Thursday, 3rd October 2024

ಐವರು ಭಾರತೀಯ ಕ್ರಿಕೆಟಿಗರಿಗೆ ಆಸೀಸ್‌ ನಾಡಿದಲ್ಲಿ ಐಸೋಲೇಷನ್‌

ಮೆಲ್ಬರ್ನ್‌: ಐವರು ಭಾರತೀಯ ಕ್ರಿಕೆಟಿಗರನ್ನು ಪ್ರತ್ಯೇಕತಾವಾಗಿ ಇರಿಸಲಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಶನಿವಾರ ಹೇಳಿದೆ.

ರೋಹಿತ್ ಶರ್ಮಾ, ರಿಷಭ್ ಪಂತ್, ಶುಭ್ಮನ್ ಗಿಲ್, ಪೃಥ್ವಿ ಶಾ ಮತ್ತು ನವದೀಪ್ ಸೈನಿ ರನ್ನ ಭಾರತ ಮತ್ತು ಆಸ್ಟ್ರೇಲಿಯಾ ತಂಡ ಗಳಿಂದ ಬೇರ್ಪಡಿಸಲಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಎಲ್ಲಾ ಸದಸ್ಯರ ಸುರಕ್ಷತೆಯನ್ನ ಖಾತ್ರಿಪಡಿಸಲು ಈಗಲೂ ಕಠಿಣ ನಿಯಮಾವಳಿಗಳನ್ನ ಜಾರಿಗೆ ತರಲಾಗುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

‘ಆಸ್ಟ್ರೇಲಿಯಾ ಮತ್ತು ಭಾರತೀಯ ವೈದ್ಯಕೀಯ ತಂಡಗಳ ಸಲಹೆಯ ಮೇರೆಗೆ ಈ ಆಟಗಾರರನ್ನ ಮುಂಜಾಗ್ರತಾ ಕ್ರಮವಾಗಿ ಪ್ರತ್ಯೇಕಗೊಳಿಸಲಾಗಿದೆ. ಪ್ರಯಾಣ ಮಾಡುವಾಗ ಮತ್ತು ತರಬೇತಿ ಸ್ಥಳದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಆಟಗಾರರನ್ನ ಬೇರ್ಪಡಿಸುವುದನ್ನು ಒಳಗೊಂಡಿರುತ್ತದೆ.