Friday, 13th December 2024

ಬಯೋಬಬಲ್​ ಉಲ್ಲಂಘನೆ: ವಿವಾದದಲ್ಲಿ ನಿರೋಶನ್​ ಡಿಕ್​ವೆಲ್ಲಾ, ಕುಸಲ್​ ಮೆಂಡಿಸ್

ಕೋಲಂಬೋ: ಶ್ರೀಲಂಕಾ ಕ್ರಿಕೆಟಿಗರಾದ ನಿರೋಶನ್​ ಡಿಕ್​ವೆಲ್ಲಾ ಹಾಗೂ ಕುಸಲ್​ ಮೆಂಡಿಸ್​​ ಬಯೋಬಬಲ್​ ಉಲ್ಲಂಘನೆಯ ಆರೋಪ ಎದುರಿಸುತ್ತಿದ್ದಾರೆ.

ಇಂಗ್ಲೆಂಡ್​ ವಿರುದ್ಧದ ಸೀಮಿತ ಓವರ್​ಗಳ ಸರಣಿಯಲ್ಲಿ ಶ್ರೀಲಂಕಾ ತಂಡದ ಆಟಗಾರರು ಹೊಸ ವಿವಾದ ವೊಂದನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಈ ಇಬ್ಬರು ಇಂಗ್ಲೆಂಡ್​ ಡುರ್ಹಾಮ್​ ಪಟ್ಟಣದಲ್ಲಿ ರೌಂಡ್ಸ್ ಹಾಕು ತ್ತಿರುವ ವಿಡಿಯೋದಲ್ಲಿ ಶ್ರೀಲಂಕಾದ ಈ ಇಬ್ಬರು ಆಟಗಾರರು ಬಯೋಬಬಲ್​ ನಿಯಮ ಉಲ್ಲಂಘಿಸಿ ನೈಟ್​​ಔಟ್​ಗೆ ಹೋಗಿದ್ದಾರೆ. ಮೆಂಡಿಸ್​ ಕೈಯಲ್ಲಿ ಬಿಳಿ ಬಣ್ಣದ ಸಿಗರೇಟ್​ ಮಾದರಿಯ ವಸ್ತು ಇರೋದನ್ನ ಕಾಣಬಹುದಾಗಿದೆ.

ಈ ಸಂಬಂಧ ಶ್ರೀಲಂಕಾ ಕ್ರಿಕೆಟ್​ ಮಂಡಳಿ ತನಿಖೆ ನಡೆಸುತ್ತಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಶಮ್ಮಿ ಸಿವ ಹೇಳಿದ್ದಾರೆ. ಶ್ರೀಲಂಕಾ ಟೀಂ ಮ್ಯಾನೇಜರ್​ ಮನುಜಾ ಕರಿಯಪ್ಪೆರುಮಾ ವಿಚಾರವನ್ನ ದೃಢೀಕರಿಸಿದ್ದಾರೆ.