ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

INDW vs SLW: ಸ್ಮೃತಿ ಮಂಧಾನಾ ಇನ್‌, ಶ್ರೀಲಂಕಾ ವಿರುದ್ಧದ ಟಿ20ಐ ಸರಣಿಗೆ ಭಾರತ ಮಹಿಳಾ ತಂಡ ಪ್ರಕಟ!

Indian Women's T20 Squad: ಶ್ರೀಲಂಕಾ ವಿರುದ್ಧ ಐದು ಪಂದ್ಯಗಳ ಟಿ20ಐ ಸರಣಿಗೆ ಭಾರತ ಮಹಿಳಾ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಈ ವರ್ಷದಲ್ಲಿ ಭಾರತ ಮಹಿಳಾ ತಂಡ ಕೊನೆಯ ಸರಣಿ ಇದಾಗಿದೆ. ಭಾರತ ತಂಡಕ್ಕೆ 17 ವರ್ಷದ ಗುನಲನ್‌ ಕಮಲಿನಿ ಹಾಗೂ ಅಂಡರ್‌-19 ಆಟಗಾರ್ತಿ ವೈಷ್ಣವಿ ಶರ್ಮಾ ಹಿರಿಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಶ್ರೀಲಂಕಾ ಟಿ20ಐ ಸರಣಿಗೆ ಭಾರತ ಮಹಿಳಾ ತಂಡ ಪ್ರಕಟ!

ಭಾರತ ಮಹಿಳಾ ಟಿ20 ತಂಡ ಪ್ರಕಟ. -

Profile
Ramesh Kote Dec 9, 2025 9:41 PM

ನವದೆಹಲಿ: ಶ್ರೀಲಂಕಾ ವಿರುದ್ದ ಮುಂಬರುವ ಐದು ಪಂದ್ಯಗಳ ಟಿ20ಐ ಸರಣಿಗೆ (INDW vs SLW) 15 ಸದಸ್ಯರ ಭಾರತ ಮಹಿಳಾ ತಂಡವನ್ನು (India's Women Squad) ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಪ್ರಕಟಿಸಿದೆ. ಇತ್ತೀಚೆಗೆ ಪಲಾಶ್‌ ಮಚ್ಚಲ್‌ ಅವರೊಂದಿಗೆ ವಿವಾಹ ಮುರಿದುಕೊಂಡಿದ್ದ ಆರಂಭಿಕ ಬ್ಯಾಟರ್‌ ಸ್ಮೃತಿ ಮಂಧಾನ (Smriti Mandhana) ಅವರು ಕೂಡ ತಂಡಕ್ಕೆ ಮರಳಿದ್ದಾರೆ. ಅಂದ ಹಾಗೆ 2025ರಲ್ಲಿ ಭಾರತ ಮಹಿಳಾ ತಂಡಕ್ಕೆ ಕೊನೆಯ ಸರಣಿ ಇದಾಗಿದೆ. ಭಾರತ ಮಹಿಳಾ ತಂಡದಲ್ಲಿ ಇಬ್ಬರು ಕಿರಿಯ ಆಟಗಾರ್ತಿಯರು ಚೊಚ್ಚಲ ಅವಕಾಶವನ್ನು ಪಡೆದುಕೊಂಡಿದ್ದಾರೆ. 17 ವಯಸ್ಸಿನ ವಿಕೆಟ್‌ ಕೀಪರ್‌ ಗುನಲನ್‌ ಕಮಲಿನಿ ಹಾಗೂ ಅಂಡರ್‌-19 ಆಟಗಾರ್ತಿ ಹಾಗೂ ಎಡಗೈ ಸ್ಪಿನ್ನರ್‌ ವೈಷ್ಣವಿ ಶರ್ಮಾ ಅವರು ಇದೇ ಮೊದಲ ಭಾರತ ಮಹಿಳಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕಮಲಿನಿ ಈಗಾಗಲೇ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದಾರೆ ಮತ್ತು 2026ರ ಮೆಗಾ ಹರಾಜಿಗೂ ಮುನ್ನ ಅವರನ್ನು ಉಳಿಸಿಕೊಳ್ಳಲಾಗಿದೆ. ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಕಳೆದ ವರ್ಷ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡಕ್ಕೆ ಒಂಬತ್ತು ಪಂದ್ಯಗಳನ್ನು ಆಡಿದ್ದರು. ಈ ವರ್ಷದ ಆರಂಭದಲ್ಲಿ ಭಾರತದ U-19 ತಂಡದ ಗೆಲುವಿನಲ್ಲಿ, ಅವರು ಏಳು ಪಂದ್ಯಗಳಲ್ಲಿ 143 ರನ್‌ಗಳನ್ನು ಗಳಿಸಿದ್ದರು.

