Wednesday, 11th December 2024

ಅತ್ಯಾಚಾರ ಆರೋಪ: ಧನುಷ್ಕ್ ಗುಣತಿಲಕ ಅಮಾನತು

ಕೋಲಂಬೋ: ತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರಿಕೆಟ್‌ ಆಟಗಾರ ಧನುಷ್ಕ್ ಗುಣತಿಲಕರನ್ನು ಎಲ್ಲ ತರಹದ ಕ್ರಿಕೆಟ್‌ ಗಳಿಂದ ಅಮಾನತು ಮಾಡಲಾಗಿದೆ.

ರೋಸ್ ಬೇಯಲ್ಲಿ ಈ ಘಟನೆ ನಡೆದಿದ್ದು, ಸಿಡ್ನಿಯ ಮಹಿಳೆಯನ್ನು ಆನ್ ಲೈನ್ ಡೇಟಿಂಗ್ ಮೂಲಕ ಸಂಪರ್ಕ ಮಾಡಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರು ನೀಡಿರುವುದಾಗಿ ಪೋಲಿಸರು ತಿಳಿದ್ದಾರೆ.

2015ರಿಂದ ಅಂತರಾಷ್ಷ್ರೀಯ ಕ್ರಿಕೆಟ್ ಗೆ ಕಾಲಿಟ್ಟಿರುವ ಗುಣತಿಲಕ, ಪ್ರಸ್ತುತ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್ ಗಾಗಿ ಆಷ್ಟ್ರೇಲಿಯಾಕ್ಕೆ ತೆರಳಿದ್ದರು. ಟೂರ್ನಿಯಲ್ಲಿ ಇಂಗ್ಲೆಂಡ್ ಜೊತೆ ಕೊನೆ ಪಂದ್ಯವಾಡಿ ಸೋತಿದ್ದರಿಂದ ಶ್ರೀಲಂಕಾಕ್ಕೆ ತಂಡ ವಾಪಾಸ್ಸಾಗಿತ್ತು.