ನವದೆಹಲಿ: ಭಾರತೀಯ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ (Cheteshwar Pujara) ಮತ್ತು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ನಿಕ್ ನೈಟ್ (Nick Knight) 21ನೇ ಶತಮಾನದಲ್ಲಿ ಆಡಿದ ಭಾರತ ಮತ್ತು ಇಂಗ್ಲೆಂಡ್‌ನ ಆಟಗಾರರನ್ನು ಒಳಗೊಂಡ ಸಂಯೋಜಿತ ಪ್ಲೇಯಿಂಗ್ XI ಅನ್ನು ಆರಿಸಿದ್ದಾರೆ. ರೋಹಿತ್ ಶರ್ಮಾ, ಗೌತಮ್ ಗಂಭೀರ್ ಮತ್ತು ಜಹೀರ್ ಖಾನ್ ಅವರನ್ನು ಕೈಬಿಡುವ ಮೂಲಕ ಪೂಜಾರ, ಅಚ್ಚರಿ ಮೂಡಿಸಿದ್ದಾರೆ. ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಸೇರಿ ಒಟ್ಟು ಏಳು ಮಂದಿ ಭಾರತೀಯರು ಈ ತಂಡದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಇನ್ನುಳಿದ ನಾಲ್ವರು ಆಟಗಾರರು ಇಂಗ್ಲೆಂಡ್‌ನಿಂದ ಆಯ್ಕೆಯಾಗಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ಸಂಯೋಜನೆಯ 21ನೇ ಶತಮಾನದ ತಂಡವನ್ನು ಕಟ್ಟುವ ವೇಳೆ ಟಾಸ್ ಹಾಕಲಾಯಿತು. ಈ ವೇಳೆ ಟಾಸ್ ಗೆದ್ದ ಚೇತೇಶ್ವರ್ ಪೂಜಾರ ಮೊದಲು ತಮ್ಮ ಆಯ್ಕೆಯ ತಂಡವನ್ನು ಆರಿಸಲು ಮುಂದಾದರು. ಚೇತೇಶ್ವರ್ ಪೂಜಾರ, ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರನ್ನೇ ತಮ್ಮ ನೆಚ್ಚಿನ ತಂಡಕ್ಕೆ ನಾಯಕನನ್ನಾಗಿ ಆರಿಸಿದ್ದಾರೆ. ಆದರೆ, ನಿಕ್ ನೈಟ್ ಅವರು ತಮ್ಮ ತಂಡದಲ್ಲಿ ಆಲ್‌ಸ್ಟೈರ್ ಕುಕ್ ಹಾಗೂ ವೀರೇಂದ್ರ ಸೆಹ್ವಾಗ್ ಅವರನ್ನು ಆರಂಭಿಕರನ್ನಾಗಿ ನೇಮಿಸಲಾಗಿದೆ.
IND vs ENG: ಕೆಎಲ್ ರಾಹುಲ್ ಬ್ಯಾಟಿಂಗ್ ಬದಲಾವಣೆ ಬಗ್ಗೆ ದೊಡ್ಡ ಹೇಳಿಕೆ ಕೊಟ್ಟ ರವಿ ಶಾಸ್ತಿ!
ಚೇತೇಶ್ವರ್ ಪೂಜಾರ ಅವರು, ಆರಂಭಿಕ ಬ್ಯಾಟ್ಸ್‌ಮನ್‌ಗಳ ಸ್ಥಾನಕ್ಕೆ ಅಲೆಕ್ ಸ್ಟೀವರ್ಟ್ ಹಾಗೂ ರಾಹುಲ್ ದ್ರಾವಿಡ್ ಅವರನ್ನು ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನಾಗಿ ಆರಿಸಿದ್ದಾರೆ. ಆ ಮೂಲಕ ಭಾರತದ ರೋಹಿತ್ ಶರ್ಮಾ, ಮುರಳಿ ವಿಜಯ್ ಹಾಗೂ ಗೌತಮ್ ಗಂಭೀರ್ ಅವರನ್ನು ಪೂಜಾರ ಕಡೆಗಣಿಸಿದ್ದಾರೆ. ಮಧ್ಯಮ ಕ್ರಮಾಂಕಕ್ಕೆ ಜೋ ರೂಟ್, ವಿರಾಟ್ ಕೊಹ್ಲಿ, ವಿವಿಎಸ್ ಲಕ್ಷ್ಮಣ್ ಅವರನ್ನು ಆರಿಸಿದ್ದಾರೆ.
ಇನ್ನು ಆಲ್‌ರೌಂಡರ್ ವಿಭಾಗಕ್ಕೆ ಬೆನ್ ಸ್ಟೋಕ್ಸ್, ಆಂಡ್ರೋ ಫ್ಲಿಂಟಾಫ್ ಹಾಗೂ ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡಿದ್ದಾರೆ. ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ರವಿಚಂದ್ರನ್ ಅಶ್ವಿನ್ ಅವರನ್ನು ಆರಿಸಿದ್ದಾರೆ. ವೇಗದ ಬೌಲಿಂಗ್ ವಿಭಾಗಕ್ಕೆ ಮೊಹಮ್ಮದ್ ಶಮಿ ಹಾಗೂ ಜಸ್‌ಪ್ರೀತ್ ಬುಮ್ರಾ ಅವರನ್ನು ಆರಿಸಿದ್ದಾರೆ. 12ನೇ ಆಟಗಾರನಾಗಿ ಮ್ಯಾಥ್ಯೂ ಹೋಗಾರ್ಡ್ ಅವರನ್ನು ಆರಿಸಲಾಗಿದೆ.
IND vs ENG: ಕರುಣ್ ನಾಯರ್ ಔಟ್, ನಾಲ್ಕನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್ XIನಲ್ಲಿ 2 ಬದಲಾವಣೆ ಸಾಧ್ಯತೆ!
ಚೇತೇಶ್ವರ ಪೂಜಾರ ಆಯ್ಕೆಯ ಭಾರತ-ಇಂಗ್ಲೆಂಡ್ ಸಂಯೋಜಿತ ಟೆಸ್ಟ್ XI (21 ನೇ ಶತಮಾನ): ಅಲೆಕ್ ಸ್ಟೀವರ್ಟ್ (ವಿಕೆಟ್ ಕೀಪರ್), ರಾಹುಲ್ ದ್ರಾವಿಡ್, ಜೋ ರೂಟ್, ವಿರಾಟ್ ಕೊಹ್ಲಿ, ವಿವಿಎಸ್ ಲಕ್ಷ್ಮಣ್, ಬೆನ್ ಸ್ಟೋಕ್ಸ್, ಆಂಡ್ರ್ಯೂ ಫ್ಲಿಂಟಾಫ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಮ್ಯಾಥ್ಯೂ ಹೊಗಾರ್ಡ್ (12 ನೇ ಆಟಗಾರ).