IND vs SA: ತಮಗೆ ಭೀತಿ ಹುಟ್ಟಿಸಿರುವ ಭಾರತೀಯ ಬ್ಯಾಟ್ಸ್‌ಮನ್‌ ಹೆಸರಿಸಿದ ಏಡೆನ್‌ ಮಾರ್ಕ್ರಮ್!

ವೈಷ್ಣವಿ ಇನ್ನೂ ಡಬ್ಲ್ಯುಪಿಎಲ್‌ನಲ್ಲಿ ಇನ್ನೂ ಆಡಿಲ್ಲ ಮತ್ತು ಕಳೆದ ಮೆಗಾ ಹರಾಜಿನಲ್ಲಿ ಅವರು ಅನ್‌ಸೋಲ್ಡ್‌ ಆಗಿದ್ದರು. ಇವರು ಮಧ್ಯ ಪ್ರದೇಶ ಪರ ಹಿರಿಯದ ಮಹಿಳಾ ಟಿ20 ಟೂರ್ನಿಯಲ್ಲಿ 11 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಪಡೆದು ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದರು. ಕೇಂದ್ರ ವಲಯದಲ್ಲಿ ನಡೆದಿದ್ದ ಹಿರಿಯ ಮಹಿಳಾ ಅಂತರ ವಲಯ ಟೂರ್ನಿಯಲ್ಲಿ ಆಡಿದ್ದ ಐದು ಪಂದ್ಯಗಳಿಂದ 12 ವಿಕೆಟ್‌ಗಳನ್ನು ಪಡೆದಿದ್ದರು.

ತಂಡದಲ್ಲಿ ಮೂರು ಬದಲಾವಣೆ

ಇಂಗ್ಲೆಂಡಡ್‌ನಲ್ಲಿ 5 ಪಂದ್ಯಗಳ ಟಿ20 ಸರಣಿ ಆಡಿದ್ದ ತಂಡವನ್ನೇ ಇದೀಗ ಮೂರು ಬದಲಾವಣೆಗಳೊಂದಿಗೆ ಆಯ್ಕೆ ಮಾಡಲಾಗಿದೆ. ಗಾಯಾಳು ಯಾಸ್ತಿಕಾ ಭಾಟಿಯಾ ಅವರು ಈ ಸರಣಿಗೆ ಅಲಭ್ಯರಾಗಿದ್ದಾರೆ. ರಾಧಾ ಯಾದವ್‌ ಹಾಗೂ ಸಯಾಲಿ ಸಾತ್ಘೆರೆ ಅವರನ್ನು ತಂಡದಿಂದ ಕೈ ಬಿಡಲಾಗಿದೆ.



ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಣ ಐದು ಪಂದ್ಯಗಳ ಮಹಿಳಾ ಟಿ20ಐ ಸರಣಿಯು ಡಿಸೆಂಬರ್‌ 21 ರಂದು ಆರಂಭವಾಗಲಿದೆ. ಆರಂಭಿಕ ಎರಡು ಪಂದ್ಯಗಳು ವಿಶಾಖಪಟ್ಟಣಂನಲ್ಲಿ ನಡೆದರೆ, ಕೊನೆಯ ಮೂರು ಪಂದ್ಯಗಳಿಗೆ ತಿರುವನಂತಪುರಂ ಆತಿಥ್ಯ ವಹಿಸಲಿದೆ.

ಶ್ರೀಲಂಕಾ ವಿರುದ್ಧದ ಟಿ20ಐ ಸರಣಿಗೆ ಭಾರತ ಮಹಿಳಾ ತಂಡ

ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ದೀಪ್ತಿ ಶರ್ಮಾ, ಸ್ನೇಹಾ ರಾಣಾಮ ಜೆಮಿಮಾ ರೊಡ್ರಿಗಸ್‌, ಶಫಾಲಿ ವರ್ಮಾ ಹರ್ಲಿನ್‌ ಡಿಯೋಲ್‌, ಅಮಂಜೋತ್‌ ಕೌರ್‌, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್‌, ರೇಣುಕಾ ಸಿಂಗ್‌ ಠಾಕೂರ್‌, ರಿಚಾ ಘೋಷ್‌ (ವಿಕೆಟ್‌ ಕೀಪರ್‌), ಗುನಲನ್‌ ಕಮಲಿನಿ (ವಿಕೆಟ್‌ ಕೀಪರ್‌), ಶ್ರೀ ಚರಣಿ, ವೈಷ್ಣವಿ ಶರ್ಮಾ