ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂದು ಮೊದಲ ಟಿ20: ಕಟಕ್​ನಲ್ಲಿ ಭಾರತದ ಸಾಧನೆ ಹೇಗಿದೆ?

IND vs SA 1st T20I: ದಕ್ಷಿಣ ಆಫ್ರಿಕಾ ತಂಡ ಈ ಸರಣಿಯಲ್ಲಿ ಮಹತ್ವದ ದಾಖಲೆಯೊಂದನ್ನು ನಿರ್ಮಿಸುವ ಸನಿಹದಲ್ಲಿದೆ. 5 ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯ ಗೆದ್ದರೂ, ಭಾರತ ವಿರುದ್ಧ ಗರಿಷ್ಠ ಟಿ20 ಪಂದ್ಯ ಗೆದ್ದ ತಂಡವೆನಿಸಲಿದೆ.

ಇಂದು ಮೊದಲ ಟಿ20: ಕಟಕ್​ನಲ್ಲಿ ಭಾರತಕ್ಕಿಂದ ಹರಿಣ ಪಡೆಯೇ ಬಲಿಷ್ಠ

Abhishek Sharma and Suryakumar Yadav -

Abhilash BC
Abhilash BC Dec 9, 2025 9:21 AM

ಕಟಕ್‌, ಡಿ.9: ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ(IND vs SA 1st T20I) ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಇಂದು ಚಾಲನೆ ಸಿಗಲಿದೆ. ಕಟಕ್​ನ ಬಾರಾಬತಿ ಸ್ಟೇಡಿಯಂ(Barabati Stadium)ನಲ್ಲಿ ಮೊದಲ ಚುಟುಕು ಕ್ರಿಕೆಟ್​ ಕದನ ನಡೆಯಲಿದೆ. ಮುಂದಿನ ವರ್ಷದ ಟಿ20 ವಿಶ್ವಕಪ್​ ಸಿದ್ಧತೆಯ ದೃಷ್ಟಿಯಿಂದ ಈ ಸರಣಿ ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಕಟಕ್ ಮೈದಾನದಲ್ಲಿ ಭಾರತದ(India vs South Africa) ಟಿ20 ದಾಖಲೆ ಹೇಗಿದೆ ಎಂಬ ವರದಿ ಇಲ್ಲಿದೆ.

ಈ ಮೈದಾನದಲ್ಲಿ ಭಾರತದ ಟಿ20 ದಾಖಲೆ ಅಷ್ಟು ಉತ್ತಮವಾಗಿಲ್ಲ. ಅದರಲ್ಲೂ ದಕ್ಷಿಣ ಆಫ್ರಿಕಾ ವಿರುದ್ಧ. ಹೌದು, ಭಾರತ ತಂಡ ಕಟಕ್​ನಲ್ಲಿ ಇದುವರೆಗೆ ಆಡಿರುವ 3 ಟಿ20 ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಗೆದ್ದಿದ್ದು, 2ರಲ್ಲಿ ಸೋಲು ಅನುಭವಿಸಿದೆ. ಈ ಎರಡೂ ಸೋಲು ದಕ್ಷಿಣ ಆಫ್ರಿಕಾ ವಿರುದ್ಧವೇ ಬಂದಿವೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಲಕ್‌ ಭಾರತಕ್ಕೆ ಒಲಿದೀತೇ ಎಂದು ಕಾದು ನೋಡಬೇಕಿದೆ.

