ನವದೆಹಲಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ (IND vs SA) ನಡುವೆ ಎರಡು ಪಂದ್ಯಗಳ ಸರಣಿ ನವೆಂಬರ್ 14 ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸರಣಿಯ ನಿಮಿತ್ತ ಭಾರತ ತಂಡ ತಯಾರಿ ನಡೆಯುತ್ತಿದೆ. ಇದರ ನಡುವೆ ಸೀಮ್ ಬೌಲಿಂಗ್ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ (Nitish Kumar Reddy) ಅವರನ್ನು ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯ ಭಾರತ ತಂಡದಿಂದ (India Test Squad) ಬಿಡುಗಡೆ ಮಾಡಲಾಗಿದೆ. ಇದೀಗ ಆಂಧ್ರ ಪ್ರದೇಶ ಮೂಲದ ಆಟಗಾರ ಭಾರತ ಎ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಇಲ್ಲಿ ದಕ್ಷಿಣ ಆಫ್ರಿಕಾ ಎ ವಿರುದ್ಧ ಅನಧಿಕೃತ ಟೆಸ್ಟ್ ಪಂದ್ಯ ಆಡಲಿದ್ದಾರೆ.
ನಿತೀಶ್ ಕುಮಾರ್ ರೆಡ್ಡಿ ಅವರು ಈಗಾಗಲೇ ಭಾರತ ಟೆಸ್ಟ್ ತಂಡದ ಇತರೆ ಆಟಗಾರರ ಜೊತೆ ಈಡನ್ ಗಾರ್ಡನ್ಸ್ ಕ್ರೀಡಾಂಗದಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಆ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿದ್ದಾರೆ. ಭಾರತ ತಂಡದ ಪ್ಲೇಯಿಂಗ್ XIನಲ್ಲಿ ನಿತೀಶ್ ಕುಮಾರ್ ರೆಡ್ಡಿಗೆ ಅವಕಾಶ ನೀಡುವುದು ಅನುಮಾನ. ಈ ಕಾರಣದಿಂದಲೇ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಟೆಸ್ಟ್ ತಂಡದಿಂದ ಬಿಡುಗಡೆ ಮಾಡಲಾಗಿದೆ.
IND vs SA: ಕೋಲ್ಕತಾ ಟೆಸ್ಟ್‌ನಲ್ಲಿ ನಿತೀಶ್ ರೆಡ್ಡಿ ಸ್ಥಾನದಲ್ಲಿ ಆಡಲಿರುವ ಧ್ರುವ್ ಜುರೆಲ್!
ತಂಡದ ಮೂಲಗಳ ಪ್ರಕಾರ, 22ನೇ ವಯಸ್ಸಿನ ಆಂಧ್ರ ಆಲ್‌ರೌಂಡರ್ ಈ ವಾರದ ಆರಂಭದಲ್ಲಿ ಭಾರತ ಎ ತಂಡವನ್ನು ಸೇರಲು ರಾಜ್‌ಕೋಟ್‌ಗೆ ತಲುಪಿದ್ದಾರೆ. ಅಲ್ಲಿ ಅವರು ಪ್ರವಾಸಿ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧದ ಲಿಸ್ಟ್ ಎ ಪಂದ್ಯಗಳಲ್ಲಿ ಆಡುವ ನಿರೀಕ್ಷೆಯಿದೆ. ಗಾಯದಿಂದ ಕೆಲವು ತಿಂಗಳುಗಳ ನಂತರ ಅವರಿಗೆ ಹೆಚ್ಚಿನ ಆಟಕ್ಕೆ ಸಮಯ ಮತ್ತು ಪಂದ್ಯದ ಫಿಟ್‌ನೆಸ್ ನೀಡುವ ಗುರಿಯನ್ನು ಹೊಂದಲಾಗಿದೆ.
ನವೆಂಬರ್ 12 ರಂದು ಬುಧವಾರ ನಡೆದಿದ್ದ ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಭಾರತದ ಸಹಾಯಕ ಕೋಚ್ ರಯಾನ್ ಟೆನ್ ಡಷ್ಕಟೇ, ನಿತೀಶ್ ಕುಮಾರ್ ರೆಡ್ಡಿ ಅವರನ್ನು ಕೈಬಿಟ್ಟಿರುವುದನ್ನು ದೃಢಪಡಿಸಿದರು. ಅವರು ಧ್ರುವ್ ಜುರೆಲ್ ಆಡುವ XI ನ ಭಾಗವಾಗಲಿದ್ದಾರೆ ಎಂದು ಸುಳಿವು ನೀಡಿದ್ದರು. ಯುವ ವಿಕೆಟ್ ಕೀಪರ್-ಬ್ಯಾಟರ್ ಅವರ ಅದ್ಭುತ ಫಾರ್ಮ್ ಮತ್ತು ಸ್ಥಿರ ಪ್ರದರ್ಶನವು ಅವರ ಸೇರ್ಪಡೆಯನ್ನು ಸಮರ್ಥಿಸಿಕೊಂಡಿದೆ. ಇದು ಪರೋಕ್ಷವಾಗಿ ರೆಡ್ಡಿ ಬಿಡುಗಡೆಗೆ ದಾರಿ ಮಾಡಿಕೊಟ್ಟಿತು.
IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
ಇತ್ತೀಚಿನ ತಿಂಗಳುಗಳಲ್ಲಿ ಗಾಯಗಳಿಂದಾಗಿ ನಿತೀಶ್ ರೆಡ್ಡಿ ಅವರ ಪಯಣವು ಅಸ್ತವ್ಯಸ್ತವಾಗಿದೆ. ಅಡಿಲೇಡ್‌ನಲ್ಲಿ ನಡೆದಿದ್ದ ಒಡಿಐ ಸರಣಿಯ ಸಮಯದಲ್ಲಿ ಅವರು ಗಾಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಮೂರು ಟಿ20ಐ ಪಂದ್ಯಗಳಿಂದ ಅವರನ್ನು ಹೊರಗಿಡಲಾಯಿತು. ನಂತರ ಫಿಟ್ನೆಸ್ ಮರಳಿ ಪಡೆದರೂ, ಅವರು ಕುತ್ತಿಗೆ ಸೆಳೆತದಿಂದ ಬಳಲುತ್ತಿದ್ದರು, ಅದು ಅವರ ಪೂರ್ಣ ಚೇತರಿಕೆಗೆ ಅಡ್ಡಿಯಾಯಿತು.
ಒಂದು ಕಾಲದಲ್ಲಿ ಭಾರತ ತಂಡದ ಅತ್ಯಂತ ಭರವಸೆಯ ಟೆಸ್ಟ್ ಆಲ್‌ರೌಂಡರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದ ನಿತೀಶ್ ಕುಮಾರ್ ರೆಡ್ಡಿ ಅವರ ಪ್ರಸ್ತುತ ಗಮನ ಭಾರತ ಎ ತಂಡದೊಂದಿಗೆ ಫಾರ್ಮ್ ಮತ್ತು ಲಯವನ್ನು ಮರಳಿ ಪಡೆಯುವುದು. ಅವರ ಬಿಡುಗಡೆಯಿಂದ ಹಿರಿಯ ತಂಡ, ತನ್ನ ಸಮತೋಲನವನ್ನು ಸುಗಮಗೊಳಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೆ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಇಬ್ಬರೂ ಪ್ಲೇಯಿಂಗ್ XIನಲ್ಲಿ ಆಡಬಹುದು.