Wednesday, 11th December 2024

ಫುಟ್‌ಬಾಲ್‌ ಆಟಗಾರ ಹಕೀಮ್‌ ‘ಸಾಬ್‌’ ಸೈಯ್ಯದ್‌ ಶಾಹಿದ್‌ ಹಕೀಂ ನಿಧನ

ನವದೆಹಲಿ: ರೋಮ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಭಾರತ ಫುಟ್‌ಬಾಲ್‌ ತಂಡದ ಆಟಗಾರ ಸೈಯ್ಯದ್‌ ಶಾಹಿದ್‌ ಹಕೀಂ (82) ಕಲಬುರ್ಗಿಯ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು.

ಹಕೀಮ್‌ ‘ಸಾಬ್‌’ ಎಂದೇ ಪರಿಚಿತರಾಗಿದ್ದ ಅವರು ಇತ್ತೀಚೆಗಷ್ಟೇ ಪಾರ್ಶ್ವವಾಯುವಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ರಾಷ್ಟ್ರೀಯ ತರಬೇತುದಾರರೂ ಆಗಿದ್ದರು. ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರೂ ಆಗಿದ್ದ ಅವರು, 1982ರ ದೆಹಲಿ ಏಷ್ಯಾಡ್‌ನಲ್ಲಿ ಭಾಗವಹಿಸಿದ್ದ ಭಾರತ ತಂಡಕ್ಕೆ ಅಸಿಸ್ಟೆಂಟ್‌ ಕೋಚ್‌ ಆಗಿದ್ದರು. ಮರ್ಡೇಕಾ ಫುಟ್‌ಬಾಲ್‌ ಟೂರ್ನಿಯಲ್ಲಿ ಆಡಿದ್ದ ತಂಡಕ್ಕೆ ಅವರು ಪೂರ್ಣಪ್ರಮಾಣದ ತರಬೇತುದಾರರಾಗಿದ್ದರು.

ಭಾರತೀಯ ವಾಯುಪಡೆಯಲ್ಲಿ ಸ್ಕ್ವಾಡ್ರನ್‌ ಲೀಡರ್‌ ಆಗಿ ಕಾರ್ಯನಿರ್ವಹಿಸಿದ್ದ ಅವರು ಭಾರತ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 1960ರ ಒಲಿಂಪಿಕ್ಸ್‌ನಲ್ಲಿ ತಂಡದಲ್ಲಿದ್ದರೂ ಕಣಕ್ಕಿಳಿಯುವ ಅವಕಾಶ ಸಿಗದಿದ್ದುದು. ಕಾಕತಾಳೀಯ ಎಂದರೆ ಆಗ ತಂಡದ ತರಬೇತುದಾರ ರಾಗಿದ್ದು, ಖ್ಯಾತ ಆಟಗಾರ ಸೈಯ್ಯದ್‌ ಅಬ್ದುಲ್‌ ರಹೀಂ.