Saturday, 14th December 2024

ಕ್ರಿಸ್ಟಿಯಾನೊ ರೊನಾಲ್ಡೊ ಯೂಟ್ಯೂಬ್ ಗೆ 10 ಲಕ್ಷ ಅಭಿಮಾನಿಗಳು ನೋಂದಣಿ

ಫುಟ್ಬಾಲ್ ನಲ್ಲಿ ದಾಖಲೆಗಳ ಮೇಲೆ ದಾಖಲೆ ಮಾಡುತ್ತಿರುವ ವಿಶ್ವದ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಯೂಟ್ಯೂಬ್ ಚಾನೆಲ್ ಗೆ ಚಾಲನೆ ನೀಡಿದ ಒಂದೇ ದಿನದಲ್ಲಿ 10 ಲಕ್ಷ ಸಬ್ ಸ್ಕ್ರೈಬರ್ ಪಡೆಯುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

ಪೋರ್ಚುಗಲ್ ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ UR Cristiano ಯೂಟ್ಯೂಬ್ ಚಾನೆಲ್ ಘೋಷಣೆ ಮಾಡಿದರು.

ಕಂಟೆಂಟ್ ಕ್ರಿಯೆಟರ್ ಆಗಿ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್ ಗೆ 10 ಲಕ್ಷಕ್ಕೂ ಅಧಿಕ ಅಭಿಮಾನಿಗಳು ನೋಂದಣಿ ಮಾಡಿದ್ದಾರೆ. ಈ ಮೂಲಕ ಅತ್ಯಂತ ವೇಗವಾಗಿ ಯೂಟ್ಯೂಬ್ ಚಾನೆಲ್ ಗೆ 10 ಲಕ್ಷ ಜನರು ಸಬ್ ಸ್ಕ್ರೈಬ್ ಆದ ಮೊದಲ ಚಾನೆಲ್ ಎಂಬ ವಿಶ್ವದಾಖಲೆಗೆ ಕ್ರಿಸ್ಟಿಯಾನೊ ರೊನಾಲ್ಡೊ ಚಾನೆಲ್ ಪಾತ್ರವಾಗಿದೆ.

ಯೂಟ್ಯೂಬ್ ಚಾನೆಲ್ ಆರಂಭಗೊಂಡ ಕೆಲವೇ ಗಂಟೆಗಳಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಹಾಗೂ ಅತ್ಯಂತ ವೇಗವಾಗಿ 10 ಲಕ್ಷ ಸಬ್ ಸ್ಕ್ರೈಬರ್ ಪಡೆದ ಎರಡು ವಿಶ್ವದಾಖಲೆಗಳನ್ನು ಕ್ರಿಸ್ಟಿಯಾನೊ ರೊನಾಲ್ಡೊ ಮಾಡಿದ್ದಾರೆ.

ಕ್ರಿಸ್ಟಿಯಾನೊ ರೊನಾಲ್ಡೊ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂನಲ್ಲಿ 170 ದಶಲಕ್ಷ ಹಾಗೂ ಎಕ್ಸ್ ನಲ್ಲಿ 112.5 ದಶಲಕ್ಷ ಫಾಲೋವರ್ಸ್ ಹೊಂದಿದ್ದು, ಇಷ್ಟು ದೊಡ್ಡ ಪ್ರಮಾಣದ ಫಾಲೋವರ್ಸ್ ಹೊಂದಿದ ಮತ್ತೊಬ್ಬ ಕ್ರೀಡಾಪಟು ಜಗತ್ತಿನಲ್ಲಿ ಇಲ್ಲ. ಇದೀಗ ಕ್ರಿಸ್ಟಿಯಾನೊ ರೊನಾಲ್ಡೊ ಪಾಲಿಗೆ ಯೂಟ್ಯೂಬ್ ಕೂಡ ಸೇರ್ಪಡೆ ಯಾಗಿದೆ.