ದಾಖಲೆಯ ಗೆಲುವಿನ ಮೇಲೆ ಹರಿಣ ಪಡೆ ಕಣ್ಣು

ದಕ್ಷಿಣ ಆಫ್ರಿಕಾ ತಂಡ ಈ ಸರಣಿಯಲ್ಲಿ ಮಹತ್ವದ ದಾಖಲೆಯೊಂದನ್ನು ನಿರ್ಮಿಸುವ ಸನಿಹದಲ್ಲಿದೆ. 5 ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯ ಗೆದ್ದರೂ, ಭಾರತ ವಿರುದ್ಧ ಗರಿಷ್ಠ ಟಿ20 ಪಂದ್ಯ ಗೆದ್ದ ತಂಡವೆನಿಸಲಿದೆ. ಸದ್ಯ ಆಸ್ಟ್ರೆಲಿಯಾ, ಇಂಗ್ಲೆಂಡ್​ ಜತೆ ಗರಿಷ್ಠ ತಲಾ 12 ಗೆಲುವಿನ ದಾಖಲೆ ಹಂಚಿಕೊಂಡಿದೆ. ಉಭಯ ತಂಡಗಳು 31 ಬಾರಿ ಮುಖಾಮುಖಿಯಾಗಿದ್ದು, ಭಾರತ 18 ಗೆಲುವು, ದಕ್ಷಿಣ ಆಫ್ರಿಕಾ 12 ಗೆಲುವು ಸಾಧಿಸಿದೆ. 1 ರದ್ದು ರದ್ದುಗೊಂಡಿದೆ.

ಪಂದ್ಯಕ್ಕೆ ಮಳೆ ಭೀತಿ ಇರದ ಕಾರಣ ಪಂದ್ಯ ಸಂಪೂರ್ಣವಾಗಿ ನಡೆಯಲಿದೆ. ಆದರೆ ತಾಪಮಾನವು 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವುದರಿಂದ ಇದು ತುಂಬಾ ಚಳಿಯ ವಾತಾವರಣ ಇರಲಿದೆ. ಇದು ಬೌಲರ್‌ಗಳು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಬಹುಶಃ ಎರಡೂ ಇನ್ನಿಂಗ್ಸ್‌ಗಳಲ್ಲಿ ಇಬ್ಬನಿ ಬಿಂದು ಆಗಿರಲಿದೆ. ಇಲ್ಲಿನ ಕ್ರೀಡಾಂಗಣದ ಮೇಲ್ಮೈ ಬೌಲರ್‌ಗಳಿಗೆ, ವಿಶೇಷವಾಗಿ ಸ್ಪಿನ್ನರ್‌ಗಳಿಗೆ ಸಹಾಯ ಮಾಡಲು ಹೆಸರುವಾಸಿಯಾಗಿದೆ.

ಇದನ್ನೂ ಓದಿ ಇಂದಿನ ಪಂದ್ಯದಲ್ಲಿ ಮಹತ್ವದ ದಾಖಲೆ ಮೇಲೆ ಕಣ್ಣಿಟ್ಟ ಬುಮ್ರಾ

ಸಂಭಾವ್ಯ ತಂಡ

ಭಾರತ: ಅಭಿಷೇಕ್​, ಗಿಲ್​, ಸೂರ್ಯಕುಮಾರ್​ (ನಾಯಕ), ತಿಲಕ್​ ವರ್ಮ, ಜಿತೇಶ್​/ಸ್ಯಾಮ್ಸನ್​ (ವಿ.ಕೀ), ಹಾರ್ದಿಕ್​ ಪಾಂಡ್ಯ, ಅಕ್ಷರ್​ ಪಟೇಲ್​, ಹರ್ಷಿತ್​ ರಾಣಾ/ವಾಷಿಂಗ್ಟನ್​/ಶಿವಂ ದುಬೆ, ಕುಲದೀಪ್​ ಯಾದವ್​, ವರುಣ್​ ಚಕ್ರವರ್ತಿ, ಜಸ್​ಪ್ರೀತ್​ ಬುಮ್ರಾ.

ದಕ್ಷಿಣ ಆಫ್ರಿಕಾ: ಡಿ ಕಾಕ್​ (ವಿ.ಕೀ), ಮಾರ್ಕ್ರಮ್​ (ನಾಯಕ), ರೀಜಾ ಹೆಂಡ್ರಿಕ್ಸ್​, ಬ್ರೆವಿಸ್​, ಡೇವಿಡ್​ ಮಿಲ್ಲರ್​, ಸ್ಟಬ್ಸ್​, ಬಾಷ್​/ಲಿಂಡೆ, ಯಾನ್ಸೆನ್​, ಕೇಶವ್​, ಎನ್​ಗಿಡಿ, ನೋರ್ಕಿಯಾ.