Tuesday, 10th December 2024

ಆಂಗ್ಲರಿಗೆ ಬಿಗ್‌ ಶಾಕ್: ಸ್ಟೋಕ್ಸ್‌, ಲಾರೆನ್ಸ್ ವಿಕೆಟ್‌ ಪತನ

ಚೆನ್ನೈ: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ನ ನಾಲ್ಕನೇ ದಿನದಾಟದಲ್ಲಿ ಭಾರತೀಯ ಬೌಲರ್ ಗಳು ಆಂಗ್ಲರಿಗೆ ಶಾಕ್ ನೀಡಿದ್ದಾರೆ. ಡೇನಿಯಲ್ ಲಾರೆನ್ಸ್ ಮತ್ತು ಬೆನ್ ಸ್ಟೋಕ್ಸ್ ವಿಕೆಟ್‌ ಉರುಳಿದೆ.

4ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದ ಲಾರೆನ್ಸ್ಅಶ್ವಿನ್ ಎಸೆದ ಮೊದಲ ಎಸೆತದಲ್ಲೇ ಔಟ್ ಆದರು. ಬಳಿಕ ನಾಯಕ ಜೋ ರೂಟ್ ಜೊತೆಗೂಡಿದ ಬೆನ್ ಸ್ಟೋಕ್ಸ್ ಕ್ರೀಸ್ ನಲ್ಲಿ ಗಟ್ಟಿಯಾಗಿ ನೆಲೆಯೂರುವ ಪ್ರಯತ್ನ ಮಾಡಿದರು. ಆದರೆ ಅಶ್ವಿನ್ 8 ರನ್ ಗಳಿಸಿದ್ದ ಬೆನ್ ಸ್ಟೋಕ್ಸ್ ರನ್ನು ಔಟ್ ಮಾಡಿದರು. ಅಶ್ವಿನ್ ಎಸೆತವನ್ನು ತಪ್ಪಾಗಿ ಆರ್ಥೈಸಿಕೊಂಡ ಬೆನ್ ಡಿಫೆಂಡ್ ಆಡಲು ಯತ್ನಿಸಿದರು. ಈ ವೇಳೆ ಬ್ಯಾಟ್ ನ ಅಂಚನ್ನು ಸವರಿ ಕೊಂಡು ಹೋದ ಚೆಂಡು ನೇರವಾಗಿ ಸ್ಲಿಪ್ ನಲ್ಲಿದ್ದ ಕೊಹ್ಲಿ ಕೈ ಸೇರಿತು.

ಇದೀಗ ಒಲ್ಲಿಪೋಪ್ ಕ್ರೀಸ್ ಗೆ ಆಗಮಿಸಿದ್ದು, ಜೋರೂಟ್ ಜೊತೆ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಭಾರತದ ಪರ ಅಶ್ವಿನ್ 3 ವಿಕೆಟ್ ಕಬಳಿಸಿದ್ದು, ಅಕ್ಷರ್ ಪಟೇಲ್ 2 ವಿಕೆಟ್ ಪಡೆದಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ ಇಂಗ್ಲೆಂಡ್ ತಂಡ 5 ವಿಕೆಟ್ ನಷ್ಟಕ್ಕೆ 91ರನ್ ಗಳಿಸಿದೆ.