ನವದೆಹಲಿ: ಅಕ್ಟೋಬರ್ 15ರಂದು ನಡೆಯಲಿರುವ ಶಾಂಘೈ ಕೋಆಪರೇಶನ್ ಆರ್ಗನೈಸೇ ಷನ್ (Shanghai Cooperation Organisation) ಶೃಂಗದಲ್ಲಿ ಪಾಲ್ಗೊಳ್ಳಲು ವಿದೇಶಾಂಗ ವ್ಯವಹಾರಗಳ(Foreign Minister Jaishankar) ಸಚಿವ ಎಸ್.ಜೈಶಂಕರ್(S Jaishanka) ಅವರು ಪಾಕಿಸ್ತಾನಕ್ಕೆ ಪ್ರಯಾಣಿಸಲಿದ್ದಾರೆ. 9 ವರ್ಷಗಳ ನಂತರ ಭಾರತದ ವಿದೇಶಾಂಗ ಸಚಿವರೊಬ್ಬರು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿರುವುದರಿಂದ ಮುಂದಿನ ವರ್ಷ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ(Champions Trophy) ಆಡಲು ಪಾಕ್ಗೆ ತೆರಳಲಿದೆ ಎಂಬ ಚರ್ಚೆಗಳು ಗರಿಗೆದರಿದೆ. ಜತೆಗೆ ಉಭಯ ದೇಶಗಳ ಮಧ್ಯೆ ಮತ್ತೆ ಕ್ರಿಕೆಟ್ ಸಂಬಂಧ ಶುರುವಾಗುವ ಸಾಧ್ಯತೆ ಕಂಡು ಬಂದಿದೆ.
ದಿ.ಸುಷ್ಮಾ ಸ್ವರಾಜ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಕೊನೆಯ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿದ್ದಾರೆ. ಅವರು 2015ರ ಡಿಸೆಂಬರ್ನಲ್ಲಿ ಇಸ್ಲಾಮಾಬಾದ್ಗೆ ಭೇಟಿ ನೀಡಿದ್ದರು. ಇದಾದ ಬಳಿಕ ನಮ್ಮ ದೇಶದ ಯಾರೂ ಮತ್ತೆ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಹೋಗಿರಲಿಲ್ಲ. ಅಕ್ಟೋಬರ್ 15 ಮತ್ತು 16ರಂದು ಪಾಕಿಸ್ತಾನ ಎಸ್ ಸಿಒ ಕೌನ್ಸಿಲ್ ಶೃಂಗ ಸಭೆ ಆಯೋಜಿಸಿದೆ. ಇಸ್ಲಾಮಾಬಾದ್ ಆಯೋಜಿಸಿರುವ ಈ ಶೃಂಗ ಸಭೆಗೆ ನಮ್ಮ ವಿದೇಶಾಂಗ ವ್ಯವಹಾರಗಳ ಸಚಿವರ ತಂಡ ಭಾಗಿಯಾಗಲಿದೆ ಎಂದು ಜೈಸ್ವಾಲ್ ತಿಳಿಸಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಕೇವಲ ಎಸ್ ಸಿಒ ಶೃಂಗದಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿದ್ದಾರೆ ಎಂದು ಜೈಸ್ವಾಲ್ ಸ್ಪಷ್ಟಪಡಿಸಿದ್ದಾರೆ. ಆಗಸ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಸ್ ಸಿಒ ಶೃಂಗದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿತ್ತು. SCO ಶೃಂಗದಲ್ಲಿ ಭಾರತ, ಚೀನಾ, ರಷ್ಯಾ, ಪಾಕಿಸ್ತಾನ, ಕಜಕ್ ಸ್ತಾನ್, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಅನ್ನು ಒಳಗೊಂಡಿದೆ.
ಇದನ್ನೂ ಓದಿ Champions Trophy 2025: ಭದ್ರತೆ ಪರಿಶೀಲನೆಗೆ ಪಾಕ್ಗೆ ಭೇಟಿ ಕೊಟ್ಟ ಐಸಿಸಿ; ಲಾಹೋರ್ನಲ್ಲಿ ಭಾರತದ ಪಂದ್ಯ!
ಕೆಲ ದಿನಗಳ ಹಿಂದೆ ಬಿಸಿಸಿಐ(BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ(Rajeev Shukla) ಅವರು ಚಾಂಪಿಯನ್ಸ್ ಟ್ರೋಫಿ ಆಡಲು ಭಾರತ ತಂಡ ಪಾಕ್ಗೆ ತೆರಳುವ ವಿಚಾರದಲ್ಲಿ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದರು. ಪಾಕಿಸ್ತಾನಕ್ಕೆ ತೆರಳಬೇಕೇ ಬೇಡವೇ ಎಂಬುದನ್ನು ಕೇಂದ್ರ ಸರ್ಕಾರ(Indian government) ನಿರ್ಧರಿಸಲಿದೆ ಎಂಬುದಾಗಿ ಹೇಳಿದ್ದರು.
ಭಾರತ ತಂಡ ಪಾಕ್ಗೆ ತೆರಳುವ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಪ್ರತಿಯೊಂದು ಅಂತಾರಾಷ್ಟ್ರೀಯ ಪ್ರವಾಸಕ್ಕೂ ಕೇಂದ್ರದ ಸಮ್ಮತಿ ಪಡೆಯುವುದು ನಮ್ಮ ನೀತಿಯಾಗಿದೆ. ಇಲ್ಲಿ ಸರ್ಕಾರದ ನಿರ್ಧಾರವೇ ಅಂತಿಮ. ಪಾಗ್ಗೆ ತೆರಳುವ ವಿಚಾರಕ್ಕೂ ಇದು ಅನ್ವಯಿಸುತ್ತದೆ. ಕೇಂದ್ರ ಏನು ಹೇಳುತ್ತದೋ ಬಿಸಿಸಿಐ ಅದನ್ನು ಪಾಲಿಸುತ್ತದೆ ಎಂದು ರಾಜೀವ್ ಶುಕ್ಲಾ ಹೇಳಿದ್ದರು. ಇದೀಗ ಜೈ ಶಂಕರ್ ಪಾಕ್ಗೆ ಭೇಟಿ ನೀಡುತ್ತಿದ್ದು ಈ ವೇಳೆ ಕ್ರಿಕೆಟ್ ಕುರಿತ ಚರ್ಚೆಗಳು ನಡೆಯಲಿದೆ ಎನ್ನಲಾಗಿದೆ.