Saturday, 14th December 2024

ಸೆಮಿಫೈನಲ್’ಗೆ ಟಿಕೆಟ್‌ ಪಡೆದ ಭಾರತದ ಪಿವಿ ಸಿಂಧು

ಟೋಕಿಯೋ: ಟೋಕಿಯೋ ಒಲಂಪಿಕ್ಸ್ ನಲ್ಲಿ ಶುಕ್ರವಾರ ನಡೆದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಪಿವಿ ಸಿಂಧು, ಜಪಾನಿನ ಅಕೇನ್ ಯಮಗುಚಿ ಅವರನ್ನು ಸೋಲಿಸುವ ಮೂಲಕ ಸೆಮಿಫೈನಲ್’ಗೆ ಟಿಕೆಟ್‌ ಪಡೆದರು. ಈ ಮೂಲಕ ಭಾರತಕ್ಕೆ ಪದಕದ ಕನಸಿನ ಭರವಸೆಯನ್ನು ಮೂಡಿಸಿದ್ದಾರೆ.

ಕಳೆದ ರಿಯೋ 2016ರ ಬೆಳ್ಳಿ ಪದಕ ವಿಜೇತ ಏಸ್ ಶಟ್ಲರ್ ಪಿ.ವಿ.ಸಿಂಧು ಅವರು ಸೆಮಿ ಫೈನಲ್ ಗೆ ಮುನ್ನಡೆದ ನಂತರ ಮತ್ತೊಂದು ಪದಕದ ಭರವಸೆ ಪಡೆದಿದ್ದಾರೆ.

ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಜಪಾನಿನ ಯಮಗುಚಿ ಅವರನ್ನು ಉತ್ತಮ ಆಟದ ಮೂಲಕ ಪಿವಿ ಸಿಂಧು. 21-13, 22-20 ರಿಂದ ಸೋಲಿಸಿ ಸೆಮೀಸ್ ಪ್ರವೇಶಿಸಿದರು.