Monday, 9th December 2024

IND vs AUS: ʻಆಸೀಸ್‌ ವೇಗಿಗಳ ಎದುರು ಭಾರತದ ಬ್ಯಾಟ್ಸ್‌ಮನ್‌ಗಳ ಆಟ ನಡೆಯಲ್ಲʼ-ಬ್ರಾಡ್‌ ಹೆಡ್ಡಿನ್‌ ವಾರ್ನಿಂಗ್‌

IND vs AUS: ʻIndian batters can't stand up to Australian quicks in BGT 2024-25ʼ, says Ex batter Brad Haddin

ನವದೆಹಲಿ: ಮುಂಬರುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ (IND vs AUS) ಆಸ್ಟ್ರೇಲಿಯಾ ವೇಗದ ಬೌಲರ್‌ಗಳನ್ನು ಎದುರಿಸಲು ಭಾರತ ತಂಡದ ಬ್ಯಾಟ್ಸ್‌ಮನ್‌ಗಳಿಂದ ಸಾಧ್ಯವಾಗುವುದಿಲ್ಲ ಎಂದು ಆಸೀಸ್‌ ಮಾಜಿ ಕ್ರಿಕೆಟಿಗ ಬ್ರಾಡ್‌ ಹೆಡ್ಡಿನ್‌ ಭವಿಷ್ಯ ನುಡಿದಿದ್ದಾರೆ. ನವೆಂಬರ್‌ 22 ರಂದು ಪರ್ತ್‌ನಲ್ಲಿ ಮೊದಲನೇ ಪಂದ್ಯದ ಮೂಲಕ ಟೆಸ್ಟ್‌ ಸರಣಿ ಆರಂಭವಾಗಲಿದೆ.

ಟೆಸ್ಟ್‌ ಸರಣಿಯಲ್ಲಿ ಭಾರತ ತಂಡಕ್ಕೆ ಯಶಸ್ವಿ ಜೈಸ್ವಾಲ್‌ ಕೀ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಅವರು ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದಿನದಿಂದ ಇಲ್ಲಿಯವರೆಗೂ ಅದ್ಭುತ ಲಯದಲ್ಲಿದ್ದಾರೆ. ಇಲ್ಲಿಯವರೆಗೂ ಆಡಿದ 14 ಟೆಸ್ಟ್‌ ಪಂದ್ಯಗಳಿಂದ 56.28ರ ಸರಾಸರಿಯಲ್ಲಿ ಮೂರು ಶತಕಗಳು ಹಾಗೂ ಎಂಟು ಅರ್ಧಶತಕಗಳ ಮೂಲಕ 1407ನ ರನ್‌ಗಳನ್ನು ಕಲೆ ಹಾಕಿದ್ದಾರೆ.

ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಬ್ರಾಡ್‌ ಹೆಡ್ಡಿನ್‌, ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ಅದ್ಭುತ ಪ್ರತಿಭಾವಂತ ಆದರೆ, ಆಸ್ಟ್ರೇಲಿಯಾದಲ್ಲಿ ಆಡಿದ ಅನುಭವ ಅವರಿಗಿಲ್ಲ. ಈ ಹಿನ್ನೆಲೆಯಲ್ಲಿ ಟೆಸ್ಟ್‌ ಸರಣಿಯಲ್ಲಿ ಅವರು ಬೌನ್ಸ್‌ ಅನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

“ನಮ್ಮ ವೇಗದ ಬೌಲರ್‌ಗಳ ಎದುರು ಭಾರತೀಯ ಬ್ಯಾಟ್ಸ್‌ಮನ್‌ಗಳು ಪುಟಿದೇಳುತ್ತಾರೆಂದು ನಾನು ಭಾವಿಸುವುದಿಲ್ಲ. ಯಶಸ್ವಿ ಜೈಸ್ವಾಲ್‌ ನಿಜವಾಗಿಯೂ ಅತ್ಯುತ್ತಮ ಬ್ಯಾಟ್ಸ್‌ಮನ್‌ ಎಂದು ನನಗೆ ತಿಳಿದಿದೆ. ಆದರೆ, ಈ ಹಿಂದೆ ಅವರು ಆಸ್ಟ್ರೇಲಿಯಾದಲ್ಲಿ ಆಡಿದ್ದಾರೆಂದು ನಾನು ನೋಡಿಲ್ಲ. ಹಾಗಾಗಿ ಅವರು ಈ ಬಾರಿ ಇಲ್ಲಿ ಬೌನ್ಸರ್‌ಗಳನ್ನು ಮೆಟ್ಟಿ ನಿಲ್ಲುತ್ತಾರೆಂದು ತಿಳಿದಿಲ್ಲ. ಪರ್ತ್‌ನಲ್ಲಿ ಇನಿಂಗ್ಸ್‌ ಆರಂಭಿಸುವುದು ತುಂಬಾ ಕಷ್ಟ,” ಎಂದು ಬ್ರಾಡ್‌ ಹೆಡ್ಡಿನ್‌ ಎಚ್ಚರಿಕೆ ನೀಡಿದ್ದಾರೆ.

