Friday, 13th December 2024

ನಾಳೆಯಿಂದ ಭಾರತ -ಶ್ರೀಲಂಕಾ ಮೊದಲ ಟೆಸ್ಟ್‌

ಮೊಹಾಲಿ: ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್‌ ನಾಳೆಯಿಂದ ಆರಂಭಗೊಳ್ಳಲಿದೆ.

ಮೊಹಾಲಿಯ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೆಸ್ಟ್‌ ಪಂದ್ಯವನ್ನು ಆಯೋಜನೆ ಮಾಡಲಾಗಿದೆ. ಈಗಾಗಲೇ ಟಿ 20 ಸರಣಿಯಲ್ಲಿ ಕ್ಲೀನ್​ಸ್ವೀಪ್ ಸಾಧನೆ ಮಾಡಿರುವ ರೋಹಿತ್‌ ಬಳಗ ಟೆಸ್ಟ್ ನಲ್ಲಿಯೂ ಪಾರಮ್ಯ ಮೆರೆಯಲು ಎದುರು ನೋಡುತ್ತಿದೆ.

ಟೆಸ್ಟ್‌ ನಾಯಕರಾಗಿ ರೋಹಿತ್‌ ಗೆ ಇದು ಮೊದಲ ಪಂದ್ಯವಾಗಿದ್ದು, ಟಿ20 ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದ ವಿರಾಟ್ ಕೊಹ್ಲಿ ಹಾಗೂ ವಿಕೆಟ್‌ ಕೀಪರ್‌ ರಿಷಭ್ ಪಂತ್ ಟೆಸ್ಟ್‌ ನಲ್ಲಿ ತಂಡಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ. ಕೊಹ್ಲಿಗೆ ಇದು 100ನೇ ಟೆಸ್ಟ್ ಪಂದ್ಯವಾಗಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಪ್ರಿಯಾಂಕ್ ಪಾಂಚಾಲ್, ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಶುಭಮನ್‌ಗಿಲ್, ರಿಷಭ್ ಪಂತ್ (ವಿಕೆಟ್‌ಕೀಪರ್‌), ಕೆ.ಎಸ್ ಭರತ್ (ವಿಕೆಟ್‌ಕೀಪರ್‌), ರವೀಂದ್ರ ಜಡೇಜಾ, ಜಯಂತ್ ಯಾದವ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಸೌರಭ್ ಕುಮಾರ್ , ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಮೊಹಮ್ಮದ್‌ಶಮಿ, ಜಸ್‌ಪ್ರೀತ್ ಬುಮ್ರಾ (ಉಪ ನಾಯಕ).

ಶ್ರೀಲಂಕಾ ಟೆಸ್ಟ್‌ತಂಡ: ದಿಮುತ್‌ ಕರುಣಾರತ್ನೆ (ನಾಯಕ), ಪತುಮ್‌ನಿಸಂಕ, ಲಾಹಿರು ತಿರಿಮನ್ನೆ, ಧನಂಜಯ ಡಿ’ಸಿಲ್ವಾ (ಉಪನಾಯಕ), ಕುಶಲ್‌ಮೆಂಡಿಸ್‌, ಏಂಜೆಲೊ ಮ್ಯಾಥ್ಯೂಸ್‌, ದಿನೇಶ್‌ಚಾಂದಿಮಾಲ್, ಚರಿತ್‌ಅಸಲಂಕ, ನಿರೋಷನ್‌ಡಿಕ್ವೆಲ್ಲ, ಚಮಿಕ ಕರುಣಾರತ್ನೆ, ರಮೇಶ್‌ಮೆಂಡಿಸ್‌, ಲಾಹಿರು ಕುಮಾರ, ಸುರಂಗ ಲಕ್ಮಲ್, ದುಷ್ಮಾಂತ ಚಾಮೀರ, ವಿಶ್ವ ಫರ್ನಾಂಡೊ, ಜೆಫ್ರಿ ವ್ಯಾಂಡರ್ಸೆ, ಪ್ರವೀಣ್‌ಜಯವಿಕ್ರಮ, ಲಸಿತ್‌ಎಂಬುಲ್ದೇನಿಯ.