Saturday, 23rd November 2024

IND vs AUS: ದೀರ್ಘ ಸಮಯದ ಬಳಿಕ ಪ್ರೇಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡ ಅನುಷ್ಕಾ ಶರ್ಮಾ

ಪರ್ತ್‌: ಮಗ ಅಕಾಯ್ (Akaay) ಹುಟ್ಟಿದ ನಂತರ ಅನುಷ್ಕಾ ಶರ್ಮಾ(Anushka Sharma) ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ದೀರ್ಘ ಸಮಯದ ಬಳಿಕ ಅನುಷ್ಕಾ ಪ್ರೇಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪರ್ತ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ(IND vs AUS) ವಿರುದ್ಧದ ಮೊದಲ ಟೆಸ್ಟ್‌ನ ದ್ವಿತೀಯ ದಿನ ಅನುಷ್ಕಾ ಶರ್ಮಾ, ತನ್ನ ಪತಿ ವಿರಾಟ್‌ ಕೊಹ್ಲಿ(Virat Kohli) ಮತ್ತು ಭಾರತ ತಂಡಕ್ಕೆ ಚಿಯರ್​ ಮಾಡಿದ್ದು, ಗಮನ ಸೆಳೆಯಿತು.

ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಕುಳಿತಿದ್ದ ಅನುಷ್ಕಾ ಭಾರತ ತಂಡದ ಬೌಲರ್​ಗಳು ನೀಡಿದ ಅತ್ಯುತ್ತಮ ಪ್ರದರ್ಶನವನ್ನು ಕಂಡು ಸಖತ್ ಎಂಜಾಯ್ ಮಾಡಿದರು. ಅಲ್ಲದೆ, ವಿರಾಟ್ ಕೊಹ್ಲಿ ಫೀಲ್ಡಿಂಗ್‌ ಮತ್ತು ಸಹ ಆಟಗಾರರನ್ನು ಹುರಿದುಂಬಿಸುತ್ತಿರುವುದನ್ನು ನೋಡಿ ಖುಷಿಪಟ್ಟರು. ಅನುಷ್ಕಾ ಅವರು ಕಾಣಿಸಿಕೊಂಡ ವಿಡಿಯೊ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಆಸೀಸ್‌ ವಿಕೆಟ್‌ ಬೀಳುತ್ತಿದ್ದಂತೆ ಚಪ್ಪಾಳೆ ತಟ್ಟುವ ಮೂಲಕ ಭಾರತ ತಂಡವನ್ನು ಬೆಂಬಲಿಸಿದರು. ಅನುಷ್ಕಾಗೆ ಜಸ್‌ಪ್ರೀತ್‌ ಬುಮ್ರಾ ಪತ್ನಿ ಸಂಜನಾ ಗಣೇಶನ್‌ ಕೂಡ ಸಾಥ್‌ ನೀಡಿದ್ದಾರೆ. ಇವರಿಬ್ಬರು ಗ್ಯಾಲರಿಯಲ್ಲಿ ಕುಳಿತು ತಮ್ಮ ಪತಿಯರ ಆಟಕ್ಕೆ ಚಿಯರ್ ಮಾಡುತ್ತಾ ಎಂಜಾಯ್‌ ಮಾಡುತ್ತಿದ್ದಾರೆ.

 ಮೊದಲ ದಿನದಾಟದಲ್ಲಿ 7 ವಿಕೆಟ್‌ಗೆ 67 ರನ್‌ ಗಳಿಸಿದ್ದ ಆಸೀಸ್‌ ಪಡೆ ದ್ವಿತೀಯ ದಿನವಾದ ಶನಿವಾರ ಕೇವಲ 37 ರನ್‌ ಒಟ್ಟುಗೂಡಿಸಿ 104 ರನ್‌ಗೆ ಆಲೌಟ್‌ ಆಯಿತು. 46 ರನ್‌ ಮುನ್ನಡೆ ಸಾಧಿಸಿರುವ ಭಾರತ ದ್ವಿತೀಯ ಇನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿದ್ದು ವಿಕೆಟ್‌ ನಷ್ಟವಿಲ್ಲದೆ ಉತ್ತಮವಾಗಿ ಆಡುತ್ತಿದೆ.

ಶನಿವಾರ ಮಿಚೆಲ್‌ ಸ್ಟಾರ್ಕ್‌ ಅವರು ಅಂತಿಮ ಹಂತದಲ್ಲಿ 26 ರನ್‌ ಬಾರಿಸುವ ಮೂಲಕ ತಂಡದ ಮೊತ್ತವನ್ನು 100 ಗಡಿ ದಾಟಿಸುವಲ್ಲಿ ನೆರವಾದರು. ಶುಕ್ರವಾರ 6 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ಸ್ಟಾರ್ಕ್‌ ಅವರದ್ದೇ ಆಸೀಸ್‌ ಪರ ದಾಖಲಾದ ಗರಿಷ್ಠ ಮೊತ್ತ. 19 ರನ್‌ ಗಳಿಸಿದ್ದ ಅಲೆಕ್ಸ್‌ ಕ್ಯಾರಿ 21 ರನ್‌ಗೆ ವಿಕೆಟ್‌ ಕಳೆದುಕೊಂಡರು. ಎಲ್ಲ 20 ವಿಕೆಟ್‌ಗಳು ವೇಗಿಗಳ ಪಾಲಾಯಿತು.

ಇದನ್ನೂ ಓದಿ Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ; ಚಾಂಪಿಯನ್ಸ್‌ ಟ್ರೋಫಿ ಭವಿಷ್ಯ ನಿರ್ಧಾರ

ಕೊಹ್ಲಿ ಮತ್ತು ಅನುಷ್ಕಾ ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಈ ಜೋಡಿ ಸೇವಾ (seVVA) ಎಂಬ ಹೆಸರಿನ ಎನ್​ಜಿವೊ ನಡೆಸುತ್ತಿದ್ದು ಈ ಮೂಲಕ ಹಲವರಿಗೆ ಸಹಾಯವನ್ನು ಮಾಡುತ್ತಿದ್ದಾರೆ. ಕೊಹ್ಲಿಯ ಎಲ್ಲ ಏರಿಳಿತದಲ್ಲಿಯೂ ಪತ್ನಿ ಅನುಷ್ಕಾ ಬೆಂಬಲಕ್ಕೆ ನಿಂತು ಅವರಿಗೆ ಸಾದಾ ಪ್ರೋತ್ಸಾಹವನ್ನು ನೀಡುತ್ತಲೇ ಬಂದಿದ್ದಾರೆ. ಕೊಹ್ಲಿ ಕೂಡ ತನ್ನ ಬದುಕಿನಲ್ಲಿ ಅನುಷ್ಕಾ ಮುಖ್ಯ ಪಾತ್ರಹಿಸಿರುದಾಗಿ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು. “ಅನುಷ್ಕಾ ಅವರ ಭೇಟಿ ನನ್ನ ಜೀವನದಲ್ಲಿ ಹೊಸ ದೃಷ್ಟಿಕೋನವನ್ನು ಕೊಟ್ಟಿದೆ. ಹಾಗೇ ಎಲ್ಲವನ್ನೂ ಸ್ವೀಕರಿಸುವ ಭಾವನೆಯನ್ನು ಬೆಳೆಸಿಕೊಳ್ಳಲು ಸಹಕರಿಸಿದೆ” ಎಂದು ಕೊಹ್ಲಿ ಹೇಳಿದ್ದರು.