ಅಡಿಲೇಡ್: ಭಾರತ-ಆಸ್ಟ್ರೇಲಿಯ(IND vs AUS) ನಡುವಿನ ಅಡಿಲೇಡ್ ಟೆಸ್ಟ್(Adelaide Test) ಪಂದ್ಯದಲ್ಲಿ ಬೌನ್ಸರ್ ಏಟಿಗೆ ಸಿಲುಕಿ ದುರ್ಮರಣಕ್ಕೀಡಾದ ಫಿಲಿಪ್ ಹ್ಯೂಸ್(Phillip Hughes) ಅವರ 10ನೇ ಪುಣ್ಯಸ್ಮರಣೆಯನ್ನು ಸ್ಮರಿಸಲು ಕ್ರಿಕೆಟ್ ಆಸ್ಟ್ರೇಲಿಯ ನಿರ್ಧರಿಸಿದೆ. 2014ರ ನ. 25ರಂದು ಸಿಡ್ನಿಯಲ್ಲಿ ನಡೆದ ಶೆಫೀಲ್ಡ್ ಶೀಲ್ಡ್ ಪಂದ್ಯಾವಳಿಯ ವೇಳೆ ಸೀನ್ ಅಬೋಟ್ ಅವರ ಶಾರ್ಟ್‌ಪಿಚ್ ಎಸೆತವೊಂದು ಫಿಲಿಪ್ ಹ್ಯೂಸ್ ಅವರನ್ನು ಬಲಿಪಡೆದಿತ್ತು. ಜೀವನ್ಮರಣ ಹೋರಾಟದ ಬಳಿಕ ನ. 27ರಂದು ಹ್ಯೂಸ್ ದುರಂತ ಅಂತ್ಯ ಕಂಡಿದ್ದರು.
ಫಿಲಿಪ್ ಹ್ಯೂಸ್ ಸಾವಿನ ಬಳಿಕ ಇಂಥ ದುರಂತ ಮರುಕಳಿಸಬಾರದೆಂಬ ನಿಟ್ಟಿನಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ತಂಡದ ಆಟಗಾರರಿಗೆ ಕುತ್ತಿಗೆಯನ್ನು ರಕ್ಷಿಸುವ ನೆಕ್ ಗಾರ್ಡ್ ಬಳಕೆಯನ್ನು ಕಡ್ಡಾಯಗೊಳಿಸಿತ್ತು. ಆರಂಭದಲ್ಲಿ ಸ್ವೀವ್ ಸ್ಮಿತ್ ಸೇರಿ ಹಲವು ಆಟಗಾರರು ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ ಆ ಬಳಿಕ ನೆಕ್ ಗಾರ್ಡ್ ಹೆಲ್ಮೆಟ್ ಧರಿಸಲು ನಿರ್ಧರಿಸಿದರು.
ಇದನ್ನೂ ಓದಿ IND vs AUS: ʻಕೆಎಲ್ ರಾಹುಲ್‌ರ ವಿವಾದಾತ್ಮಕ ಕ್ಯಾಚ್ʼ-ಮಿಚೆಲ್ ಸ್ಟಾರ್ಕ್ ಪ್ರತಿಕ್ರಿಯೆ ಹೀಗಿದೆ!
ಡಿ.6ರಂದು ಅಡಿಲೇಡ್‌ನಲ್ಲಿ ದ್ವಿತೀಯ ಪಂದ್ಯ ನಡೆಯಲಿದೆ. ಇದು ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿದೆ. ಮೊದಲ ಪಂದ್ಯ ಮುಕ್ತಾಯದ ಬಳಿಕ ಈ ಪಂದ್ಯಕ್ಕೆ 10 ದಿನಗಳ ಬಿಡುವು ಇರಲಿದೆ. ಪಂದ್ಯಕ್ಕೂ ಮುನ್ನ ಭಾರತ ತಂಡ ಆಸೀಸ್ ಪ್ರಧಾನ ಮಂತ್ರಿ ಇಲೆವೆನ್ ವಿರುದ್ಧ 3 ದಿನಗಳ ಅಹರ್ನಿಶಿ ಅಭ್ಯಾಸ ಪಂದ್ಯ ಆಡಲಿದೆ. ಈ ಪಂದ್ಯದಲ್ಲಿ ರೋಹಿತ್ ಕಣಕ್ಕಿಳಿಯಲಿದ್ದಾರೆ. ದ್ವಿತೀಯ ಪಂದ್ಯದ ಬಳಿಕ ನಾಯಕತ್ವ ಕೂಡ ರೋಹಿತ್ ಹೆಗಲೇರಲಿದೆ.
ರೋಹಿತ್ ಶರ್ಮ(Rohit Sharma) ಅವರು ಮೊದಲ ಟೆಸ್ಟ್‌ನ 3ನೇ ದಿನದಾಟದ ವೇಳೆ ಭಾರತ(AUS vs IND) ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ. 2ನೇ ಮಗುವಿನ ಆಗಮನದ ಹಿನ್ನೆಲೆಯಲ್ಲಿ ಆಸೀಸ್‌ಗೆ ತಡವಾಗಿ ತೆರಳುವುದಾಗಿ ಬಿಸಿಸಿಐಗೆ ಮಾಹಿತಿ ನೀಡಿದ್ದರು. ಹೀಗಾಗಿ ಮೊದಲ ಪಂದ್ಯಕ್ಕೆ ಜಸ್‌ಪ್ರೀತ್ ಬುಮ್ರಾ ನಾಯಕನಾಗಿದ್ದಾರೆ. ತಂಡ ಸೇರಲಿರುವ ರೋಹಿತ್ ಮೂರನೇ ದಿನದಾಟದ ವೇಳೆ ಭಾರತ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಕಾಣಿಸಲಿದ್ದಾರೆ ಎನ್ನಲಾಗಿದೆ.