IND vs SA: ಕೋಲ್ಕತಾ ಟೆಸ್ಟ್‌ನಲ್ಲಿ ನಿತೀಶ್ ರೆಡ್ಡಿ ಸ್ಥಾನದಲ್ಲಿ ಆಡಲಿರುವ ಧ್ರುವ್ ಜುರೆಲ್!
ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನವೆಂಬರ್ 14 ರಂದು ಆರಂಭವಾಗಲಿರುವ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಪ್ಲೇಯಿಂಗ್ XI ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಅದರಂಗ ಭಾರತ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡಷ್ಕಟೇ ಅವರು ಧ್ರುವ್ ಜುರೆಲ್ ಆಡುವ ಬಗ್ಗೆ ಖಚಿತಪಡಿಸಿದ್ದಾರೆ.
ಧ್ರುವ್ ಜುರೆಲ್ ಆಡುವ ಬಗ್ಗೆ ಖಚಿತಪಡಿಸಿದ ರಯಾನ್ ಟೆನ್ ಡಷ್ಕಟೇ. -
ಕೋಲ್ಕತಾ: ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿದ್ದ ಭಾರತ ತಂಡ, ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (IND vs SA) ಕಾದಾಟ ನಡೆಸಲು ಎದುರು ನೋಡುತ್ತಿದೆ. ಮೊದಲನೇ ಟೆಸ್ಟ್ ಪಂದ್ಯ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನವೆಂಬರ್ 14 ರಂದು ಆರಂಭವಾಗಲಿದೆ. ಈ ಪಂದ್ಯದ ನಿಮಿತ್ತ ಭಾರತ ತಂಡದ ಪ್ಲೇಯಿಂಗ್ XI (India's Playing XI) ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಟೀಮ್ ಇಂಡಿಯಾದ ಸಹಾಯಕ ಕೋಚ್ ರಯಾನ್ ಟೆನ್ ಡಷ್ಕಟೇ, ಭಾರತ ತಂಡದ ಪ್ಲೇಯಿಂಗ್ IXನಲ್ಲಿ ಧ್ರುವ್ ಜುರೆಲ್ (Dhruv Jurel) ಆಡಲಿದ್ದಾರೆಂದು ಖಚಿತಪಡಿಸಿದ್ದಾರೆ.
"ಈ ವಾರ ಧ್ರುವ್ ಜುರೆಲ್ ಹಾಗೂ ರಿಷಭ್ ಪಂತ್ ಇಬ್ಬರೂ ಆಡಿಲ್ಲವಾದರೆ, ನನಗೆ ತುಂಬಾ ಅಚ್ಚರಿಯಾಗಲಿದೆ," ಎಂದು ರಯಾನ್ ಟೆನ್ ಡಷ್ಕಟೇ ತಿಳಿಸಿದ್ದಾರೆ. ಆ ಮೂಲಕ ದಕ್ಷಿಣ ಆಫ್ರಿಕಾ ವಿರುದ್ದದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಹಾಗೂ ಧ್ರುವ್ ಜುರೆಲ್ ಇಬ್ಬರೂ ಆಡಲಿದ್ದಾರೆಂಬ ಮುನ್ಸೂಚನೆಯನ್ನು ನೀಡಿದ್ದಾರೆ. ಇದರ ಪ್ರಕಾರ ವಿಕೆಟ್ ಕೀಪರ್ ಆಗಿ ಪಂತ್ ಆಡಿದರೆ, ಹೆಚ್ಚುವರಿ ಬ್ಯಾಟ್ಸ್‌ಮನ್ ಆಗಿ ಧ್ರುವ್ ಜುರೆಲ್ ಆಡಬಹುದು.
ಕಳೆದ ಒಂದೂವರೆ ವರ್ಷದಿಂದ ಧ್ರುವ್ ಜುರೆಲ್ ಅವರು ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಕ್ಕ ಸೀಮಿತ ಅವಕಾಶಗಳಲ್ಲಿ ಗಮನ ಸೆಳೆದಿದ್ದಾರೆ. ಸೆಪ್ಟಂಬರ್ ತಿಂಗಳಿನಿಂದ ಜುರೆಲ್ ದೇಶಿ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನವನ್ನು ತೋರಿದ್ದಾರೆ. ಅವರು ಆಡಿದ 5 ಪಂದ್ಯಗಳಿಂದ ಕ್ರಮವಾಗಿ 140, 56, 125, 44, 132* ಹಾಗೂ 127 ರನ್‌ಗಳನ್ನು ಕಲೆ ಹಾಕಿದ್ದಾರೆ. ರಣಜಿ ಟ್ರೋಫಿ, ಟೆಸ್ಟ್, ಭಾರತ ಎ ಪರ ಈ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಇವರ ಪ್ರಥಮ ದರ್ಜೆ ಕ್ರಿಕೆಟ್‌ನ ಸರಾಸರಿ 47.34 ರಿಂದ 58 ರಷ್ಟಿದೆ.
