ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಭಾರತ ತಂಡದಲ್ಲಿ ಮುಖೇಶ್‌ ಕುಮಾರ್‌ಗೆ ಸ್ಥಾನ ನೀಡಬೇಕೆಂದ ಸೌರವ್‌ ಗಂಗೂಲಿ!

ಮುಂಬರುವ 2025ರ ಏಷ್ಯಾ ಕಪ್‌ ಟೂರ್ನಿಯ ಭಾರತ ತಂಡದಲ್ಲಿ ಮುಖೇಶ್‌ ಕುಮಾರ್‌ಗೆ ಸ್ಥಾನ ನೀಡಬೇಕೆಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ನಾಯಕ ಸೌರವ್‌ ಗಂಗೂಲಿ ಆಗ್ರಹಿಸಿದ್ದಾರೆ. ಇವರು ಕಳೆದ ವರ್ಷ ಜಿಂಬಾಬ್ವೆ ವಿರುದ್ದ ಕೊನೆಯ ಅಂತಾರಾಷ್ಟ್ರೀಯ ಟಿ20ಐ ಪಂದ್ಯವನ್ನು ಆಡಿದ್ದರು.

ಭಾರತ ತಂಡದಲ್ಲಿ ಮುಖೇಶ್‌ ಕುಮಾರ್‌ಗೆ ಸ್ಥಾನ ನೀಡಬೇಕೆಂದ ಗಂಗೂಲಿ!

ಮುಖೇಶ್‌ ಕುಮಾರ್‌ಗೆ ಭಾರತ ತಂಡದಲ್ಲಿ ಸ್ಥಾನ ನೀಡಬೇಕೆಂದ ಸೌರವ್‌ ಗಂಗೂಲಿ.

Profile Ramesh Kote Aug 7, 2025 12:02 AM

ನವದೆಹಲಿ: ಮುಂಬರುವ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯ ಭಾರತ ತಂಡಕ್ಕೆ ಬಂಗಾಳ ವೇಗಿ ಮುಖೇಶ್‌ ಕುಮಾರ್‌ (Mukesh Kumar) ಅವರನ್ನು ಆಯ್ಕೆ ಮಾಡಬೇಕೆಂದು ಟೀಮ್‌ ಇಂಡಿಯಾ ಮಾಜಿ ನಾಯಕ ಸೌರವ್‌ ಗಂಗೂಲಿ (Sourav Ganguly) ಬಿಸಿಸಿಐ ಸೆಲೆಕ್ಟರ್‌ಗೆ ಆಗ್ರಹಿಸಿದ್ದಾರೆ. ಕಳೆದ ವರ್ಷ ಜಿಂಬಾಬ್ವೆ ವಿರುದ್ದ ಮುಖೇಶ್‌ ಕುಮಾರ್‌ ಕೊನೆಯ ಟಿ20ಐ ಪಂದ್ಯವನ್ನು ಆಡಿದ್ದರು. ಮೂರು ಟೆಸ್ಟ್‌ ಪಂದ್ಯಗಳಿಂದ 32 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೆ, ಆರು ಏಕದಿನ ಪಂದ್ಯಗಳು ಹಾಗೂ ಏಳು ಟಿ20ಐ ಪಂದ್ಯಗಳನ್ನು ಇವರು ಆಡಿದ್ದಾರೆ. ಇಂಡಿಯಾ ಟುಡೇ ಜೊತೆ ಮಾತನಾಡಿದ ಅವರು, ಮೂರೂ ಸ್ವರೂಪದಲ್ಲಿ ಆಡಬಲ್ಲ ಸಾಮರ್ಥ್ಯವನ್ನು ಹೊಂದಿರುವ ಮುಖೇಶ್‌ ಕುಮಾರ್‌ಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕೆಂದು ಸಲಹೆ ನೀಡಿದ್ದಾರೆ.

"ಮುಖೇಶ ಕುಮಾರ್‌ ಖಚಿತವಾಗಿಯೂ ಆಡಬೇಕು. ಇಂಥಾ ಕಂಡೀಷನ್ಸ್‌ಗೆ ಅವರು ಅತ್ಯುತ್ತಮವಾಗಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಅವರು ಸ್ಥಿರವಾಗಿ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗಾಗಿ ಅವರು ಭಾರತ ತಂಡದಲ್ಲಿ ಆಡಲು ಅರ್ಹರಾಗಿದ್ದಾರೆ," ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್‌ ಗಂಗೂಲಿ ತಿಳಿಸಿದ್ದಾರೆ.

IND vs ENG: ಟೀಕೆಗಳಿಗೆ ಗುರಿಯಾಗಿರುವ ಜಸ್‌ಪ್ರೀತ್‌ ಬುಮ್ರಾಗೆ ಸಚಿನ್‌ ತೆಂಡೂಲ್ಕರ್‌ ವಿಶೇಷ ಸಂದೇಶ!

