Friday, 13th December 2024

ಡ್ರಾಪ್‌ ಆಯ್ತು ಎರಡು ಕ್ಯಾಚುಗಳು: ಟ್ರೋಲ್‌ ಆದ ಪಂತ್‌

ಸಿಡ್ನಿ: ಟೀಮ್ ಇಂಡಿಯಾದ ವಿಕೆಟ್-ಕೀಪರ್ ರಿಷಭ್ ಪಂತ್ ಆಸ್ಟ್ರೇಲಿಯದ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ವಿಲ್ ಪುಕೋವ್ ಸ್ಕಿ ನೀಡಿದ್ದ ಎರಡು ಕ್ಯಾಚ್ ಗಳನ್ನು ಕೈಚೆಲ್ಲಿದ್ದಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ.

ರವಿಚಂದ್ರನ್ ಅಶ್ವಿನ್ ಬೌಲಿಂಗ್ ನಲ್ಲಿ ಕ್ಯಾಚ್ ಕೈಬಿಟ್ಟಿದ್ದ ರಿಷಭ್ 25ನೇ ಓವರ್ ನಲ್ಲಿ ಮುಹಮ್ಮದ್ ಸಿರಾಜ್ ಬೌಲಿಂಗ್ ನಲ್ಲಿ ಆಸ್ಟ್ರೇಲಿಯದ ಆರಂಭಿಕ ಆಟಗಾರನನ್ನು ಔಟ್ ಮಾಡುವ ಮತ್ತೊಂದು ಅವಕಾಶ ಕೈಚೆಲ್ಲಿದರು.

23ರ ವಯಸ್ಸಿನ ಪಂತ್ ಬದಲಿಗೆ ವೃದ್ದಿಮಾನ್ ಸಹಾಗೆ ಮತ್ತೆ ಅವಕಾಶ ನೀಡ ಬೇಕೆಂಬ ಒತ್ತಾಯ ಕೇಳಿಬಂದಿದೆ.

ಭಾರತ-ಆಸ್ಟ್ರೇಲಿಯ ಸರಣಿಗಳ ವೇಳೆ ಸುಮಾರು 2 ಡಜನ್ ಕ್ಯಾಚ್ ಗಳನ್ನು ಕೈಚೆಲ್ಲಲಾಗಿದೆ. ಸಿಡ್ನಿಯಲ್ಲಿ ಪಂತ್ ಅವರು ಎರಡು ಸುಲಭ ಕ್ಯಾಚ್ ಬಿಟ್ಟಿ ದ್ದಾರೆ. ಅಡಿಲೇಡ್ ಹಾಗೂ ಮೆಲ್ಬೋರ್ನ್ ಟೆಸ್ಟ್ ನಲ್ಲೂ ಹಲವು ಅವಕಾಶ ವನ್ನು ಕೈಬಿಡಲಾಗಿತ್ತು ಎಂದು ಕ್ರಿಕೆಟ್ ಅಭಿಮಾನಿಯೊಬ್ಬ ಪ್ರತಿಕ್ರಿಯಿಸಿದ್ದಾನೆ.