Friday, 13th December 2024

Cristiano Ronaldo: 900ನೇ ಗೋಲು ಬಾರಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

Cristiano Ronaldo

ನವದೆಹಲಿ: ಪೋರ್ಚುಗಲ್‌ ತಂಡದ ಸ್ಟಾರ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ತಮ್ಮ ವೃತ್ತಿಜೀವನದ 900ನೇ ಗೋಲುಗಳನ್ನು ಪೂರ್ತಿಗೊಳಿಸಿದ್ದಾರೆ. ಗುರುವಾರ ತಡರಾತ್ರಿ ನಡೆದ ನೇಷನ್ಸ್ ಲೀಗ್‌ನ ಆರಂಭಿಕ ಪಂದ್ಯದಲ್ಲಿ ಕ್ರೊಯೇಷಿಯಾ ಗೋಲು ಬಾರಿಸುವ ಮೂಲಕ ರೊನಾಲ್ಡೊ ಈ ಸಾಧನೆಗೈದರು. ಪಂದ್ಯದಲ್ಲಿ ಪೋರ್ಚುಗಲ್‌ 2-1 ಗೋಲುಗಳ ಅಂತರದಿಂದ ಗೆದ್ದು ಬೀಗಿತು.

ರೊನಾಲ್ಡೊ ರಿಯಲ್ ಮ್ಯಾಡ್ರಿಡ್ ಪರ ಆಡುವಾಗ ಅತ್ಯಂತ ಯಶಸ್ವಿ ಆಟಗಾರನಾಗಿದ್ದರು. ಒಟ್ಟು 438 ಪಂದ್ಯಗಳನ್ನಾಡಿ 450 ಗೋಲುಗಳನ್ನು ಗಳಿಸಿದ್ದರು. ಪೋರ್ಚುಗಲ್ ಪರ ರೊನಾಲ್ಡೊ 131 ಗೋಲುಗಳನ್ನು ಗಳಿಸಿದ್ದಾರೆ. ರೊನಾಲ್ಡೊ ಸ್ಕೋರ್ ಮಾಡಿದ ಇತರ ತಂಡಗಳೆಂದರೆ ಅಲ್-ನಾಸ್ರ್ (68), ಜುವೆಂಟಸ್ (101), ಮ್ಯಾಂಚೆಸ್ಟರ್ ಯುನೈಟೆಡ್ (145) ಮತ್ತು ಸ್ಪೋರ್ಟಿಂಗ್ ಸಿಪಿ (5).

ಇದನ್ನೂ ಓದಿ Paris Paralympics: ಫೈನಲ್‌ ಪ್ರವೇಶಿಸಿದ ಸಿಮ್ರನ್‌ ಶರ್ಮಾ

ʼಬ್ಯಾಲನ್ ಡಿ’ಓರ್ʼ ನಾಮನಿರ್ದೇಶನ ಪಟ್ಟಿಯಿಂದ ಮೆಸ್ಸಿ, ರೊನಾಲ್ಡೊ ಹೊರಗೆ

2024ರ ʼಬ್ಯಾಲನ್ ಡಿ’ಓರ್ʼ ʼಚಿನ್ನದ ಚೆಂಡುʼ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಪಟ್ಟಿಯನ್ನು ಬುಧವಾರ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಈ ಬಾರಿ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೊನೆಲ್ ಮೆಸ್ಸಿ ಕಾಣಿಸಿಕೊಂಡಿಲ್ಲ. ಈ ಬಾರಿಯ ಪಟ್ಟಿಯಲ್ಲಿ ಫ್ರಾನ್ಸ್‌ನ ಕೈಲಿಯಾನ್ ಎಂಬಾಪೆ ಮತ್ತು ನಾರ್ವೆಯ ಅರ್ಲಿಂಗ್ ಹಾಲಂಡ್ ಮುಖ್ಯವಾಗಿ ಕಾಣಿಸಿಕೊಂಡಿದ್ದಾರೆ. ಇಂಗ್ಲೆಂಡ್‌ನ ಜೂಡ್ ಬೆಲಿಂಗ್‌ಹ್ಯಾಮ್, ಸ್ಪೇನ್‌ನ ಲಮಿನ್ ಯಮಲ್ ಮತ್ತು ಸ್ಪೇನ್‌ನವರೇ ಆದ ನಿಕೊ ವಿಲಿಯಮ್ಸ್ ಕೂಡ ಪಟ್ಟಿಯಲ್ಲಿದ್ದಾರೆ. ಸ್ಪೇನ್‌ನ ಈ ಇಬ್ಬರು ಯುವ ಆಟಗಾರರು 2024ರ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪೇನ್‌ನ ವಿಜಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅರ್ಜೆಂಟೀನದ ಲಿಯೊನೆಲ್ ಮೆಸ್ಸಿ ದಾಖಲೆಯ 8 ಬಾರಿ ಈ ಪ್ರಶಸ್ತಿ ಗೆದ್ದಿದ್ದಾರೆ. ಅದೇ ವೇಳೆ, ಪೋರ್ಚುಗಲ್‌ನ ರೊನಾಲ್ಡೊಗೆ 5 ಬಾರಿ ಈ ಪ್ರಶಸ್ತಿ ಒಲಿದಿದೆ.