IND vs ENG: ಗೆಲುವಿನೊಂದಿಗೆ ಹಲವು ದಾಖಲೆ ಬರೆದ ಭಾರತ
25 ವರ್ಷ ಮತ್ತು 301 ದಿನಗಳ ವಯಸ್ಸಿನ ಶುಭಮನ್ ಗಿಲ್ ವಿದೇಶದಲ್ಲಿ ಟೆಸ್ಟ್ ಗೆದ್ದ ಅತ್ಯಂತ ಕಿರಿಯ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಗವಾಸ್ಕರ್ ಹೆಸರಿನಲ್ಲಿತ್ತು. 1976 ರಲ್ಲಿ ಆಕ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸುನಿಲ್ ಗವಾಸ್ಕರ್ (26 ವರ್ಷ 202 ದಿನ) ಗೆಲುವು ಸಾಧಿಸಿದ್ದರು.


ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್(IND vs ENG) ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 336ರನ್ ಭರ್ಜರಿ ಗೆಲುವು ಸಾಧಿಸಿದ ಭಾರತ(Team India) ಈ ಗೆಲುವಿನೊಂದಿಗೆ ಹಲವು ದಾಖಲೆಯನ್ನು ನಿರ್ಮಿಸಿದೆ. ಜತೆಗೆ ನಾಯಕ ಶುಭಮನ್ ಗಿಲ್(Shubman Gill) ಕೂಡ ತಮ್ಮ ಹೆಸರಿಗೆ ದಾಖಲೆಯೊಂದನ್ನು ಸೇರಿಸಿಕೊಂಡಿದ್ದಾರೆ.
336ರನ್ ಅಂತರದ ಗೆಲುವು ಸಾಧಿಸುವ ಮೂಲಕ ಭಾರತ ವಿದೇಶಿ ನೆಲದಲ್ಲಿ ಅತ್ಯಧಿಕ ರನ್ ಅಂತರದ ಗೆಲುವು ಸಾಧಿಸಿದ ಹಿರಿಮೆಗೆ ಪಾತ್ರವಾಯಿತು. ಇದುವರೆಗೂ ವಿಂಡೀಸ್ ವಿರುದ್ಧ 318ರನ್ ಗೆಲುವು ಸಾಧಿಸಿದ್ದು ದಾಖಲೆಯಾಗಿತ್ತು.
ಭಾರತಕ್ಕೆ ವಿದೇಶದಲ್ಲಿ ಅತಿ ಹೆಚ್ಚು ರನ್ ಗೆಲುವುಗಳು
336 ರನ್ vs ಇಂಗ್ಲೆಂಡ್ ವಿರುದ್ಧ, ಬರ್ಮಿಂಗ್‌ಹ್ಯಾಮ್ (2025)
318 ರನ್ vs ವಿಂಡೀಸ್ ವಿರುದ್ಧ, ನಾರ್ತ್ ಸೌಂಡ್ (2016)
304 ರನ್ vs ಶ್ರೀಲಂಕಾ ವಿರುದ್ಧ, ಗಾಲೆ (2017)
295 ರನ್ vs ಆಸ್ಟ್ರೇಲಿಯಾ ವಿರುದ್ಧ, ಪರ್ತ್ (2024)
279 ರನ್ vs ಇಂಗ್ಲೆಂಡ್ ವಿರುದ್ಧ, ಲೀಡ್ಸ್(1986)
ಇದನ್ನೂ ಓದಿ IND vs ENG: ಅವಳಿ ಶತಕಗಳ ಮೂಲಕ ಕೊಹ್ಲಿ-ಗವಾಸ್ಕರ್ ದಾಖಲೆ ಮುರಿದ ಶುಭಮನ್ ಗಿಲ್!
ಗವಾಸ್ಕರ್ ದಾಖಲೆ ಪತನ
ಶುಭಮನ್ ಗಿಲ್ ಅವರು ಬರ್ಮಿಂಗ್‌ಹ್ಯಾಮ್‌ನಲ್ಲಿ ಟೆಸ್ಟ್ ಪಂದ್ಯ ಗೆದ್ದ ಮೊದಲ ಭಾರತೀಯ ನಾಯಕ ಎಂಬ ದಾಖಲೆ ಜತೆಗೆ ದಿಗ್ಗಜ ಸುನೀಲ್ ಗವಾಸ್ಕರ್ ಅವರ ನಾಯಕತ್ವದ ದಾಖಲೆಯೊಂದನ್ನು ಕೂಡ ಮುರಿದಿದ್ದಾರೆ. 25 ವರ್ಷ ಮತ್ತು 301 ದಿನಗಳ ವಯಸ್ಸಿನ ಶುಭಮನ್ ಗಿಲ್ ವಿದೇಶದಲ್ಲಿ ಟೆಸ್ಟ್ ಗೆದ್ದ ಅತ್ಯಂತ ಕಿರಿಯ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಗವಾಸ್ಕರ್ ಹೆಸರಿನಲ್ಲಿತ್ತು. 1976 ರಲ್ಲಿ ಆಕ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸುನಿಲ್ ಗವಾಸ್ಕರ್ (26 ವರ್ಷ 202 ದಿನ) ಗೆಲುವು ಸಾಧಿಸಿದ್ದರು.