ನವದೆಹಲಿ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಕೇಸ್‌ನಲ್ಲಿ ಖುಲಾಸೆಗೊಂಡಿರುವ ಭಾರತದ ಒಲಿಂಪಿಕ್ ಹಾಕಿ ತಾರೆ ವರುಣ್ ಕುಮಾರ್(Varun Kumar) ಮತ್ತೆ ತಂಡಕ್ಕೆ ಮರಳಿದ್ದಾರೆ. ಇದೇ ತಿಂಗಳು 23 ಮತ್ತು 24 ರಂದು ವಿಶ್ವ ಚಾಂಪಿಯನ್ ಜರ್ಮನಿ(Hockey Test vs Germany) ವಿರುದ್ಧ ನಡೆಯಲಿರುವ ಹಾಕಿ ಸರಣಿಗೆ ಪ್ರಕಟಿಸಿದ ತಂಡದಲ್ಲಿ ವರುಣ್‌ಗೆ ಅವಕಾಶ ನೀಡಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಯುವತಿಯೊಬ್ಬಳು ವರುಣ್ ಮೇಲೆ ಅತ್ಯಾಚಾರ ಆರೋಪ ಮಾಡಿದ್ದರು. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿತ್ತು. ಸಾಮಾಜಿಕ ಜಾಲತಾಣದ ಮೂಲಕ ವರುಣ್ ಕುಮಾರ್ ಪರಿಚಯವಾಗಿತ್ತು. ಮನೆಯವರನ್ನು ಒಪ್ಪಿಸಿ ಮದುವೆಯಾಗುತ್ತೇನೆ ಅಲ್ಲಿಯವರೆಗೂ ಪ್ರೇಮಿಗಳಾಗಿ ಇರೋಣ ಎಂದು ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದ. ನನ್ನ ತಂದೆ ಮೃತಪಟ್ಟಾಗ ಮನೆ ಬಳಿ ಬಂದು ಸಾಂತ್ವನ ಹೇಳಿ ಹೋಗಿದ್ದ. ಆದರೆ ಈಗ ಸಂಪರ್ಕಕ್ಕೆ ಸಿಗದೇ ವಂಚಿಸುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಳು. ಸದ್ಯ ಈ ಕೇಸ್‌ನಿಂದ ವರಣ್ ಮುಕ್ತಗೊಂಡಿದ್ದಾರೆ.
ಇದನ್ನೂ ಓದಿ IND vs NZ: ರೋಹಿತ್ ನಿರ್ಧಾರ ಪ್ರಶ್ನಿಸಿದ ಮಂಜ್ರೇಕರ್
ಭಾರತ ತಂಡ
ಗೋಲ್‌ಕೀಪರ್‌ಗಳು: ಕ್ರಿಶನ್ ಬಹದ್ದೂರ್ ಪಾಠಕ್, ಸೂರಜ್ ಕರ್ಕೇರಾ.
ಡಿಫೆಂಡರ್ಸ್: ಜರ್ಮನ್ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಹರ್ಮನ್‌ಪ್ರೀತ್ ಸಿಂಗ್ (ನಾಯಕ), ವರುಣ್ ಕುಮಾರ್, ಸಂಜಯ್, ಸುಮಿತ್, ನಿಲಮ್ ಸಂಜೀಪ್ ಕ್ಸೆಸ್.
ಮಿಡ್‌ಫೀಲ್ಡರ್‌ಗಳು: ಮನ್‌ಪ್ರೀತ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್ (ಉಪನಾಯಕ), ವಿಷ್ಣು ಕಾಂತ್ ಸಿಂಗ್, ನೀಲಕಂಠ ಶರ್ಮಾ, ಶಂಶೇರ್ ಸಿಂಗ್, ಮೊಹಮ್ಮದ್. ರಾಹೀಲ್ ಮೌಸೀನ್, ರಾಜಿಂದರ್ ಸಿಂಗ್.
ಫಾರ್ವರ್ಡ್‌ಗಳು: ಮನ್‌ದೀಪ್ ಸಿಂಗ್, ಅಭಿಷೇಕ್, ಸುಖಜೀತ್ ಸಿಂಗ್, ಆದಿತ್ಯ ಅರ್ಜುನ್ ಲಾಲಾಗೆ, ದಿಲ್‌ಪ್ರೀತ್ ಸಿಂಗ್, ಶಿಲಾನಂದ ಲಾಕ್ರಾ.
ಬೆಂಗಳೂರು ಬುಲ್ಸ್‌ಗೆ ಸತತ 2ನೇ ಸೋಲು
ಹೈದರಾಬಾದ್: ಕನ್ನಡಿಗರ ನೆಚ್ಚಿನ ತಂಡವಾದ ಬೆಂಗಳೂರು ಬುಲ್ಸ್(Bengaluru Bulls) 11ನೇ ಪ್ರೊ ಕಬಡ್ಡಿ(Pro Kabaddi) ಆವೃತ್ತಿಯಲ್ಲಿ ಮತ್ತೆ ಸೋಲು ಕಂಡಿದೆ. ಭಾನುವಾರ ರಾತ್ರಿ ನಡೆದ ದ್ವಿತೀಯ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್(Gujarat Giants) ವಿರುದ್ಧದ ಪಂದ್ಯದಲ್ಲಿ 32-36 ಅಂತರದಿಂದ ಸೋಲಿಗೆ ತುತ್ತಾಯಿತು. ಇದು ಬುಲ್ಸ್‌ಗೆ ಎದುರಾದ ಸತತ 2ನೇ ಸೋಲು. ಮೊದಲ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್ ವಿರುದ್ಧ ಸೋಲು ಕಂಡಿತ್ತು.
ಪಂದ್ಯ ಆರಂಭದಲ್ಲಿ ಉತ್ತಮ ಅಂಕ ಗಳಿಸಿಸುತ್ತಾ ಹಿಡಿತ ಸಾಧಿಸಿದ್ದ ಬುಲ್ಸ್, ದ್ವಿತೀಯಾರ್ಧದಲ್ಲಿ ಹಿನ್ನೆಡೆ ಅನುಭವಿಸುತ್ತ ಹೋಯಿತು. ಗುಜರಾತ್ ಪರ ರೈಡರ್ ಪ್ರತೀಕ್ ದಹಿಯಾ ಸರ್ವಾಧಿಕ 8 ಅಂಕ ಗಳಿಸಿದರೆ, ಬುಲ್ಸ್ ಪರ ನಾಯಕ ಪರ್ದೀಪ್ ನರ್ವಾಲ್ 9 ಅಂಕ, ಅಜಿಂಕ್ಯಾ ಪವಾರ್ 7 ಅಂಕ ತಂದಿತ್ತರು. ಡೆಫೆಂಡಿಂಗ್ ವಿಭಾಗದಲ್ಲಿ ಮಾಡಿದ ಕೆಲ ಎಡವಟ್ಟಿನಿಂದ ಬುಲ್ಸ್ ಸೋಲು ಕಂಡಿತು.