ಬೆಂಗಳೂರು: ನ್ಯೂಜಿಲ್ಯಾಂಡ್(IND vs NZ) ವೇಗಿ ಟಿಮ್ ಸೌಥಿ(Tim Southee) ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್ ಮೂಲಕ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಇದೇ ವೇಳೆ ಅವರು ಮಾಜಿ ಡ್ಯಾಶಿಂಗ್ ಬ್ಯಾಟರ್ ವೀರೇಂದ್ರ ಸೆಹವಾಗ್(Virender Sehwag) ಅವರ ಸಿಕ್ಸರ್ ದಾಖಲೆಯೊಂದನ್ನು ಮುರಿದಿದ್ದಾರೆ.
ಮೂರನೇ ದಿನವಾದ ಶುಕ್ರವಾರ 9ನೇ ಕ್ರಮಾಂಕದಲ್ಲಿ ಆಡಲಿಳಿದ ಸೌಥಿ ಆರಂಭದಿಂದಲೇ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ನಡೆಸಿದರು. ಅದರಲ್ಲೂ ಸಿರಾಜ್‌ಗೆ ಇನ್ನಿಲ್ಲದಂತೆ ಕಾಡಿದರು. ಬಿರುಸಿನ ಬ್ಯಾಟಿಂಗ್ ಸೌಥಿ 4 ಸಿಕ್ಸರ್ ಮತ್ತು 5 ಬೌಂಡರಿ ನೆರವಿನಿಂದ 65 ರನ್ ಚಚ್ಚಿದರು. ಇದು ಅವರ 7ನೃ ಅರ್ಧಶತಕ. ಪಂದ್ಯದಲ್ಲಿ ಮೂರು ಸಿಕ್ಸರ್ ಬಾರಿಸುತ್ತಿದ್ದಂತೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದರು. ಈ ವೇಳೆ ಸೆಹವಾಗ್(91 ಸಿಕ್ಸರ್) ದಾಖಲೆ ಪತನಗೊಂಡಿತು. ಸೌಥಿ ಸಿಕ್ಸರ್ ಸದ್ಯ 148 ಇನಿಂಗ್ಸ್ ಆಡಿ 93* ಸಿಕ್ಸರ್ ಬಾರಿಸಿದರೆ. ಭಾರತೀಯ ದಾಖಲೆ ಸೆಹವಾಗ್ ಹೆಸರಿನಲ್ಲಿದೆ. ವಿಶ್ವ ದಾಖಲೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್(131*) ಹೆಸರಿನಲ್ಲಿದೆ.
ಇದನ್ನೂ ಓದಿ PAK vs ENG: ಆಂಗ್ಲರಿಗೆ ಸೋಲುಣಿಸಿದ ಪಾಕ್
ಟೆಸ್ಟ್‌ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿ ಟಾಪ್-5 ಬ್ಯಾಟರ್‌ಗಳು
ಬೆನ್ ಸ್ಟೋಕ್ಸ್-131 ಸಿಕ್ಸರ್
ಬ್ರೆಂಡನ್ ಮೆಕಲಮ್-107 ಸಿಕ್ಸರ್
ಆ್ಯಡಂ ಗಿಲ್ ಕ್ರಿಸ್ಟ್-100 ಸಿಕ್ಸರ್
ಕ್ರಿಸ್ ಗೇಲ್-98 ಸಿಕ್ಸರ್
ಜಾಕ್ ಕ್ಯಾಲಿಸ್-97 ಸಿಕ್ಸರ್
ಆಲ್ರೌಂಡರ್ ರಚಿನ್ ರವೀಂದ್ರ ಬಿರುಸಿನ ಬ್ಯಾಟಿಂಗ್ ಮೂಲಕ ಶತಕ ಬಾರಿಸಿ ಸಂಭ್ರಮಿಸಿದರು. ಇದು ಅವರ ದ್ವಿತೀಯ ಟೆಸ್ಟ್ ಶತಕ. 123 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದ ರಚಿನ್ ಅಂತಿಮವಾಗಿ 157 ಎಸೆತಗಳಿಂದ 13 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿ 134 ರನ್ ಗಳಿಸಿದರು. ಶತಕ ಬಾರಿಸುವ ಮೂಲಕ ರಾಸ್ ಟೇಲರ್ ಬಳಿಕ 2012 ರ ನಂತರ ಭಾರತದಲ್ಲಿ ಶತಕ ಬಾರಿಸಿದ ಮೊದಲ ನ್ಯೂಜಿಲೆಂಡ್ ಬ್ಯಾಟರ್ ಎಂಬ ದಾಖಲೆ ಬರೆದರು. ಸಾರಸ್ಯವೆಂದರೆ ರಾಸ್ ಟೇಲರ್ ಕೂಡ ಬೆಂಗಳೂರು ಟೆಸ್ಟ್‌ನಲ್ಲಿಯೇ ಶತಕ ಬಾರಿಸಿದ್ದು. ಅಂದು ಟೇಲರ್ 113 ರನ್ ಬಾರಿಸಿದ್ದರು. ಪಂದ್ಯವನ್ನು ಭಾರತ 5 ವಿಕೆಟ್ ಅಂತರದಿಂದ ಗೆದ್ದು ಬೀಗಿತ್ತು.