Saturday, 14th December 2024

ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಗೆದ್ದ ಬಾಬರ್ ಅಜಂ

ದುಬೈ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಅವರು 2022ರ ಐಸಿಸಿ ವರ್ಷದ ಪುರುಷರ ಏಕದಿನ ಕ್ರಿಕೆಟಿಗ ಗೌರವಕ್ಕೆ ಪಾತ್ರರಾಗಿದ್ದಾರೆ. ಸತತ ಎರಡನೇ ವರ್ಷವೂ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಗೆದ್ದರು.

ಬಾಬರ್ ಅಜಂ 2022ರಲ್ಲಿ ಮೂರು ಶತಕಗಳೊಂದಿಗೆ 9 ಪಂದ್ಯಗಳಿಂದ 84.87 ಸರಾಸರಿಯಲ್ಲಿ 679 ರನ್ ಗಳಿಸಿದ್ದರು. ಇನ್ನು ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್‌ನೊಂದಿಗೆ ಬಲಗೈ ನಂ.1 ಬ್ಯಾಟರ್ ಆಗಿ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. 2022ರಲ್ಲಿ ಬಾಬರ್ ಅಜಂ ಇನ್ನೂ ಉತ್ತಮ ಅಂಕಗಳನ್ನು ಗಳಿಸಿದರು. ಜುಲೈ 2021ರಿಂದ ಬಾಬರ್ ಅಜಂ ಅತ್ಯುತ್ತಮ ಫಾರ್ಮ್ ಅನ್ನು ಏಕದಿನ ಕ್ರಿಕೆಟ್‌ನಲ್ಲಿ ಮುಂದುವರೆಸಿದ್ದಾರೆ.

28 ವರ್ಷದ ಬಾಬರ್ ಅಜಂ ಮೂರು ಶತಕಗಳನ್ನು ಸಿಡಿಸಿದರು ಮತ್ತು ಐದು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಒಂದು ಪಂದ್ಯದಲ್ಲಿ ಮಾತ್ರ ವೈಫಲ್ಯ ಕಂಡಿದ್ದಾರೆ. ಬಾಬರ್ ಅಜಂ ಪಾಕಿಸ್ತಾನ ತಂಡದ ನಾಯಕನಾಗಿಯೂ ಯಶಸ್ಸು ಕಂಡಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಏಕೈಕ ಸೋಲು ಆಸ್ಟ್ರೇಲಿಯಾ ವಿರುದ್ಧ ಲಾಹೋರ್‌ನಲ್ಲಿ ಬಂದಿತ್ತು.