Wednesday, 11th December 2024

ಹಾಕಿ: ಭಾರತಕ್ಕೆ ಮಣಿದ ಸಿಂಗಾಪುರ

ಹ್ಯಾಂಗ್‌ಝೌ: ಸವಿತಾ ಪುನಿಯಾ ನೇತೃತ್ವದ ಭಾರತ ಮಹಿಳಾ ಹಾಕಿ ತಂಡ ತನ್ನ ಮೊದಲ ಪಂದ್ಯದಲ್ಲಿ ಸಿಂಗಾಪುರವನ್ನು 13-0 ಅಂತರದಿಂದ ಸೋಲಿಸಿದೆ. ಭಾರತ ಪರ ಸಂಗೀತಾ ಕುಮಾರಿ 3 ಗೋಲು ಗಳಿಸಿದರು.

ಮಲೇಷ್ಯಾ, ದಕ್ಷಿಣ ಕೊರಿಯಾ, ಹಾಂಕಾಂಗ್ ಮತ್ತು ಸಿಂಗಾಪುರದೊಂದಿಗೆ ಭಾರತ ತಂಡ ಪೂಲ್-ಎಯಲ್ಲಿ ಸ್ಥಾನ ಪಡೆದಿದೆ.

ಪೂಲ್‌ನ ಮೊದಲ ಪಂದ್ಯದಲ್ಲಿ ಮಲೇಷ್ಯಾ 8-0 ಗೋಲುಗಳಿಂದ ಹಾಂಕಾಂಗ್ ತಂಡವನ್ನು ಸೋಲಿಸಿತು. ಆದರೆ, ಎರಡನೇ ಪಂದ್ಯದಲ್ಲಿ ದಕ್ಷಿಣ ಕೊರಿಯಾ 4-0 ಗೋಲುಗಳಿಂದ ಸಿಂಗಾಪುರವನ್ನು ಸೋಲಿಸಿತು. ಇದೀಗ ಭಾರತ ತಂಡ ಸಿಂಗಾಪುರವನ್ನು 13-0 ಅಂತರದಿಂದ ಸೋಲಿಸಿದೆ. ಈ ಮೂಲಕ ಸಿಂಗಾಪುರ ತಂಡ 2ನೇ ಪಂದ್ಯದಲ್ಲಿ ಸೋಲು ಕಂಡಿದೆ.