ಕಾನ್ಪುರ: ಬಾಂಗ್ಲಾದೇಶ(IND vs BAN) ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ(Virat Kohli
) ಅವರು ಸಹ ಆಟಗಾರನಾದ, ವೇಗಿ ಆಕಾಶ್ ದೀಪ್(Akash Deep) ಅವರಿಗೆ ತಮ್ಮ ಬ್ಯಾಟ್ ಉಡುಗೊರೆಯಾಗಿ ನೀಡಿದ್ದರು. ಕೊಹ್ಲಿ ನೀಡಿದ ಈ ಬ್ಯಾಟ್‌ನಲ್ಲಿ ಆಕಾಶ್ ದೀಪ್ 2 ಸಿಕ್ಸರ್ ಬಾರಿಸಿ ಮಿಂಚಿದ್ದಾರೆ. ಆಕಾಶ್ ದೀಪ್ ಬಾರಿಸಿದ ಸಿಕ್ಸರ್ ಕಂಡು ವಿರಾಟ್ ಕೊಹ್ಲಿ ಸಂತಸಗೊಂಡಿದ್ದಾರೆ. ಆಕಾಶ್ ದೀಪ್ ಸಿಕ್ಸರ್ ಮತ್ತು ಕೊಹ್ಲಿಯ ರಿಯಾಕ್ಷನ್‌ನ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಕಾಶ್ ದೀಪ್ ಸತತ ಎರಡು ಸಿಕ್ಸರ್ ಬಾರಿಸಿದ್ದು ಅನುಭವಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರಿಗೆ. ಗ್ಯಾಲರಿಯಲ್ಲಿ ಕುಳಿದಿದ್ದ ವಿರಾಟ್ ಕೊಹ್ಲಿ ಅವರು ಆಕಾಶ್ ದೀಪ್ ಸಿಕ್ಸರ್ ಕಂಡು ಒಂದು ಕ್ಷಣ ದಂಗಾಗಿದ್ದಾರೆ. ಒಟ್ಟು 5 ಎಸೆತ ಎದುರಿಸಿದ ಆಕಾಶ್ ದೀಪ್ 12 ರನ್ ಬಾರಿಸಿದರು. ಈ ಮೊತ್ತ ಅವರಿ ಬಾರಿಸಿದ್ದ 2 ಸಿಕ್ಸರ್‌ನಿಂದ ದಾಖಲಾಯಿತು. ಬೌಲಿಂಗ್‌ನಲ್ಲಿ ಸದ್ಯ 2 ವಿಕೆಟ್ ಕಡೆವಿದ್ದಾರೆ. ಬಹಳ ದಿನಗಳಿಂದ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 47 ರನ್ ಬಾರಿಸಿ ಬ್ಯಾಟಿಂಗ್ ಲಯಕ್ಕೆ ಮರಳಿಸ ಸೂಚನೆಯೊಂದನ್ನು ನೀಡಿದ್ದಾರೆ.
ಇದನ್ನೂ ಓದಿ IND vs BAN : ಟೆಸ್ಟ್ ಇತಿಹಾಸದಲ್ಲಿ ಅತಿ ವೇಗದ 50, 100, 150, 200 ಮತ್ತು 250 ರನ್; ವಿಶ್ವದಾಖಲೆ ನಿರ್ಮಿಸಿದ ಭಾರತ
ವಿಶ್ವ ದಾಖಲೆ ಬರೆದ ಕೊಹ್ಲಿ
ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಅತಿ ವೇಗವಾಗಿ 27 ಸಾವಿರ ಅಂತಾರಾಷ್ಟ್ರೀಯ ರನ್ ಗಳಿಸಿದ ಆಟಗಾರ ಎಂಬ ದಾಖಲೆ ಬರೆದರು. ಈ ಮೂಲಕ ಸಚಿನ್ ದಾಖಲೆಯನ್ನು ಮುರಿದರು. ವಿರಾಟ್ ಕೇವಲ 594 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಭಾರತದ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ 623 ಇನ್ನಿಂಗ್ಸ್ ಆಡಿ ಈ ದಾಖಲೆ ಬರೆದಿದ್ದರು. ಇದೀಗ ಅವರ ದಾಖಲೆ ಪತನಗೊಂಡಿದೆ. ಕೊಹ್ಲಿ 600 ಕ್ಕಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 27000 ಅಂತಾರಾಷ್ಟ್ರೀಯ ರನ್‌ಗಳನ್ನು ಪೂರೈಸಿದ ಏಕೈಕ ಕ್ರಿಕೆಟಿಗರಾದರು.
ರೋಚಕ ಘಟದಲ್ಲಿ ದ್ವಿತೀಯ ಟೆಸ್ಟ್
ಕಾನ್ಪುರದಲ್ಲಿ ಸಾಗುತ್ತಿರುವ ದ್ವಿತೀಯ ಟೆಸ್ಟ್ ರೋಚಕ ಹಂತಕ್ಕೆ ಬಂದು ನಿಂತಿದೆ. ಅಂತಿಮ ದಿನವಾದ ಇಂದು ಬಾಂಗ್ಲಾದೇಶವನ್ನು ಬೇಗನೆ ಆಲೌಟ್ ಮಾಡಿದರೆ ಭಾರತ ಗೆಲುವು ಸಾಧಿಸಬಹುದು. ಒಂದೊಮ್ಮೆ ಭಾರತೀಯ ಬೌಲರ್‌ಗಳ ದಾಳಿಯನ್ನು ಬಾಂಗ್ಲಾ ಬ್ಯಾಟರ್‌ಗಳು ತಡೆಯೊಡ್ಡಿ ನಿಂತರೆ ಪಂದ್ಯ ಡ್ರಾಗೊಳ್ಳಬಹುದು. ಸದ್ಯ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಬಾಂಗ್ಲಾ 26 ರನ್‌ಗೆ 2 ವಿಕೆಟ್ ಕಳೆದುಕೊಂಡು 26 ರನ್ ಹಿನ್ನಡೆಯಲ್ಲಿದೆ. ಮೊದಲ ಇನಿಂಗ್ಸ್‌ನಲ್ಲಿ ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿದ ಭಾರತ ಕೇವಲ 34.4 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 285 ರನ್ ಗಳಿಸಿ ಡಿಕ್ಲೇರ್ ಮಾಡಿತ್ತು. ಭಾರತ ಪರ ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್ ರಾಹುಲ್ ಅರ್ಧಶತಕ ಬಾರಿಸಿ ಮಿಂಚಿದ್ದರು.