Saturday, 14th December 2024

ಗೌತಮ್ ಗಂಭೀರ್ ಕೊರೋನಾ ವರದಿ ನೆಗೆಟಿವ್

ನವದೆಹಲಿ : ಟೀಂ ಇಂಡಿಯಾ ಮಾಜಿ ಆಟಗಾರ, ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರ ಮನೆಯಲ್ಲಿನ ಸದಸ್ಯ ರೊಬ್ಬರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಇದರಿಂದಾಗಿ ಅವರ ಸಂಪರ್ಕದಲ್ಲಿದ್ದ ಗೌತಮ್ ಗಂಭೀರ್ ಅವರು ಸ್ವಯಂ ಐಸೋಲೇಷನ್ ಆಗಿದ್ದರು. ಅವರು ಕೂಡ ಕೊರೋನಾ ಸೋಂಕಿನ ಪರೀಕ್ಷೆಗೆ ಒಳಗಾಗಿದ್ದು, ಅವರ ಕೋವಿಡ್- 19 ವರದಿ ನೆಗೆಟಿವ್ ಎಂಬುದಾಗಿ ತಿಳಿದು ಬಂದಿದೆ.

ಈ ಕುರಿತಂತೆ ಟ್ವಿಟ್ ಮಾಡಿರುವ ಅವರು, ನನ್ನ ಕೊರೋನಾ ಪರೀಕ್ಷೆಯ ವರದಿ ಬಂದಿದ್ದು, ನನಗೆ ಕೋವಿಡ್-19 ನೆಗೆಟಿವ್ ಎಂಬುದಾಗಿ ತಿಳಿದು ಬಂದಿದೆ. ನಿಮ್ಮೆಲ್ಲರ ಹಾರೈಕೆ, ಆರ್ಶೀರ್ವಾದಕ್ಕೆ ಧನ್ಯವಾದಗಳು ಎಂಬುದಾಗಿ ತಿಳಿಸಿದ್ದಾರೆ.