IND vs AUS: ಆಸ್ಟ್ರೇಲಿಯಾದಲ್ಲಿ ಭಾರತ ಹ್ಯಾಟ್ರಿಕ್‌ ಜಯ ಸಾಧಿಸುವುದು ಪಕ್ಕಾ ಎಂದ ಚೇತನ್‌ ಶರ್ಮಾ!

ವಿಕೆಟ್‌ ಕೀಪರ್‌ಗಳು ದೊಡ್ಡ ಪಾತ್ರ ನಿರ್ವಹಿಸಲಿದ್ದಾರೆ: ಆರೋನ್‌ ಫಿಂಚ್‌

“ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ಪರ ವಿಕೆಟ್‌ ಕೀಪರ್‌ಗಳು ಕೀ ಆಟಗಾರರಾಗಿದ್ದಾರೆ. ಅಲೆಕ್ಸ್‌ ಕೇರಿ ಹಾಗೂ ರಿಷಭ್‌ ಪಂತ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದಾರೆ. ಈ ಸರಣಿಯಲ್ಲಿ ಒಂದಲ್ಲ ಒಂದು ಬಾರಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉರುಳಿ ಬೀಳುತ್ತಾರೆ. ಎರಡೂ ತಂಡಗಳ ಫಾಸ್ಟ್‌ ಬೌಲರ್‌ಗಳು ಉತ್ತಮವಾಗಿದ್ದಾರೆ. ಹಾಗಾಗಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಪರದಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಟಿಂಗ್‌ 7ನೇ ಕ್ರಮಾಂಕದಲ್ಲಿ ಅಲೆಕ್ಸ್‌ ಕೇರಿ ಮತ್ತು ಆರನೇ ಕ್ರಮಾಂಕದಲ್ಲಿ ರಿಷಭ್‌ ಪಂತ್‌ ಅತ್ಯಂತ ನಿರ್ಣಾಯಕವಾಗುತ್ತಾರೆ. ಕೇರಿ ಅವರು ಆಕ್ರಮಣಕಾರಿ ಆಟಗಾರ ಹಾಗೂ ರಿಷಭ್‌ ಪಂತ್‌ ಕೂಡ ಆಕ್ರಮಣಕಾರಿ ಆಟಗಾರ,” ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ಆರೋನ್‌ ಫಿಂಚ್‌ ಹೇಳಿದ್ದಾರೆ.

IND vs AUS: ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಫಾರ್ಮ್‌ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಚೇತನ್‌ ಶರ್ಮಾ!

ಆಸ್ಟ್ರೇಲಿಯಾದಲ್ಲಿ ಪಂತ್‌ರ ಅಂಕಿಅಂಶಗಳು

ಆಸ್ಟ್ರೇಲಿಯಾದಲ್ಲಿ ರಿಷಭ್‌ ಪಂತ್‌ ಅವರು ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ. ಅವರು ಕಾಂಗರೂ ನಾಡಿನಲ್ಲಿ ಆಡಿದ 12 ಇನಿಂಗ್ಸ್‌ಗಳಿಂದ ಒಂದು ಶತಕ ಹಾಗೂ ಎರಡು ಬಾರಿ 80ಕ್ಕೂ ಅಧಿಕ ರನ್‌ಗಳೊಂದಿಗೆ (89* ಹಾಗೂ 97) 624 ರನ್‌ಗಳನ್ನು ಗಳಿಸಿದ್ದಾರೆ. 2021ರಲ್ಲಿ ದಿ ಗಬ್ಬಾ ಟೆಸ್ಟ್‌ ಪಂದ್ಯದಲ್ಲಿ ಐದನೇ ದಿನ ರಿಷಭ್‌ ಪಂತ್‌ ಅಜೇಯ 89 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಭಾರತ ತಂಡ 328 ರನ್‌ಗಳನ್ನು ಚೇಸ್‌ ಮಾಡಲು ನೆರವು ನೀಡಿದ್ದರು. ಆ ಮೂಲಕ ಭಾರತ ತಂಡ ಈ ಸರಣಿಯನ್ನು 2-1 ಅಂತರದಲ್ಲಿ ಗೆಲುವು ಪಡೆದಿತ್ತು.

ಮತೊಂದು ಕಡೆ ಅಲೆಕ್ಸ್‌ ಕೇರಿ ಅವರು ಐದು ಪಂದ್ಯಗಳಿಂದ 24.28ರ ಸರಾಸರಿಯಲ್ಲಿ 170 ರನ್‌ಗಳನ್ನು ಕಲೆ ಹಾಕಿದ್ದರು. ಮುಂಬರುವ ಟೆಸ್ಟ್‌ ಸರಣಿಯಲ್ಲಿ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ತಮ್ಮ-ತಮ್ಮ ತಂಡಗಳ ಪರ ನಿರ್ಣಾಯಕ ಆಟಗಾರರಾಗಿದ್ದಾರೆ.