ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy) ಟೂರ್ನಿಗೆ ಸಂಬಂಧಿಸಿದಂತೆ ಕಳೆದ ಹಲವು ತಿಂಗಳುಗಳಿಂದ ನಡೆದಿದ್ದ ಹೈಬ್ರಿಡ್ ಮಾಡೆಲ್ ಹೈ ಡ್ರಾಮಾ ಕೊನೆಗೂ ಅಂತ್ಯವಾಗಿದೆ. ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ), ಟೂರ್ನಿಯ ಹೈಬ್ರಿಡ್ ಮಾಡೆಲ್‌ಗೆ ಅಧಿಕೃತವಾಗಿ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾರತ ತಂಡದ ಪಂದ್ಯಗಳನ್ನು ದುಬೈನಲ್ಲಿ ನಡೆಸಲಾಗುತ್ತದೆ ಹಾಗೂ 2026ರಲ್ಲಿ ಭಾರತದ ಆತಿಥ್ಯದಲ್ಲಿ ನಡೆಯುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ಆಡಲು ಪಾಕಿಸ್ತಾನ ತಂಡ ಕೂಡ ಭಾರತಕ್ಕೆ ಬರುವುದಿಲ್ಲ. ಇದರ ಬದಲು ತನ್ನ ಪಂದ್ಯಗಳು ಸಹ ಆತಿಥ್ಯ ದೇಶ ಶ್ರೀಲಂಕಾದ ಕೊಲಂಬೊದಲ್ಲಿ ಆಡಲಿದೆ. ಈ ನಿರ್ಧಾರಕ್ಕೆ ಬಿಸಿಸಿಐ ಹಾಗೂ ಪಿಸಿಬಿ ಕೂಡ ಒಪಿಗೆ ಸೂಚಿಸಿದೆ.
ಭಾರತ ತಂಡದ ಪಂದ್ಯಗಳನ್ನು ಹೈಬ್ರಿಡ್ ಮಾಡೆಲ್‌ನಲ್ಲಿ ನಡೆಸುವ ಒಪ್ಪಿಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಐಸಿಸಿ ಯಾವುದೇ ರೀತಿಯ ಪರಿಹಾರವನ್ನು ನೀಡುತ್ತಿಲ್ಲ . ಆದರೆ, 2027ರ ಐಸಿಸಿ ಮಹಿಳಾ ಟೂರ್ನಿಯ ಆತಿಥ್ಯದ ಹಕ್ಕುಗಳನ್ನು ಪಿಸಿಬಿ ಪಡೆದುಕೊಂಡಿದೆ. ಆ ಮೂಲಕ ಹೈಬ್ರಿಡ್ ಮಾಡೆಲ್‌ಗೆ ಒಪ್ಪಿಗೆ ಸೂಚಿಸುವ ಮೂಲಕ ಬಿಸಿಸಿಐ ಹಾಗೂ ಪಿಸಿಬಿ ಎರಡೂ ದೇಶಗಳ ರಾಜಕೀಯ ನಿಯಮಗಳಿಗೆ ಗೌರವ ನೀಡಿವೆ.
ಶನಿವಾರ ಐಸಿಸಿ ತೆಗೆದುಕೊಂಡು ಪ್ರಮುಖ ನಿರ್ಧಾರಗಳ ವಿವರ
- ಬಿಸಿಸಿಐ ಹಾಗೂ ಪಿಸಿಬಿ ಜತೆಗೆ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಹೈಬ್ರಿಡ್ ಮಾಡೆಲ್‌ಗೆ ಐಸಿಸಿ ಒಪ್ಪಿಗೆ ಸೂಚಿಸಿದೆ.
2. ಭಾರತ ತಂಡದ ಪಂದ್ಯಗಳು ದುಬೈನಲ್ಲಿ ನಡೆದರೆ, ಇನ್ನುಳಿದ ಎಲ್ಲಾ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿವೆ.
3. 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯವನ್ನು ಆಡಲು ಪಾಕಿಸ್ತಾನ ಕೂಡ ಭಾರತಕ್ಕೆ ಪ್ರಯಾಣ ಬೆಳೆಸುವುದಿಲ್ಲ ಹಾಗೂ ತನ್ನ ಪಂದ್ಯವನ್ನು ಶ್ರೀಲಂಕಾದ ಕೊಲಂಬೊದಲ್ಲಿ ಆಡಲಿದೆ. ಎಂಬುದಕ್ಕೆ ಬಿಸಿಸಿಐ, ಪಿಸಿಬಿ ಒಪ್ಪಿಕೊಂಡಿವೆ.
