Saturday, 12th October 2024

ಟಿ-20 ವಿಶ್ವಕಪ್ ಗೂ ಮುನ್ನವೇ ಪಾಕ್ ಎದುರಿನ ಭಾರತ ಐತಿಹಾಸಿಕ ಗೆಲುವು ನೆನಪಿಸಿದ #Baapbaaphotahai ಟ್ರೆಂಡ್

ಬೆಂಗಳೂರು : ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಮೊದಲ ಟಿ 20 ವಿಶ್ವಕಪ್‌ನ ಫೈನಲ್‌ನಲ್ಲಿ ಎಂಎಸ್ ಧೋನಿ ನೇತೃತ್ವದ ಯುವ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿದ ಐತಿಹಾಸಿಕ ದಿನವನ್ನು ಕ್ರಿಕೆಟ್ ಪ್ರೇಮಿಗಳು ನೆನಪಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅದರ ಹೊಳೆಯೇ ಹರಿದಿದೆ.

ಸುಮಾರು 14 ವರ್ಷಗಳ ಹಿಂದೆ ಅಂದರೆ 2007 ಸೆಪ್ಟೆಂಬರ್ 24ರಂದು ಭಾರತ ಕ್ರಿಕೆಟ್ (Team India) ಇತಿಹಾಸವನ್ನು ಸುವರ್ಣಾಕ್ಷರದಲ್ಲಿ ಬರೆದಿಟ್ಟ ದಿನ. ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ 5 ರನ್‌ಗಳ ರೋಚಕ ಗೆಲುವನ್ನಾಚರಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಭಾರತದಿಂದ ಗೌತಮ್ ಗಂಭೀರ್ 75, ಯೂಸೂಫ್ ಪಠಾಣ್ 15, ರಾಬಿನ್ ಉತ್ತಪ್ಪ 8, ಯುವರಾಜ್ ಸಿಂಗ್ 14, ಎಂಎಸ್ ಧೋನಿ 4, ರೋಹಿತ್ ಶರ್ಮಾ 30, ಇರ್ಫಾನ್ ಪಠಾಣ್ 3 ರನ್‌ ಸೇರಿಸಿದ್ದರು.

ಎಂಎಸ್ ಧೋನಿ ಯುಗ ಆರಂಭವಾಗಿದ್ದೂ ಈ ಆವತ್ತಿನಿಂದಲೇ. ಪ್ರತಿಭಾವಂತ ಇರ್ಫಾನ್ ಪಠಾಣ್ ತನ್ನ ಮ್ಯಾಜಿಕ್ 3/16 ಸಾಧನೆಯೊಂದಿಗೆ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಹೊರಹೊಮ್ಮಿದರು.

ಈ ವರ್ಷದ ಟಿ 20 ವಿಶ್ವಕಪ್ ಕೂಡ ಮತ್ತೊಂದು ರೋಚಕತೆಗೆ ನಾಂದಿ ಹಾಡಲಿದೆ. ಏಕೆಂದರೆ ಭಾರತ ಮತ್ತು ಪಾಕಿಸ್ತಾನ ಅಕ್ಟೋಬರ್ 24 ರಂದು ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಖಂಡಿತವಾಗಿಯೂ ಇದು ಸಹ ಭರ್ಜರಿ ಪಂದ್ಯವಾಗಿರಿಲಿದೆ.

ಭಾರತ- ಪಾಕ್ ಮುಖಾಮುಖಿಯಾದ 12 ವಿಶ್ವಕಪ್ ಗಳಲ್ಲಿ (ಟಿ 20 ಮತ್ತು 50 ಓವರ್‌ಗಳ ಪಂದ್ಯ) ಇದು ವರೆಗೂ ಭಾರತವೇ ಗೆಲುವು ಸಾಧಿಸಿದೆ. ಇದನ್ನು ನೋಡಿಯೇ ಮೈಕ್ರೊಬ್ಲಾಗಿಂಗ್ ಆಪ್ ‘ಕೂ’ ವಿನಲ್ಲಿ #Baapbaaphotahai ಹ್ಯಾಶ್ಟ್ಯಾಗ್ ಟ್ರೆಂಡ್ ಆಗಿದೆ. ಪಾಕಿಸ್ತಾನದ ವಿರುದ್ಧ ಭಾರತೀಯ ತಂಡದ 13 ನೇ ವಿಶ್ವಕಪ್ ವಿಜಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಉತ್ಸಾಹದಿಂದ ಕಾಯುತ್ತಿದರೆ.

ಎಲ್ಲ ಕ್ರಿಕೆಟಿಗರೂ ಫಾರ್ಮ್ ನಲ್ಲಿ ಇದ್ದರು ಸಹ ಎಲ್ಲರ ಕ್ರಿಕೆಟ್ ಪ್ರೇಮಿಗಳ ಕಣ್ಣು ವಿರಾಟ್ ಕೊಹ್ಲಿ, ಎಂಎಸ್ ಧೋನಿ ಹಾಗು ರವಿಶಾಸ್ತ್ರಿ ಮೇಲೆ ಇರಲಿದೆ. ಏಕೆಂದರೆ. ಈ ವಿಶ್ವಕಪ್ ನಂತರ ಕೊಹ್ಲಿ ನಾಯಕ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಧೋನಿ ಮೆಂಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಮುಖ್ಯ ಕೋಚ್ ಸ್ಥಾನದಿಂದ ರವಿಶಾಸ್ತ್ರಿ ಕೆಳಗಿಳಿಯಲಿದ್ದು, ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಈ ಭಾರಿಯ ಟಿ20 ವಿಶ್ವಕಪ್ ಸಾಕಷ್ಟು ರೋಚಕಥೆಗಳಿಂದ ಕೂಡಿರಲಿದೆ ಎನ್ನಬಹುದು.