Thursday, 3rd October 2024

IND vs BAN: ಮೈದಾನದಲ್ಲೇ ಸಿರಾಜ್‌ಗೆ ಕ್ಷಮೆ ಕೇಳಿದ ಪಂತ್‌; ಕಾರಣವೇನು?

IND vs BAN

ಚೆನ್ನೈ: ಭಾರತ ತಂಡದ ಘಾತಕ ಬೌಲಿಂಗ್‌ ದಾಳಿಗೆ ನಲುಗಿದ ಬಾಂಗ್ಲಾದೇಶ(IND vs BAN) ಮೊದಲ ಇನಿಂಗ್ಸ್‌ನಲ್ಲಿ ಕೇವಲ 149 ರನ್‌ಗೆ ಕುಸಿದಿದೆ. ಭಾರೀ ಮುನ್ನಡೆ ಸಾಧಿಸಿರುವ ಭಾರತ ದ್ವಿತೀಯ ಇನಿಂಗ್ಸ್‌ ಆರಂಭಿಸಿದೆ. ಬಾಂಗ್ಲಾ ಬ್ಯಾಟಿಂಗ್‌ ವೇಳೆ ರಿಷಭ್‌ ಪಂತ್‌(Rishabh Pant ಅವರು ಮೊಹಮ್ಮದ್‌ ಸಿರಾಜ್‌(Mohammed Siraj) ಬಳಿ ಕ್ಷಮೆ(Rishabh Pant apologises) ಕೇಳಿದ ಘಟನೆಯೂ ನಡೆಯಿತು. ಅಷ್ಟಕ್ಕೂ ಪಂತ್‌ ಸಿರಾಜ್‌ ಬಳಿ ಕ್ಷಮೆ ಕೇಳಲು ಕಾರಣವೇನು ಎಂಬ ಮಾಹಿತಿ ಇಲ್ಲಿದೆ.

ಬಾಂಗ್ಲಾ ತಂಡದ ಆರಂಭಿಕ ಆಟಗಾರ ಜಾಕಿರ್ ಹಸನ್ ಅವರು 2 ರನ್‌ ಗಳಿಸಿದ್ದ ವೇಳೆ ಸಿರಾಜ್‌ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆದರೆ ಅಂಪೈರ್‌ ಇದನ್ನು ಔಟ್‌ ನೀಡಲಿಲ್ಲ. ರಿವ್ಯೂ ಪಡೆಯಲು ಮುಂದಾಗಿದ್ದ ನಾರಕ ರೋಹಿತ್‌ ಅವರನ್ನು ಪಂತ್‌ ತಡೆದರು. ಚೆಂಡು ವಿಕೆಟ್‌ನಿಂದ ಮೇಲಿದೆ ಎಂದು ಹೇಳುವ ಮೂಲಕ ರೋಹಿತ್‌ಗೆ ರಿವ್ಯೂ ಪಡೆಯಂತೆ ಸೂಚನೆ ನೀಡಿದರು. ಪಂತ್‌ ಸೂಚನೆಯಂತೆ ರೋಹಿತ್‌ ರಿವ್ಯೂ ಪಡೆಯಲು ನಿರಾಕರಿಸಿದರು. ಆದರೆ, ಸಿರಾಜ್‌ ಓವರ್‌ ಮುಕ್ತಾಯದ ಬಳಿಕ ಮೂರನೇ ಅಂಪೈರ್‌ ಸಿರಾಜ್‌ ಎಸೆತವನ್ನು ಪರೀಕ್ಷಿಸಿ ದೊಡ್ಡ ಪರದೆಯಲ್ಲಿ ತೋರಿಸಿದರು. ಈ ಎಲ್‌ಬಿಡಬ್ಲ್ಯು ಆಗಿರುವುದು ಸ್ಪಷ್ಟವಾಗಿತ್ತು. ಚೆಂಡು ವಿಕೆಟ್‌ಗೆ ಬಡಿಯುವುದು ಕಂಡುಬಂತು. ಇದನ್ನು ಕಂಡ ಸಿರಾಜ್‌ ಹತಾಶರಾದರು. ತಕ್ಷಣವೇ ಪಂತ್‌ ಕೈ ಬೀಸಿ ಸಿರಾಜ್‌ಗೆ ಕ್ಷಮೆ ಕೇಳಿದರು. ಈ ವಿಡಿಯೊ ವೈರಲ್‌ ಆಗಿದೆ. ಸಿರಾಜ್‌ ಈ ಪಂದ್ಯದಲ್ಲಿ 10.1 ಬೌಲಿಂಗ್‌ ದಾಳಿ ನಡೆಸಿ ಒಂದು ಮೇಡನ್‌ ಸಹಿತ 30 ರನ್‌ ವೆಚ್ಚದಲ್ಲಿ 2 ವಿಕೆಟ್‌ ಕಿತ್ತರು.

