Wednesday, 18th September 2024

ಆಂಗ್ಲರಿಗೆ 287 ರನ್‌ ಟಾರ್ಗೆಟ್‌

ಅಹಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಭಾಗವಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ.

ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ವಿಶ್ವಕಪ್ ಅಭಿಯಾನದ 36ನೇ ಪಂದ್ಯ ಇದಾಗಿದ್ದು ಅಹ್ಮದಾಬಾದ್​​ನ ನರೇಂದ್ರ ಮೋದಿ ಮೈದಾನದ ಆತಿಥ್ಯ ವಹಿಸಿಕೊಂಡಿದೆ.

ಇತ್ತೀಚಿನ ವರದಿ ಪ್ರಕಾರ, ಆಸೀಸ್‌ ತಂಡ ಮಾರ್ನಸ್‌ ಅವರ ಅರ್ಧಶತಕದ ನೆರವಿನಿಂದ 49.3 ಓವರಿನಲ್ಲಿ 286 ರನ್‌ ಗಳಿಸಲಷ್ಟೇ ಶಕ್ತವಾಗಿದೆ.

ಮಾಜಿ ನಾಯಕ ಸ್ಮಿತ್ 44, ಗ್ರೀನ್ 47, ಮಾರ್ಕಸ್‌ 35 ಹಾಗೂ ಸ್ಪಿನ್ನರ್‌ ಜಂಪಾ 29 ಗಳಿಸಿದರು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ ನಾಲ್ಕು ವಿಕೆಟ್ ಕಿತ್ತರು.

ಆಸ್ಟ್ರೇಲಿಯಾ ಆಡಿರುವ 6 ಪಂದ್ಯಗಳಲ್ಲಿ 2 ಸೋತರೆ, 4 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೂರರ ಸ್ಥಾನ ನಡೆದಿದೆ. ಆದರೆ, ಹಾಲಿ ಚಾಂಪಿ ಯನ್​ ಇಂಗ್ಲೆಂಡ್ ಈ ಬಾರಿಯ ಕಳಪೆ ಆಟದಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿದುಕೊಂಡಿದೆ. ಸೆಮಿಯಿಂದ ಭಾಗಶಃ ಹೊರಬಿದ್ದಿರುವ ಆಂಗ್ಲರು, ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ನೇರಪ್ರವೇಶ ಗಿಟ್ಟಿಸಿಕೊಳ್ಳುವ ಒತ್ತಡದಲ್ಲಿದೆ.

ಇಂಗ್ಲೆಂಡ್ ತಂಡ ಯಾವುದೇ ಬದಲಾವಣೆ ಇಲ್ಲದೇ ಕಣಕ್ಕಿಳಿದರೆ, ಆಸೀಸ್ ತಂಡದಲ್ಲಿ ಎರಡು ಬದಲಾವಣೆ ಸಹಿತ ಕ್ರೀಸ್​ಗೆ ಇಳಿದಿದೆ. ಗಾಯದಿಂದ ಗ್ಲೆನ್ ಮ್ಯಾಕ್ಸ್​ವೆಲ್ ಮತ್ತು ವೈಯಕ್ತಿಕ ಕಾರಣದಿಂದ ತವರಿಗೆ ಮರಳಿರುವ ಮಿಚೆಲ್ ಮಾರ್ಷ್ ಇಂದಿನ ಪಂದದಿಂದ ಹೊರಗುಳಿದಿದ್ದಾರೆ.

ಆಡುವ 11ರ ಬಳಗ ಹೀಗಿದೆ.

ಇಂಗ್ಲೆಂಡ್ (ಪ್ಲೇಯಿಂಗ್ XI): ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್(ವಿಕೆಟ್​ ಕೀಪರ್​/ನಾಯಕ) ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಆದಿಲ್ ರಶೀದ್, ಮಾರ್ಕ್ ವುಡ್.

ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಜೋಶ್ ಇಂಗ್ಲಿಸ್ (ವಿಕೆಟ್​ ಕೀಪರ್​), ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಸ್ಟೊಯಿನಿಸ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್.

Leave a Reply

Your email address will not be published. Required fields are marked *