Friday, 13th December 2024

ಚೆನ್ನೈ ಗೆಲುವಿಗೆ 146 ರನ್ ಗುರಿ

ದುಬೈ: ಶಿಸ್ತುಬದ್ಧ ಬೌಲಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಾಧಾರಣ ಮೊತ್ತ ದಾಖಲಿಸಿದ್ದು, ಚೆನ್ನೈ ಗೆಲುವಿಗೆ 146 ರನ್ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್ ಗಳಲ್ಲಿಆರು ವಿಕೆಟ್ ಕಳೆದುಕೊಂಡು 145 ಗಳಿಸಿತು. ನಾಯಕ ವಿರಾಟ್ ಕೊಹ್ಲಿ 43 ಎಸೆತಗಳಲ್ಲಿ 50 ರನ್ ಹಾಗೂ ಎಬಿಡಿ ವಿಲಿಯರ್ಸ್ 36 ಎಸೆತ ಗಳಲ್ಲಿ 39 ರನ್ ಬಾರಿಸಿದರು. ಚೆನ್ನೈ ಪರ ಸ್ಯಾಮ್ ಕರ್ರನ್ 3, ದೀಪಕ್ ಚಾಹರ್ 2 ವಿಕೆಟ್ ಪಡೆದರು.

ಈಗಾಗಲೇ ಉತ್ತರ ನೀಡಲಾರಂಭಿಸಿದ ಚೆನ್ನೈ, ಆರಂಭದಲ್ಲೇ ವೇಗವಾಗಿ ರನ್ ಪೇರಿಸಲು ಆದ್ಯತೆ ನೀಡಿದಂತಿದೆ. ಚೆನ್ನೈಗೆ ಇಲ್ಲಿ ಗೆಲುವು ಮಾತ್ರವಲ್ಲ, ಉತ್ತಮ ರನ್ ರೇಟ್ ದಾಖಲಿಸುವುದು ಪ್ಲೇ ಆಫ್ ಪ್ರವೇಶದ ದೃಷ್ಟಿಯಿಂದ ಮುಖ್ಯವಾಗಿದೆ.

ಈಗಾಗಲೇ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿರುವ ಚೆನ್ನೈಗೆ ಪ್ಲೇ ಆಫ್ ಹಾದಿ ಬಹುತೇಕ ದುರ್ಗಮವಾಗಿದೆ.