4. ಭಾರತ ತಂಡದ ಪಂದ್ಯಗಳಿಗೆ ಆತಿಥ್ಯ ಕಳೆದುಕೊಂಡಿದ್ದಕ್ಕೆ ಪಿಸಿಬಿಗೆ ಯಾವುದೇ ರೀತಿಯ ಪರಿಹಾರವನ್ನು ಐಸಿಸಿ ನೀಡುತ್ತಿಲ್ಲ.
5. 2027ರಲ್ಲಿ ಐಸಿಸಿ ಮಹಿಳಾ ಟೂರ್ನಿ ಆತಿಥ್ಯದ ಹಕ್ಕುಗಳನ್ನು ಪಿಸಿಬಿ ಪಡೆದುಕೊಂಡಿದೆ.
6. ಈ ಮೇಲಿನ ಬೆಳವಣಿಗೆಗಳಿಗೆ ಐಸಿಸಿಇ, ಬಿಸಿಸಿಐ ಹಾಗೂ ಪಿಸಿಬಿ ಒಪ್ಪಿಗೆ ಸೂಚಿಸಿದೆ.
ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಆತಿಥ್ಯವನ್ನು ಪಾಕಿಸಾನ ವಹಿಸಿಕೊಂಡಿದ್ದು, ಇಲ್ಲಿ 10 ಪಂದ್ಯಗಳು ನಡೆಯಲಿವೆ. ಇದರಲ್ಲಿ ಭಾರತ ತಂಡದ ಲೀಗ್ ಹಂತದ ಮೂರು ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಇದರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯ ಕೂಡ ಆಗಿದೆ. ಭಾರತ ತಂಡ ಸೆಮಿಫೈನಲ್ ಹಾಗೂ ಫೈನಲ್‌ಗೆ ಅರ್ಹತೆ ಪಡೆದರೆ, ಈ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಒಂದು ಭಾರತ ತಂಡ ಲೀಗ್ ಹಂತದಿಂದಲೇ ಹೊರ ನಡೆದರೆ, ಆಗ ಸೆಮಿಫೈನಲ್ಸ್ ಹಾಗೂ ಫೈನಲ್ ಪಂದ್ಯಗಳು ಪಾಕಿಸ್ತಾನದ ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ನಡೆಯಲಿವೆ.
ಕೊಲಂಬೊದಲ್ಲಿ ನಡೆಯಲಿರುವ ಪಾಕಿಸ್ತಾನ ಪಂದ್ಯಗಳು
ಇನ್ನು 2026ರಲ್ಲಿ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡ ಕೂಡ, ಭಾರತದ ಎದುರಿನ ಪಂದ್ಯವನ್ನು ಆಡಲು ಭಾರತಕ್ಕೆ ಪ್ರಯಾಣ ಬೆಳೆಸುವುದಿಲ್ಲ. ಇದರ ಬದಲಿಗೆ ಪಾಕಿಸ್ತಾನದ ಪಂದ್ಯಗಳು ಕೊಲಂಬೊದಲ್ಲಿ ನಡೆಯಲಿದೆ. ಇದಕ್ಕೂ ಕೂಡ ಬಿಸಿಸಿಐ ಹಾಗೂ ಐಸಿಸಿ ಒಪ್ಪಿಗೆ ಸೂಚಿಸಿವೆ. ಈ ಟೂರ್ನಿಯ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳ ಸ್ಥಳಗಳನ್ನು ತಡವಾಗಿ ನಿರ್ಧರಿಸಲಾಗುತ್ತದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಯಾವಾಗ?
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಫೆಬ್ರವರಿ 19 ರಂದು ಆರಂಭವಾಗಿ ಮಾರ್ಚ್ 9 ರಂದು ಅಂತ್ಯವಾಗಲಿದೆ. ಈ ಟೂರ್ನಿಯಲ್ಲಿ ಎಂಟು ತಂಡಗಳು ಎರಡು ಗುಂಪುಗಳಲ್ಲಿ ಆಡಲಿವೆ. ಎರಡೂ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್ಸ್‌ಗೆ ಅರ್ಹತೆ ಪಡೆಯಲಿವೆ.
ಈ ಸುದ್ದಿಯನ್ನು ಓದಿ: ಭದ್ರತಾ ವ್ಯವಸ್ಥೆಗೆ ಐಸಿಸಿ ತೃಪ್ತಿ; ಪಾಕ್ ನೆಲದಲ್ಲೇ ಚಾಂಪಿಯನ್ಸ್ ಟ್ರೋಫಿ