ಇದನ್ನೂ ಓದಿ ‌IND vs BAN: ಅಜ್ಜಿಯ ಕ್ರಿಕೆಟ್‌ ಪ್ರೀತಿಗೆ ನೆಟ್ಟಿಗರು ಕ್ಲೀನ್‌ ಬೌಲ್ಡ್‌; ವಿಡಿಯೊ ವೈರಲ್

ದಾಖಲೆ ಬರೆದ ಬುಮ್ರಾ

ಘಾತಕ ಬೌಲಿಂಗ್‌ ದಾಳಿ ಮೂಲಕ ಬಾಂಗ್ಲಾ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದ ಜಸ್‌ಪ್ರೀತ್‌ ಬುಮ್ರಾ ಒಟ್ಟು 4 ವಿಕೆಟ್‌ ಕಿತ್ತು ಮಿಂಚಿದರು. 3 ವಿಕೆಟ್‌ ಪೂರ್ತಿಗೊಳಿಸುತ್ತಿದ್ದಂತೆ ಬುಮ್ರಾ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ ಸೇರಿ 400 ವಿಕೆಟ್‌ ಕಿತ್ತ ಸಾಧನೆಗೈದರು. ಜತೆಗೆ ಈ ಮೈಲುಗಲ್ಲು ತಲುಪಿದ ಭಾರತದ 6 ನೇ ಬೌಲರ್‌ ಎನಿಸಿಕೊಂಡರು. ಸದ್ಯ ಬುಮ್ರಾ ಏಕದಿನದಲ್ಲಿ 149, ಟೆಸ್ಟ್‌ನಲ್ಲಿ161 ಮತ್ತು ಟಿ20ಯಲ್ಲಿ 89 ವಿಕೆಟ್‌ ಕಿತ್ತಿದ್ದಾರೆ.

ಭಾರತೀಯ ತ್ರಿವಳಿ ವೇಗಿಗಳ ದಾಳಿಗೆ ನಲುಗಿದ ಬಾಂಗ್ಲಾ ಬ್ಯಾಟರ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದ್ದು ಕಂಡುಬಂತು. ಮೆಹಿದಿ ಹಸನ್ ಮಿರಾಜ್ ತಂಡದ ಮೊತ್ತವನ್ನು ಹಿಗ್ಗಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದರೂ ಅವರಿಗೆ ಮತ್ತೊಂದು ತುದಿಯಲ್ಲಿ ಸಿಯಾಗಿ ಸಾಥ್‌ ಸಿಗಲಿಲ್ಲ. ಮೆಹದಿ 27 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಅನುಭವಿ ಆಲ್‌ರೌಂಡರ್‌ ಶಕೀಬ್‌ ಅಲ್‌ ಹಸನ್‌ 32 ರನ್‌ ಬಾರಿಸಿದ್ದೇ ತಂಡದ ಪರ ದಾಖಲಾದ ಗರಿಷ್ಠ ಮೊತ್ತ. ಕಳೆದ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಶತಕ ಬಾರಿಸಿ ಮಿಂಚಿದ್ದ ಮುಶ್ಫಿಕರ್ ರಹೀಮ್ ಭಾರತ ವಿರುದ್ಧ ವಿಫಲರಾದರು. 8 ರನ್‌ ಗಳಿಸಿ ಬುಮ್ರಾಗೆ ವಿಕೆಟ್‌ ಒಪ್ಪಿಸಿದರು.