Wednesday, 11th December 2024

Vinesh Phogat : ಒಲಿಂಪಿಕ್ಸ್‌ ನಿರಾಸೆ ದೇವರು ನಿಮಗೆ ಕೊಟ್ಟ ಶಿಕ್ಷೆ; ವಿನೇಶ್ ವಿರುದ್ಧ ಕಿಡಿಕಾರಿದ ಬ್ರಿಜ್‌ಭೂಷಣ್‌ ಸಿಂಗ್‌

Vinesh Phogat

ನವದೆಹಲಿ: ಒಲಿಂಪಿಕ್ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರು ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾಗವಹಿಸಲು ಮೋಸ ಮಾಡಿದ್ದರು ಎಂದು ಮಾಜಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಆರೋಪಿಸಿದ್ದಾರೆ. ಅದಕ್ಕಾಗಿ ದೇವರು ಆಕೆಯನ್ನು ಶಿಕ್ಷಿಸಿದ್ದಾನೆ. ಪದಕ ಗೆಲ್ಲಲು ಸಾಧ್ಯವಾಗದೇ ಫೋಗಟ್ ನಿರಾಸೆ ಎದುರಿಸಿದರು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. . ” ಸ್ಪರ್ಧಿಯೊಬ್ಬರು ಒಂದೇ ದಿನದಲ್ಲಿ ಎರಡೆರಡು ತೂಕದ ವಿಭಾಗಗಳಲ್ಲಿ ಟ್ರಯಲ್ಸ್ ನೀಡಲು ಸಾಧ್ಯವೇ ಎಂಬುದು ನನ್ನ ಪ್ರಶ್ನೆಯಾಗಿದೆ. ತೂಕದ ನಂತರ ಟ್ರಯಲ್ಸ್‌ಗಳನ್ನು ಒಬ್ಬರಿಗಾಗಿ ಐದು ಗಂಟೆಗಳ ಕಾಲ ನಿಲ್ಲಿಸಬಹುದೇ. ಇವೆಲ್ಲವೂ ವಿನೇಶ್ ಮಾಡಿರುವ ಮೋಸ ಎಂದು ಸಿಂಗ್ ಕಿಡಿ ಕಾರಿದ್ದಾರೆ.

ನೀವು ನ್ಯಾಯಯುತವಾಗಿ ಕುಸ್ತಿ ಗೆಲ್ಲಲಿಲ್ಲ. ವಾಮ ಮಾರ್ಗದ ಮೂಲಕ ಅಲ್ಲಿಗೆ ಹೋಗಿದ್ದೀರಿ. ಅದಕ್ಕಾಗಿ ದೇವರು ನಿಮ್ಮನ್ನು ಶಿಕ್ಷಿಸಿದ್ದಾನೆ ಎಂದು ಮಾಜಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಅಧ್ಯಕ್ಷರು ಹೇಳಿದ್ದಾರೆ. ಹರಿಯಾಣ ವಿಧಾನಸಭಾ ಚುನಾವಣೆಗೆ ಜುಲಾನಾದಿಂದ ಫೋಗಟ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಸರಿಸಿದ ಒಂದು ದಿನದ ನಂತರ ಅವರ ವಿನೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ವಿನೇಶ್ ಒಲಿಂಪಿಕ್ಸ್‌ಗೆ ಹೋಗಲು ಅರ್ಹತೆಯೇ ಹೊಂದಿರಲಿಲ್ಲ ಎಂದು ಹೇಳಿದ ಭೂಷಣ್ “ಅವರು ಒಲಿಂಪಿಕ್ಸ್‌ನಲ್ಲಿ ಮತ್ತೊಬ್ಬಳು ಸ್ಪರ್ಧಿಯ ಅವಕಾಶ ಕಸಿದುಕೊಂಡಿದ್ದಾರೆ” ಎಂದು ಅವರು ಆರೋಪಿಸಿದರು. ಟ್ರಯಲ್ಸ್‌ನಲ್ಲಿ ತಮ್ಮನ್ನು ಸೋಲಿಸಿದ ಹುಡುಗಿಯ ಸ್ಥಾನವನ್ನು ಅವರು ಪಡೆದುಕೊಂಡಿದ್ದಾರೆ. ಗೊಂದಲ ಸೃಷ್ಟಿಸಿ ಒಲಿಂಪಿಕ್ಸ್‌ಗೆ ಹೋದಳು. ಅದಕ್ಕೆ ತಕ್ಕ ಶಾಸ್ತಿಯಾಗಿದೆ. ಆ ಅಗೌರವಕ್ಕೆ ಅವರು ಅರ್ಹರು ” ಎಂದು ಅವರು ಆರೋಪಿಸಿದರು.