"ಪ್ರಸ್ತುತ ಸನ್ನಿವೇಶದಲ್ಲಿ ಯಾವುದೇ ಟೆಸ್ಟ್‌ ಕ್ರಿಕೆಟ್‌ ಇಲ್ಲ. ಹಾಗಾಗಿ ಅವರು ಏಷ್ಯಾ ಕಪ್‌ ಅಥವಾ ಭಾರತ ಟಿ20ಐ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆಂದು ಕಾದು ನೋಡಬೇಕಾಗಿದೆ. ಅವರು ಮೂರೂ ಸ್ವರೂಪದಲ್ಲಿ ಉತ್ತಮ ಪ್ರದರ್ಶನವನ್ನು ತೋರಬಲ್ಲ ಬೌಲರ್‌ ಆಗಿದ್ದಾರೆ. ಅವರ ಸಮಯ ಬಂದೇ ಬರುತ್ತದೆ ಹಾಗಾಗಿ ಅವರು ತಾಳ್ಮೆಯಿಂದ ಇರಬೇಕು ಅಷ್ಟೇ," ಎಂದು ಅವರು ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಭಾರತ ತಂಡದಿಂದ ಹೊರಗುಳಿದಿದ್ದ ಮುಖೇಶ್, ಲೀಡ್ಸ್‌ನಲ್ಲಿ ನಡೆದಿದ್ದ ಮೊದಲ ಪಂದ್ಯಕ್ಕೂ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ನಿಗೂಢ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದರು.

IND vs ENG: ಶುಭಮನ್‌ ಗಿಲ್‌ ಇನ್ನೂ ಕಲಿಯಬೇಕೆಂದಿದ್ದ ಕಪಿಲ್‌ ದೇವ್‌ಗೆ ಯೋಗರಾಜ್‌ ಸಿಂಗ್‌ ತಿರುಗೇಟು!

"ಕರ್ಮವು ತನ್ನ ಸಮಯವನ್ನು ಕಾಯುತ್ತಿದೆ. ನೀವು ಯಾವಾಗಲೂ ಜಾಗರೂಕರಾಗಿರಬೇಕು. ಕರ್ಮವು ಕ್ಷಮಿಸುವುದಿಲ್ಲ ಮತ್ತು ಯಾವಾಗಲೂ ಪ್ರತೀಕಾರವನ್ನು ಪಡೆಯುತ್ತದೆ," ಎಂದು ಮುಖೇಶ್ ಕುಮಾರ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದರು.

ಸರಣಿಗೂ ಮುನ್ನ ಕ್ಯಾಂಟರ್ಬರಿಯಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆದಿದ್ದ ಮೊದಲನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಮುಖೇಶ್ ಕುಮಾರ್‌ ಮೂರು ವಿಕೆಟ್ ಕಬಳಿಸಿದ್ದರು. ಆದರೆ, ನಾರ್ಥ್‌ಹ್ಯಾಂಪ್ಟನ್‌ನಲ್ಲಿ ನಡೆದಿದ್ದ ಎರಡನೇ ಪಂದ್ಯಕ್ಕೆ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಹೆಚ್ಚುವರಿಯಾಗಿ, ಜೂನ್‌ನಲ್ಲಿ ಕೆಂಟ್‌ನಲ್ಲಿ ನಡೆದ ಇಂಟ್ರಾ-ಸ್ಕ್ವಾಡ್ ಅಭ್ಯಾಸ ಪಂದ್ಯದಲ್ಲಿ ಅವರು ಭಾಗವಹಿಸಲಿಲ್ಲ. ಕಳೆದ ವಾರ 2025–26ರ ದುಲೀಪ್ ಟ್ರೋಫಿಗಾಗಿ ಪೂರ್ವ ವಲಯದ 15 ಜನರ ತಂಡದಲ್ಲಿ ಮುಖೇಶ್ ಅವರನ್ನು ಸೇರಿಸಲಾಯಿತು.

ಮೊಹಮ್ಮದ್ ಶಮಿ, ಆಲ್‌ರೌಂಡರ್ ರಿಯಾನ್ ಪರಾಗ್ ಮತ್ತು ಭಾರತೀಯ ಸೀಮರ್ ಆಕಾಶ್ ದೀಪ್ ಅವರನ್ನು ಒಳಗೊಂಡ 15 ಜನರ ತಂಡಕ್ಕೆ ಇಶಾನ್ ಕಿಶನ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಇಂಗ್ಲೆಂಡ್‌ನಲ್ಲಿ ನಡೆದ ಭಾರತದ ಟೆಸ್ಟ್ ತಂಡದ ಸದಸ್ಯ ಅಭಿಮನ್ಯು ಈಶ್ವರನ್ ಅವರನ್ನು ಉಪನಾಯಕನನ್ನಾಗಿ ಮಾಡಲಾಗಿದೆ.