Wednesday, 11th December 2024

ಕಾಮನ್ವೆಲ್ತ್ ಗೇಮ್ಸ್: ಸೆಮಿಫೈನಲ್‌’ಗೆ ಪುರುಷರ ಹಾಕಿ ತಂಡ ಲಗ್ಗೆ

ಬರ್ಮಿಂಗ್‌ಹ್ಯಾಮ್‌: ಗುರುವಾರ ನಡೆದ “ಬಿ’ ವಿಭಾಗದ ಮುಖಾಮುಖಿಯಲ್ಲಿ ಭಾರತ 4-1 ಗೋಲುಗಳಿಂದ ವೇಲ್ಸ್‌ ತಂಡ ವನ್ನು ಮಣಿಸಿತು. ಈ ಮೂಲಕ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪುರುಷರ ಹಾಕಿ ತಂಡ ಸೆಮಿಫೈನಲ್‌ ತಲುಪಿದೆ.

ಉಪನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಅವರ ಹ್ಯಾಟ್ರಿಕ್‌ ಭಾರತದ ಆಕರ್ಷಣೆ ಆಗಿತ್ತು. ಅವರು 19ನೇ, 20ನೇ ಮತ್ತು 40ನೇ ನಿಮಿಷದಲ್ಲಿ ಗೋಲು ಸಿಡಿಸಿದರು.

ಉಳಿದೊಂದು ಗೋಲು 49ನೇ ನಿಮಿಷದಲ್ಲಿ ಗುರ್ಜಂತ್‌ ಸಿಂಗ್‌ ಅವರಿಂದ ಸಿಡಿಯಿತು. ವೇಲ್ಸ್‌ ತಂಡದ ಏಕೈಕ ಗೋಲನ್ನು ಗ್ಯಾರೆತ್‌ ಫುರ್ಲಾಂಗ್‌ 55ನೇ ನಿಮಿಷದಲ್ಲಿ ಬಾರಿಸಿದರು. ಈ ಜಯದೊಂದಿಗೆ ಭಾರತ “ಬಿ’ ವಿಭಾಗದ ಅಗ್ರಸ್ಥಾನವನ್ನು ಗಟ್ಟಿಗೊಳಿಸಿತು.

ಇಂಗ್ಲೆಂಡ್‌ ವಿರುದ್ಧ 22 ಗೋಲುಗಳ ವ್ಯತ್ಯಾಸ ಹೊಂದಿರುವುದು ಭಾರತದ ಹೆಗ್ಗಳಿಕೆಯಾಗಿದೆ. ಇಂಗ್ಲೆಂಡ್‌ ತನ್ನ ಅಂತಿಮ ಲೀಗ್‌ ಪಂದ್ಯವನ್ನು ಕೆನಡಾ ವಿರುದ್ಧ ಆಡಲಿದೆ. ಭಾರತದ ವನಿತಾ ತಂಡ ಕೂಡ ಸೆಮಿಫೈನಲ್‌ ತಲುಪಿದೆ.