Wednesday, 11th December 2024

ಡಬರ್ ಹೆಡ್ಡರ್ ಪಂದ್ಯ: ಆರ್‌ಸಿಬಿಗೆ ಆರ್‌ಆರ್‌, ಡೆಲ್ಲಿಗೆ ಕೆಕೆಆರ್‌ ಎದುರಾಳಿ

ಅಬುದಾಬಿ/ಶಾರ್ಜಾ: ಐಪಿಎಲ್ ಟೂರ್ನಿಯ ಮೊದಲ ಡಬರ್ ಹೆಡ್ಡರ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಜಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ರಾಯಲ್ಸ್ ತಂಡದ ಸವಾಲನ್ನು ಎದುರಿಸಲಿದೆ. ಇಂದು ನಡೆಯುವ ಎರಡು ಪಂದ್ಯಗಳ ಪೈಕಿ ಆರ್‌ಸಿಬಿ ಹಾಗೂ ಆರ್‌ಆರ್‌ ನಡುವಿನ ಪಂದ್ಯ ಮಧ್ಯಾಹ್ನ ನಡೆಯಲಿದೆ. ಮಧ್ಯಾಹ್ನ 3:30 ರಿಂದ ಈ ಪಂದ್ಯ ಆರಂಭವಾಗಲಿದೆ.

ಕೊಹ್ಲಿ ನೇತೃತ್ವದ ಆರ್‌ಸಿಬಿ ಕಳೆದ ಪಂದ್ಯದಲ್ಲಿ ಮುಂಬೈ ತಂಡವನ್ನು ಎದುರಿಸಿತ್ತು. ಈ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾದ ಬಳಿಕ ಸೂಪರ್ ಓವರ್‌ನಲ್ಲಿ ಆರ್‌ಸಿಬಿ ಗೆದ್ದು ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆರ್‌ಸಿಬಿ ತಂಡದಲ್ಲಿ ಫಿಂಚ್, ಪಡಿಕ್ಕಲ್, ಎಬಿ ಡಿಲಿಯರ್ಸ್ ಅದ್ಭುತ ಫಾರ್ಮ್‌ನಲ್ಲಿರುವುದು ಕಳೆದ ಪಂದ್ಯದಲ್ಲೂ ಸಾಬೀತಾಯಿತು. ಆದರೆ ವಿರಾಟ್ ಕೊಹ್ಲಿ ಮಿಂಚದಿರುವುದು ತಂಡದ ಪಾಲಿಗೆ ಹಿನ್ನೆಡೆಯಾಗಿದೆ.

ಇನ್ನು ರಾಜಸ್ಥಾನ್ ರಾಯಲ್ಸ್ ಮೊದಲ ಎರಡು ಪಂದ್ಯಗಳನ್ನು ಶಾರ್ಜಾ ಕ್ರಿಡಾಂಗಣದಲ್ಲಿ ಆಡಿ ಭರ್ಜರಿ ಬ್ಯಾಟಿಂಗ್ ಮೂಲಕ ಟೂರ್ನಿಯಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ದುಬೈ ಕ್ರೀಡಾಂಗಣದಲ್ಲಿ ಕೆಕೆಆರ್ ವಿರುದ್ಧ ಬ್ಯಾಟಿಂಗ್‌ ಮಾಡಲು ತಿಣುಕಾ ಡಿತು. ಅಬುಧಾಬಿಯಲ್ಲಿ ಇಂದಿನ ಪಂದ್ಯ ನಡೆಯಲಿದೆ.

ಸಂಭಾವ್ಯ ತಂಡ ಇಂತಿದೆ.

ರಾಯಲ್ ಚಾಲೆಂಜರ್ಸ್‌ ಬೆಂಗಳೂರು: ಆರೋನ್ ಫಿಂಚ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ(ನಾ), ಎಬಿ ಡಿವಿಲಿಯರ್ಸ್ (ವಿಕೆಟ್ ಕೀಪರ್), ಗುರ್ಕೀರತ್ ಸಿಂಗ್ ಮನ್, ಶಿವಮ್ ದುಬೆ, ವಾಷಿಂಗ್ಟನ್ ಸುಂದರ್, ಇಸುರು ಉದಾನಾ, ನವದೀಪ್ ಸೈನಿ, ಆಡಮ್ ಜಂಪಾ, ಯುಜ್ವೇಂದ್ರ ಚಾಹಲ್.

ರಾಜಸ್ತಾನ್ ರಾಯಲ್ಸ್: ಜೋಸ್ ಬಟ್ಲರ್, ಸ್ಟೀವ್ ಸ್ಮಿತ್(ನಾ), ಸಂಜು ಸ್ಯಾಮ್ಸನ್(ಕೀ), ರಾಬಿನ್ ಉತ್ತಪ್ಪ, ಮನನ್ ವೊಹ್ರಾ, ರಾಹುಲ್ ತಿವಾಟಿಯಾ, ಟಾಮ್ ಕರ್ರನ್, ಮಾಯಾಂಕ್ ಮಾರ್ಕಂಡೆ, ಕಾರ್ತಿಕ್ ತ್ಯಾಗಿ / ಆಕಾಶ್ ಸಿಂಗ್, ಜೋಫ್ರಾ ಆರ್ಚರ್, ಅಂಕಿತ್ ರಾಜ್‌ಪೂತ್