Tuesday, 10th December 2024

ಭಾರತ 329 ರನ್ ಗಳಿಗೆ ಆಲ್ ಔಟ್: ಇಂಗ್ಲೆಂಡಿಗೆ‌ ಹ್ಯಾಟ್ರಿಕ್‌ ಶಾಕ್‌

ಚೆನ್ನೈ: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ನ ಎರಡನೇ ದಿನದಾಟದಲ್ಲಿ ಭಾರತೀಯ ಬಾಲಂಗೋಚಿ ಆಟಗಾರರು ಎದುರಾಳಿ ದಾಳಿಗೆ ಹೆಚ್ಚು ಪ್ರತಿರೋಧ ತೋರದೆ ಪೆವಿಲಿಯನ್ ಪರೇಡ್‌ ನಡೆಸಿದರು. ರಿಷಭ್ ಪಂತ್ ಅರ್ಧಶತಕ ಬಾರಿಸಿದರು. ಅಂತಿಮವಾಗಿ, ಟೀಂ ಇಂಡಿಯಾ 329 ರನ್ ಗಳಿಗೆ ಆಲ್ ಔಟ್ ಆಗಿದೆ.

ಪ್ರತಿಯಾಗಿ ಬ್ಯಾಟಿಂಗ್‌ ಆರಂಭಿಸಿದ ಇಂಗ್ಲೆಂಡಿಗೆ ಟೀಂ ಇಂಡಿಯಾ ಆಘಾತವಿಕ್ಕಿದೆ. ನಾಯಕ ಜೋ ರೂಟ್‌ ಸಹಿತ ಆರಂಭದ ಮೂರು ವಿಕೆ‌ಟ್‌ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದೆ.

ಅಕ್ಷರ್ ಪಟೇಲ್ 5 ರನ್ ಗೆ ಔಟಾದರೆ, ಸಿರಾಜ್ ನಾಲ್ಕು ರನ್ ಗಳಿಸಿದರು. ವಿಕೆಟ್ ಉರುಳುತ್ತಿದ್ದಂತೆ ಬ್ಯಾಟ್ ಬೀಸಲಾರಂಭಿಸಿದ ಪಂತ್ ಮೂರು ಸಿಕ್ಸರ್ ನೆರವಿನಿಂದ ಅಜೇಯ 58 ರನ್ ಗಳಿಸಿದರು.

ಇಂಗ್ಲೆಂಡ್ ಪರ ಮೊಯಿನ್ ಅಲಿ ನಾಲ್ಕು ವಿಕೆಟ್ ಪಡೆದರೆ, ಒಲಿಸ್ಟೋನ್ ಮೂರು ವಿಕೆಟ್, ಲೀಚ್ ಎರಡು ಮತ್ತು ರೂಟ್ ಒಂದು ವಿಕೆಟ್ ಕಬಳಿಸಿದರು.