Friday, 13th December 2024

ಡೇವಿಡ್ ಮಿಲ್ಲರ್ ಪುತ್ರಿ ನಿಧನ

ಜೋಹಾನ್ಸ್’ಬರ್ಗ್: ಕ್ಷಿಣ ಆಫ್ರಿಕಾದ ಬ್ಯಾಟರ್ ಡೇವಿಡ್ ಮಿಲ್ಲರ್ ಪುತ್ರಿ ನಿಧನರಾಗಿದ್ದಾರೆ.

ಸ್ವತಃ ಡೇವಿಡ್ ಮಿಲ್ಲರ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತನ್ನ ಮಗ ಳೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ, “ನನ್ನ ಪುಟ್ಟ ರಾಕ್‌ಸ್ಟಾರ್ RIP. ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ.” ಎಂದು ಶೀರ್ಷಿಕೆ ನೀಡಿದ್ದಾರೆ.

ಡೇವಿಡ್ ಮಿಲ್ಲರ್ ಮಗಳು ಕ್ಯಾನ್ಸರ್ ನಿಂದ ಪೀಡಿತಳಾಗಿದ್ದಳು. ಹಲವು ವರ್ಷ ಗಳ ಹೋರಾಟ್ ನಂತರ ಅವಳು ಇಹಲೋಕ ತ್ಯಜಿಸಿದ್ದಾಳೆ.

“ನಿನ್ನ ಪ್ರಯಾಣದಲ್ಲಿ ನೀನು ಪ್ರತಿಯೊಬ್ಬ ವ್ಯಕ್ತಿಯನ್ನು ಮತ್ತು ಪ್ರತಿ ಸವಾಲನ್ನು ಸ್ವೀಕರಿಸಿದ್ದೀಯಾ. ಜೀವನದಲ್ಲಿ ಪ್ರತಿ ಯೊಂದು ಕ್ಷಣವನ್ನು ಪಾಲಿಸುವುದರ ಬಗ್ಗೆ ನೀನು ನನಗೆ ತುಂಬಾ ಕಲಿಸಿದ್ದೀಯಾ!” ಎಂದು ಡೇವಿಡ್ ಮಿಲ್ಲರ್ ಮಗಳ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ.

“ನಿನ್ನ ಜೊತೆಯಲ್ಲಿ ಬದುಕಿನಲ್ಲಿ ಪ್ರಯಾಣ ಮಾಡಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ!” ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಡೇವಿಡ್ ಮಿಲ್ಲರ್ ಸದ್ಯ ಭಾರತದ ಪ್ರವಾಸದಲ್ಲಿದ್ದಾರೆ.