Friday, 13th December 2024

ಭಾರತಕ್ಕೆ 70 ರನ್ ಗುರಿ

ಮೆಲ್ಬರ್ನ್: ದ್ವಿತೀಯ ಇನ್ನಿಂಗ್ಸ್ ನಲ್ಲಿ ಭರ್ತಿ 200 ರನ್ ಕಲೆ ಹಾಕಿದ ಆಸ್ಟ್ರೇಲಿಯಾ ತಂಡ ಭಾರತಕ್ಕೆ 70 ರನ್ ಗುರಿ ನೀಡಿದೆ.

ಆರು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿದ್ದಲ್ಲಿಂದ ನಾಲ್ಕನೇ ದಿನದಾಟ ಆರಂಭಿಸಿದ ಆಸೀಸ್ ಗೆ ಗ್ರೀನ್ ಮತ್ತು ಕಮಿನ್ಸ್ ನೆರವಾದರು. ಗ್ರೀನ್ 45 ರನ್ ಮತ್ತು ಕಮಿನ್ಸ್ ಉಪಯುಕ್ತ 22 ರನ್ ಗಳಿಸಿದರು. ಸ್ಟಾರ್ಕ್ 14 ಮತ್ತು ಹ್ಯಾಜಲ್ ವುಡ್ 10 ರನ್ ಗಳಿಸಿದರು.

ಪೇನ್ ಪಡೆ 200 ರನ್ ಗೆ ಆಲ್ ಔಟ್ ಆಯಿತು. ಸಿರಾಜ್ ಮೂರು ವಿಕೆಟ್, ಬುಮ್ರಾ, ಅಶ್ವಿನ್, ಜಡೇಜಾ ತಲಾ ಎರಡು ವಿಕೆಟ್ ಪಡೆದರು. ಒಂದು ವಿಕೆಟ್ ಉಮೇಶ್ ಯಾದವ್ ಪಡೆದರು.