IND vs SA: ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌ಗೆ ಸ್ಪಿನ್ ಪಿಚ್
"ಕಳೆದ ಆರು ತಿಂಗಳಿಂದ ಧ್ರುವ್ ಜುರೆಲ್ ಆಡಿದ ರೀತಿ ಮತ್ತು ಕಳೆದ ವಾರ ಬೆಂಗಳೂರಿನಲ್ಲಿ ಎರಡು ಶತಕಗಳನ್ನು ಗಳಿಸಿರುವುದನ್ನು ಗಮನಿಸಿದರೆ, ಅವರು ಈ ವಾರ ಆಡುವುದು ಖಚಿತ," ಎಂದು ಟೆನ್ ಡಷ್ಕಟೇ ತಿಳಿಸಿದ್ದಾರೆ. ಆ ಮೂಲಕ ಯುವಕನ ಕೆಲಸದ ನೀತಿ ಮತ್ತು ಮನೋಧರ್ಮವನ್ನು ಸಹಾಯಕ ಕೋಚ್ ಶ್ಲಾಘಿಸಿದ್ದಾರೆ.
23ನೇ ವಯಸ್ಸಿನ ಬ್ಯಾಟ್ಸ್‌ಮನ್ ದಕ್ಷಿಣ ಆಫ್ರಿಕಾ ಎ ವಿರುದ್ಧ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿದ್ದರು. ಆದರೂ ಈ ಪಂದ್ಯದಲ್ಲಿ ಭಾರತ ಎ ತಂಡ ಸೋಲು ಅನುಭವಿಸಿತ್ತು. ಅವರ ಫಾರ್ಮ್ ಅನ್ನು ನೋಡುವುದಾದರೆ, ಅವರನ್ನು ಮೊದಲನೇ ಟೆಸ್ಟ್ ಪಂದ್ಯದಿಂದ ಹೊರಗಿಡಲು ಸಾಧ್ಯವಿಲ್ಲ. ಅವರು ನಿತೀಶ್ ರೆಡ್ಡಿ ಸ್ಥಾನದಲ್ಲಿ ಆಡಬಹುದು.
IND vs SA: ಅಂದು ಆಡಲ್ಲ ಎಂದಿದ್ದೇ ಮೊಹಮ್ಮದ್ ಶಮಿಗೆ ಮುಳುವಾಯಿತೆ? ಬಿಸಿಸಿಐ ಅಧಿಕಾರಿ ಹೇಳಿದ್ದಿದು!
"ವೆಸ್ಟ್ ಇಂಡೀಸ್ ವಿರುದ್ಧದ ಎರಡೂ ಟೆಸ್ಟ್ ಪಂದ್ಯಗಳಲ್ಲಿ ನಿತೀಶ್ ರೆಡ್ಡಿ ಆಡಿದ್ದರು ಹಾಗೂ ಅವರನ್ನು ಭವಿಷ್ಯದ ನಿಮಿತ್ತ ಬೆಳೆಸುವುದು ತುಂಬಾ ಮುಖ್ಯ. ಕಲಿಯುತ್ತಿರುವ ಆಟಗಾರ ಎಂಬುದು ನಮಗೂ ಗೊತ್ತಿದೆ, ಈ ಕಾರಣದಿಂದಲೇ ಅವರನ್ನು ನಾವು ಬೆಳೆಸುತ್ತಿದ್ದೇವೆ. ಆದರೆ, ಇದೇ ಸಮಯದಲ್ಲಿ ತಂತ್ರಗಾರಿಕೆ ಕೂಡ ಮುಖ್ಯವಾಗುತ್ತದೆ. ಪಂದ್ಯವನ್ನು ಗೆಲ್ಲುವ ತಂತ್ರಗಾರಿಕೆ ನಮಗೆ ಪ್ರಥಮ ಆಧ್ಯತೆಯಾಗಲಿದೆ. ಹುಡಗರನ್ನು ಸಿದ್ದಗೊಳಿಸಬೇಕಾದರೆ, ಈ ರೀತಿಯ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ," ಎಂದು ರಯಾನ್ ಟೆನ್ ಡಷ್ಕಟೇ ತಿಳಿಸಿದ್ದಾರೆ.
"ನಿತೀಶ್ ರೆಡ್ಡಿ ಅವರ ಬಗ್ಗೆ ನಮ್ಮ ದೃಷ್ಟಿಕೋನ ಬದಲಾವಣೆಯಾಗುವುದಿಲ್ಲ. ಆಸ್ಟ್ರೇಲಿಯಾಲಿದಲ್ಲಿ ಇವರಿಗೆ ಹೆಚ್ಚಿನ ಆಟದ ಸಮಯ ಸಿಕ್ಕಿರಲಿಲ್ಲ. ಈ ಸರಣಿಗೆ ನಾವು ಪ್ರಾಮುಖ್ಯತೆಯನ್ನು ನೀಡಿದ್ದೇವೆ ಹಾಗೂ ಇಲ್ಲಿನ ಕಂಡೀಷನ್ಸ್ ಅನ್ನು ನಾವು ಎದುರಿಸಲಿದ್ದೇವೆ. ಹಾಗಾಗಿ, ಈ ವಾರ ನಾವು ಅವರನ್ನು ಕಳೆದಕೊಳ್ಳಲಿದ್ದೇವೆ," ಎಂದು ಸಹಾಯಕ ಕೋಚ್ ಹೇಳಿದ್ದಾರೆ.