ಬಜರಂಗ್ ಪೂನಿಯಾ ವಿರುದ್ಧವೂ ಕಿಡಿಕ ಕಾರಿದ ಅವರು ಟ್ರಯಲ್ಸ್ ಪೂರ್ಣಗೊಳಿಸದೆ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ ಎಂದು ಬಿಜೆಪಿ ನಾಯಕ ಆರೋಪಿಸಿದರು. “ಕ್ರೀಡಾ ಕ್ಷೇತ್ರದಲ್ಲಿ ಹರಿಯಾಣ ಭಾರತದ ಕಿರೀಟ. ಆದರೆ, ಅವರಿಬ್ಬರೂ ಸೇರಿ ಸುಮಾರು 2.5 ವರ್ಷಗಳ ಕಾಲ ಕುಸ್ತಿ ಚಟುವಟಿಕೆಗಳನ್ನು ನಿಲ್ಲಿಸಿದರು. ಬಜರಂಗ್ ಟ್ರಯಲ್ಸ್ ಇಲ್ಲದೆ ಏಷ್ಯನ್ ಗೇಮ್ಸ್ ಗೆ ಹೋದರು ಎಂಬುದು ನಿಜವಲ್ಲವೇ? ಕುಸ್ತಿಯಲ್ಲಿ ಪರಿಣಿತರಾದವರನ್ನು ನಾನು ಕೇಳಲು ಬಯಸುತ್ತೇನೆ” ಎಂದು ಭೂಷಣ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Vinesh Phogat: ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ರೈಲ್ವೆ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ವಿನೇಶ್ ಫೋಗಟ್

ಕಳೆದ ವರ್ಷ ಬ್ರಿಜ್ ಭೂಷಣ್ ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಫೋಗಟ್ ಮತ್ತು ಪುನಿಯಾ ಶುಕ್ರವಾರ ಕಾಂಗ್ರೆಸ್ ಸೇರುವ ಮೂಲಕ ತಮ್ಮ ರಾಜಕೀಯ ಪ್ರವೇಶ ಕಂಡುಕೊಂಡರು. ಫೋಗಟ್ ಅವರನ್ನು ಚುನಾವಣೆಗೆ ಕಣಕ್ಕಿಳಿಸಿದರೆ, ಪುನಿಯಾ ಅವರನ್ನು ಅಖಿಲ ಭಾರತ ಕಿಸಾನ್ ಕಾಂಗ್ರೆಸ್‌fನ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ವಿನೇಶ್ ಫೋಗಟ್ ಅವರನ್ನು “ಕಾಂಗ್ರೆಸ್‌ನ ಪಿತೂರಿಯ ಮುಖ” ಎಂದು ಕರೆದ ಭೂಷಣ್, ಕಾಂಗ್ರೆಸ್ ಮುಖಂಡ ದೀಪೇಂದರ್ ಹೂಡಾ ತಮ್ಮ ವಿರುದ್ಧ ರೂಪಿಸಿದ ಪಿತೂರಿಯ ಭಾಗವಾಗಿದ್ದರು ಎಂದು ಹೇಳಿದ್ದಾರೆ.

ಹೆಣ್ಣುಮಕ್ಕಳಿಗೆ ಅಗೌರವ ತೋರಿದ ತಪ್ಪಿತಸ್ಥರು ಬಜರಂಗ್ ಮತ್ತು ವಿನೇಶ್ ಮಾತ್ರ. ಸ್ಕ್ರಿಪ್ಟ್ ಬರೆದವರು ಭೂಪಿಂದರ್ ಹೂಡಾ ಅದಕ್ಕೆ ಜವಾಬ್ದಾರರು ಎಂದು ಹೇಳಿದರು. ಪಕ್ಷ ಕೇಳಿದರೆ ಹರಿಯಾಣದಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ಭಾಗವಹಿಸುವುದಾಗಿ ಭೂಷಣ್ ಹೇಳಿದ್ದಾರೆ. ಹರಿಯಾಣದಲ್ಲಿ ಯಾವುದೇ ಬಿಜೆಪಿ ಅಭ್ಯರ್ಥಿ ಫೋಗಟ್ ಅವರನ್ನು ಸೋಲಿಸುವುದು ಖಚಿತ ಎಂದು ಅವರು ಹೇಳಿದ್ದಾರೆ. ಕುಸ್ತಿಪಟುಗಳ ಪ್ರತಿಭಟನೆಯು ಬಿಜೆಪಿಯನ್ನು ಗುರಿಯಾಗಿಸಲು ಕಾಂಗ್ರೆಸ್ನ ಪಿತೂರಿಯಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.