ಅಬುಧಾಬಿ: ಸಲೀಸಾಗಿ ಸಿಕ್ಸರ್ ಹೊಡೆಯುವ ಗೇಲ್ ಮತ್ತೊಂದು ದಾಖಲೆಗೆ ಪಾತ್ರರಾಗಿದ್ದಾರೆ.
ಕ್ರೀಸಿಗೆ ಬಂದ ಕೂಡಲೇ, ಬ್ಯಾಟ್ ಎತ್ತಿದರೆ ಸಾಕು. ಅದು ಸಿಕ್ಸರ್ ಎಂತಲೇ ಅರ್ಥ. ಹೀಗೆಯೇ, ಟಿ20 ಯಲ್ಲಿ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಈವರೆಗೆ ಬರೋ ಬ್ಬರಿ ಒಂದು ಸಾವಿರ ಸಿಕ್ಸರ್ ಸಿಡಿಸಿದ್ದು ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
410 ಟಿ20 ಪಂದ್ಯಗಳನ್ನಾಡಿದ ಗೇಲ್ 13,572 ರನ್ ಗಳಿಸಿದ್ದಾರೆ. 22 ಶತಕ, 85 ಅರ್ಧಶತಕ ಸೇರಿವೆ. 1041 ಬೌಂಡರಿ, 1001 ಸಿಕ್ಟರ್ ಸಿಡಿಸಿದ್ದಾರೆ.
ಪ್ರಸಕ್ತ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿರುವ ಅವರು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 63 ಎಸೆತಗಳಲ್ಲಿ 99 ರನ್ ಗಳಿಸಿದ್ದಾರೆ.
690 ಸಿಕ್ಸರ್ ಸಿಡಿಸಿರುವ ವೆಸ್ಟ್ ಇಂಡೀಸ್ ನ ಕೀರನ್ ಪೊಲಾರ್ಡ್ ಟಿ20 ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಂ 485 ಸಿಕ್ಸರ್ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.