Friday, 13th December 2024

Happy Birthday Virat Kohli: 36ನೇ ವರ್ಷಕ್ಕೆ ಕಾಲಿಟ್ಟ ಕಿಂಗ್‌​ ಕೊಹ್ಲಿ

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ, ದಾಖಲೆಗಳ ಸರದಾರ, ಕಿಂಗ್​ ಖ್ಯಾತಿಯ(king kohli) ವಿರಾಟ್​ ಕೊಹ್ಲಿ(Virat Kohli) ಅವರಿಗೆ ಇಂದು(ನವೆಂಬರ್​ 5) 36ನೇ ವರ್ಷದ ಹುಟ್ಟುಹಬ್ಬದ(Virat Kohli Birthday) ಸಂಭ್ರಮ. 16 ವರ್ಷಗಳ ಕ್ರಿಕೆಟ್​ ವೃತ್ತಿ ಬದುಕು ಪೂರೈಸಿರುವ ಅವರು(virat kohli cricket journey) ತಮ್ಮ ಈ ಕ್ರಿಕೆಟ್​ ಬಾಳ್ವೆಯಲ್ಲಿ ಅನೇಕ ದಿಗ್ಗಜ ಕ್ರಿಕೆಟಿಗರ ದಾಖಲೆಗಳನ್ನು ಮುರಿದಿದ್ದಾರೆ. ಇನ್ನೂ ಕೂಡ ಕೆಲ ವರ್ಷಗಳು ಭಾರತ ತಂಡದ ಪರ ಆಡಲಿ ಎಂಬುದು ಅವರ ಅಭಿಮಾನಿಗಳ ಆಶಯವಾಗಿದೆ.  ಅವರ ಜನ್ಮದಿನಕ್ಕೆ(Happy Birthday Virat Kohli) ಅನೇಕ ಹಾಲಿ ಮತ್ತು ಮಾಜಿ ಆಟಗಾರರು ಶುಭಾಶಯ ಕೋರಿದ್ದಾರೆ.

ನವೆಂಬರ್​ 5, 1988ರಲ್ಲಿ ದೆಹಲಿಯಲ್ಲಿ ಜನಿಸಿದ ವಿರಾಟ್​ ಕೊಹ್ಲಿ ಅವರು ತಮ್ಮ ಶಾಲಾ ದಿನಗಳ ಅವಧಿಯಲ್ಲೇ ಉತ್ತಮ ಕ್ರಿಕೆಟ್​ ಪಟುವಾಗಿದ್ದರು. ಕ್ರಿಕೆಟ್​ನಲ್ಲಿ ಹೆಚ್ಚು ಗಮನ ಹರಿಸಿದ ಕಾರಣ ಅವರು ವಿದ್ಯಾಭ್ಯಾಸವನ್ನು 12ನೇ ತರಗತಿಗೆ ನಿಲ್ಲಿಸಿದರು. ಕೊಹ್ಲಿ ಆತ್ಮವಿಶ್ವಾಸ, ಒತ್ತಡದ ಸಂದರ್ಭ ಎದುರಿಸೋ ಸಮಾರ್ಥ್ಯ, ಕಠಿಣ ಅಭ್ಯಾಸ ಕೊಹ್ಲಿಯನ್ನ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.

ಇದನ್ನೂ ಓದಿ Virat Kohli: ಹರಾಜಿನಲ್ಲಿ ಬಲಿಷ್ಠ ತಂಡ ಕಟ್ಟುವ ಸುಳಿವು ಬಿಟ್ಟುಕೊಟ್ಟ ಕೊಹ್ಲಿ

ಲಂಕಾ ವಿರುದ್ಧ ಪದಾರ್ಪಣೆ

ವಿರಾಟ್​ ಕೊಹ್ಲಿ ಅವರು ಆಗಸ್ಟ್​ 18, 2008ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದರು. ಆಗ ತಾನೆ ಅಂಡರ್​-19 ವಿಶ್ವಕಪ್​ ಗೆದ್ದಿದ್ದ ಅವರಿಗೆ ಸಚಿನ್​ ತೆಂಡೂಲ್ಕರ್​ ಮತ್ತು ವೀರೇಂದ್ರ ಸೆಹವಾಗ್​ ಅವರ ಅನುಪಸ್ಥಿತಿಯಲ್ಲಿ ಆರಂಭಿಕಾಗಿ ಆಡುವ ಅವಕಾಶ ನೀಡಲಾಗಿತ್ತು. ತಮ್ಮ ಚೊಚ್ಚಲ ಪಂದ್ಯದಲ್ಲಿ ಅವರು 12 ರನ್​ ಗಳಿಸಿ ನುವಾನ್ ಕುಲಶೇಖರ ಅವರಿಗೆ ವಿಕೆಟ್​ ಒಪ್ಪಿಸಿದ್ದರು. ಆದರೆ ನಾಲ್ಕನೇ ಪಂದ್ಯದಲ್ಲಿ 54 ರನ್​ ಗಳಿಸಿ ತಮ್ಮ ಚೊಚ್ಚಲ ಅರ್ಧಶತಕವನ್ನು ಬಾರಿಸಿದ್ದರು. ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ವೇಳೆ ಕೇವಲ 8 ಲಿಸ್ಟ್​ ಎ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದರು.

https://twitter.com/RCBTweets/status/1853610686867529950

ಹಲವು ಪ್ರಶಸ್ತಿಗಳ ಒಡೆಯ

ಕೊಹ್ಲಿ 2012, 2017, 2018ರಲ್ಲಿ ಐಸಿಸಿ ವರ್ಷದ ಏಕದಿನ ಆಟಗಾರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2018ರಲ್ಲಿ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಗೂ ಭಾಜನರಾಗಿದ್ದರು. ಏತನ್ಮಧ್ಯೆ, ಅವರು 2017 ಮತ್ತು 2018 ರಲ್ಲಿ ಐಸಿಸಿ ವರ್ಷದ ಕ್ರಿಕೆಟ್​ ಸಾಧನೆಗಾಗಿ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಸಾಧನೆ

538 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕೊಹ್ಲಿ ಈ ಹಾದಿಯಲ್ಲಿ 27,134 ರನ್‌ ಬಾರಿಸಿದ್ದಾರೆ. 2011ರ ಏಕದಿನ ವಿಶ್ವಕಪ್‌, 2013 ಐಸಿಸಿ ಚಾಂಪಿಯನ್ಸ್‌ ಟ್ರೋಫಿ, 2024ರ ಟಿ20ವಿಶ್ವ ಕಪ್‌ ತಂಡದ ಸದಸ್ಯನಾಗಿದ್ದರು. ಏಕದಿನದಲ್ಲಿ 13906 ರನ್‌, 50 ಶತಕ, ಟೆಸ್ಟ್‌ನಲ್ಲಿ 9040 ರನ್‌, 29 ಶತಕ, ಟಿ20ಯಲ್ಲಿ 4188 ರನ್‌, 1 ಶತಕ ಬಾರಿಸಿದ್ದಾರೆ.