Wednesday, 11th December 2024

ಧವನ್‌ ಕಮಾಲ್‌: ಡೆಲ್ಲಿಗೆ ಸುಲಭದ ತುತ್ತಾದ ಪಂಜಾಬ್‌ ಕಿಂಗ್ಸ್‌

ಮುಂಬೈ: ಡೆಲ್ಲಿ ಕ್ಯಾಪಿಟಲ್ ವಾಂಖೆಡೆ ಮೈದಾನ ದಲ್ಲೇ ಅಬ್ಬರದ ಬ್ಯಾಟಿಂಗ್ ಮೂಲಕ ಗೆಲುವಿನ ಲಯಕ್ಕೆ ಮರಳಿತು. ಅನುಭವಿ ಶಿಖರ್ ಧವನ್ (92) ಸ್ಫೋಟಕ ಬ್ಯಾಟಿಂಗ್ ಫಲವಾಗಿ ಡೆಲ್ಲಿ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು.

ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯದಿಂದಲೇ ರಾಜಸ್ಥಾನ ರಾಯಲ್ಸ್ ಎದುರು ಡೆಲ್ಲಿ ಸೋಲನುಭವಿಸಿತ್ತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಕನ್ನಡಿಗರಾದ ಮಯಾಂಕ್ ಅಗರ್ವಾಲ್ (69ರನ್) ಹಾಗೂ ಕೆಎಲ್ ರಾಹುಲ್ (61ರನ್) ಜೋಡಿಯ ಸ್ಫೋಟಕ ಆಟದ ಫಲವಾಗಿ 4 ವಿಕೆಟ್‌ಗೆ 195 ರನ್ ಪೇರಿಸಿತು. ಈ ಸವಾಲನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 18.2 ಓವರ್‌ಗಳಲ್ಲಿ 4 ವಿಕೆಟ್‌ಗೆ 198 ರನ್‌ಗಳಿಸಿ ಜಯದ ನಗೆ ಬೀರಿತು.

ಪಂಜಾಬ್ ಕಿಂಗ್ಸ್: 4 ವಿಕೆಟ್‌ಗೆ 195 (ಕೆಎಲ್ ರಾಹುಲ್ 61, ಮಯಾಂಕ್ ಅಗರ್ವಾಲ್ 69, ಗೇಲ್ 11, ದೀಪಕ್ ಹೂಡಾ 22*, ಶಾರುಖ್ ಖಾನ್ 15*, ಕ್ರಿಸ್ ವೋಕ್ಸ್ 42ಕ್ಕೆ 1, ಲುಕ್ಮಾನ್ ಮೆರಿವಾಲಾ 32ಕ್ಕೆ 1).

ಡೆಲ್ಲಿ ಕ್ಯಾಪಿಟಲ್ಸ್ : 18.2 ಓವರ್‌ಗಳಲ್ಲಿ 4 ವಿಕೆಟ್‌ಗೆ 198 (ಶಿಖರ್ ಧವನ್ 92, ಪೃಥ್ವಿ ಷಾ 32, ಮಾರ್ಕಸ್ ಸ್ಟೋಯಿನಿಸ್ 27*, ಲಲಿತ್ ಯಾದವ್ 12*, ಜೇ ರಿಚರ್ಡ್‌ಸನ್ 41ಕ್ಕೆ 2, ಅರ್ಷದೀಪ್ ಸಿಂಗ್ 22ಕ್ಕೆ 1, ರಿಲಿ ಮೆರೆಡಿತ್ 35ಕ್ಕೆ 1).