೆ ಚೆಂಡಿನಲ್ಲಿ ಪ್ರಭಾವಶಾಲಿಯಾಗಿ 13 ವಿಕೆಟ್‌ಗಳನ್ನು ಪಡೆದರು. ಆಗಾಗ್ಗೆ ಹೊಸ ಚೆಂಡನ್ನು ಬೌಲ್ ಮಾಡುತ್ತಿದ್ದ ಶಾರ್ದುಲ್ ಠಾಕೂರ್ ತಂಡದ ಬೌಲಿಂಗ್ ದಾಳಿಯನ್ನು ತೆರೆದರು ಮತ್ತು ಆ ಪಾತ್ರದಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸಿದರು.
IPL 2026: ಪಂಜಾಬ್ ಕಿಂಗ್ಸ್ ಮಿನಿ ಹರಾಜಿಗೆ ಬಿಡುಗಡೆ ಮಾಡಲಿರುವ ಐವರು ಆಟಗಾರರು!
ಪ್ಲೇಯಿಂಗ್ XIನಲ್ಲಿ ಸ್ಥಾನ ಪಡಯುವುದು ಅರ್ಜುನ್‌ಗೆ ಸವಾಲು
ಅರ್ಜುನ್ ತೆಂಡೂಲ್ಕರ್ ಎರಡು ಋತುಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ. ಅವರನ್ನು ಎರಡೂ ಹರಾಜಿನಲ್ಲಿ 20 ಲಕ್ಷ ರು ಮೂಲ ಬೆಲೆಗೆ ಮುಂಬೈ ಇಂಡಿಯನ್ಸ್ ತಂಡವು ಖರೀದಿಸಿತ್ತು. ಕಳೆದ ಋತುವಿನಲ್ಲಿ ಅವರು ಒಂದು ಪಂದ್ಯವನ್ನು ಆಡದಿದ್ದರೂ, ಅವರು ಹಿಂದಿನ ಎರಡು ಆವೃತ್ತಿಗಳಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದರು. 2023 ರಲ್ಲಿ ಮೂರು ಪಂದ್ಯ ಮತ್ತು ಕಳೆದ ವರ್ಷ ಒಂದು ಪಂದ್ಯವನ್ನು ಆಡಿದ್ದರು. ಒಟ್ಟಾರೆಯಾಗಿ, ಸಚಿನ್ ಐದು ಐಪಿಎಲ್ ಪಂದ್ಯಗಳಲ್ಲಿ 13 ರನ್ ಗಳಿಸಿದ್ದಾರೆ ಮತ್ತು ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ.
ಎರಡು ವರ್ಷಗಳ ಹಿಂದೆ ದೇಶಿ ಕ್ರಿಕೆಟ್‌ನಲ್ಲಿ ಸಚಿನ್ ಪುತ್ರ ಮುಂಬೈನಿಂದ ಗೋವಾಕ್ಕೆ ಸ್ಥಳಾಂತರಗೊಂಡರು ಮತ್ತು ಅಂದಿನಿಂದ 21 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ದೇಶಿ ಕ್ರಿಕೆಟ್ ಮತ್ತು ಐಪಿಎಲ್ ಎರಡರಲ್ಲೂ ಮುಂಬೈನ ತಾರಾ ಬಳಗದೊಂದಿಗೆ ಆಡುವ ಹನ್ನೊಂದರ ತಂಡಕ್ಕೆ ಪ್ರವೇಶಿಸುವುದು ಯಾವಾಗಲೂ ಅರ್ಜುನ್ ತೆಂಡೂಲ್ಕರ್‌ಗೆ ಸವಾಲಾಗಿದೆ.