Monday, 9th December 2024

IND vs SA: ಇಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ ಖಚಿತ

ಸೆಂಚುರಿಯನ್‌: ದಕ್ಷಿಣ ಆಫ್ರಿಕಾ(IND vs SA) ವಿರುದ್ಧ ಇಂದು ನಡೆೈುವ ಮೂರನೇ ಟಿ20 ಪಂದ್ಯಕ್ಕೆ ಭಾರತ ತನ್ನ ಆಡುವ ಬಳಗದಲ್ಲಿ ಎರಡು ಮಹತ್ವದ ಬದಲಾವಣೆ ಮಾಡುವುದು ಖಚಿತ. ಅಕ್ಷರ್ ಪಟೇಲ್​ ಬದಲಿಗೆ ರಮಣ್​ದೀಪ್ ಸಿಂಗ್​ಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ. ಹಾಗೆಯೇ ಅವೇಶ್ ಖಾನ್ ಸ್ಥಾನದಲ್ಲಿ ಯಶ್ ದಯಾಳ್ ಕಣಕ್ಕಿಳಿಯಬಹುದು.

ಅಕ್ಷರ್‌ ಪಟೇಲ್‌ಗೆ ಕಳೆದ ಎರಡು ಪಂದ್ಯಗಳಲ್ಲಿ ತಲಾ ಒಂದು ಓವರ್‌ ಮಾತ್ರ ಬೌಲಿಂಗ್‌ ಅವಕಾಶ ನೀಡಲಾಗಿತ್ತು. ಹೀಗಾಗಿ ಅವರನ್ನು ಈ ಪಂದ್ಯದಿಂದ ಕೈ ಬಿಡುವುದು ಖಚಿತ. ಅವೇಶ್ ಖಾನ್ ದುಬಾರಿಯಾಗಿ ಕಂಡು ಬಂದ ಕಾರಣ ಅವರ ಸ್ಥಾನದಲ್ಲಿ ಯಶ್ ದಯಾಳ್ ಕಾಣಿಸಿಕೊಳ್ಳಬಹುದು. ಉಳಿದಂತೆ ಯಾವುದೇ ಬದಲಾವಣೆ ಕಷ್ಟ. ಬ್ಯಾಟಿಂಗ್‌ ವೈಫಲ್ಯ ಕಂಡಿದ್ದರೂ ಆರಂಭಿಕನಾಗಿ ಅಭಿಷೇಕ್‌ ಶರ್ಮಾ ಅವರೇ ಸಂಜು ಸ್ಯಾಮ್ಸನ್‌ ಜತೆ ಇನಿಂಗ್ಸ್‌ ಆರಂಭಿಸಬಹುದು. ಎದುರಾಳಿ ದಕ್ಷಿಣ ಆಫ್ರಿಕಾ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಕಳೆದ ಪಂದ್ಯದ ತಂಡವನ್ನೇ ಇಲ್ಲಿಯೂ ಮುಂದುವರಿಸಬಹುದು.

ಬಾನ್ಸಿ ಪಿಚ್‌

ಸೆಂಚುರಿಯನ್‌ನ “ಸೂಪರ್‌ ಸ್ಪೋರ್ಟ್ಸ್ ಪಾರ್ಕ್‌’ ಪಿಚ್‌ ಕ್ವಿಕ್‌ ಮತ್ತು ಬೌನ್ಸಿಯಾಗಿದೆ. ಹೀಗಾಗಿ ಇಲ್ಲಿ ಬ್ಯಾಟರ್‌ಗಳು ದೊಡ್ಡ ಮೊತ್ತ ಕಲೆಹಾಕುವುದು ಸವಾಲಿನಿಂದ ಕೂಡಿರಲಿದೆ. ಸೆಂಚುರಿಯನ್‌ನಲ್ಲಿ ಈವರೆಗೆ ಭಾರತ ಆಡಿದ್ದು ಒಂದೇ ಟಿ20 ಪಂದ್ಯ. 2018ರ ಈ ಸೆಣಸಾಟದಲ್ಲಿ ದಕ್ಷಿಣ ಆಫ್ರಿಕಾ 6 ವಿಕೆಟ್‌ಗಳಿಂದ ಭಾರತವನ್ನು ಮಣಿಸಿತ್ತು. ಭಾರತ ತಂಡದ ಬ್ಯಾಟಿಂಗ್‌ ಕ್ಲಿಕ್‌ ಆಗದ ಹೊರತು ಗೆಲುವು ಅಸಾಧ್ಯ. ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ ಸಂಜು ದ್ವಿತೀಯ ಪಂದ್ಯದಲ್ಲಿ ಶೂನ್ಯ ಸುತ್ತಿದ್ದರು. ಮೂರನೇ ಪಂದ್ಯದಲ್ಲಿ ಏನು ಮಾಡುತ್ತಾರೋ ಕಾದು ನೋಡಬೇಕು. ಯುವರಾಜ್‌ ಸಿಂಗ್‌ ಗರಡಿಯಲ್ಲಿ ಬೆಳೆದ ಅಭಿಷೇಕ್‌ ಶರ್ಮಾ ಆಡಿದ ಎರಡೂ ಪಂದ್ಯಗಳಲ್ಲಿಯೂ ಕಳಪೆ ಪ್ರದರ್ಶನ. ನಾಯಕ ಸೂರ್ಯಕುಮಾರ್‌ ಬ್ಯಾಟ್‌ ಕೂಡ ಸದ್ದು ಮಾಡುತ್ತಿಲ್ಲ.

ಇದನ್ನೂ ಓದಿ IND vs AUS: ʻಆಸೀಸ್‌ ವೇಗಿಗಳ ಎದುರು ಭಾರತದ ಬ್ಯಾಟ್ಸ್‌ಮನ್‌ಗಳ ಆಟ ನಡೆಯಲ್ಲʼ-ಬ್ರಾಡ್‌ ಹೆಡ್ಡಿನ್‌ ವಾರ್ನಿಂಗ್‌

ಸಂಭಾವ್ಯ ತಂಡ

ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ರಮಣ್​ದೀಪ್ ಸಿಂಗ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ
ರವಿ ಬಿಷ್ಣೋಯ್, ಯಶ್ ದಯಾಳ್.

ದಕ್ಷಿಣ ಆಫ್ರಿಕಾ: ರಿಯಾನ್ ರಿಕೆಲ್ಟನ್, ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಹೆನ್ರಿಚ್ ಕ್ಲಾಸೆನ್ (ವಾಕ್), ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಆಂಡಿಲ್ ಸಿಮೆಲೇನ್, ಜೆರಾಲ್ಡ್ ಕೋಟ್ಜಿ, ಕೇಶವ್ ಮಹಾರಾಜ್, ನ್ಕಾಬಯೋಮ್ಜಿ ಪೀಟರ್.