Saturday, 14th December 2024

IPL 2025: ʻಅವಕಾಶ ಸಿಕ್ಕರೆ ಮುನ್ನಡೆಸುತ್ತೇನೆʼ-ಆರ್‌ಸಿಬಿ ನಾಯಕತ್ವದ ಬಗ್ಗೆ ರಜತ್‌ ಪಾಟಿದಾರ್‌ ಪ್ರತಿಕ್ರಿಯೆ!

IPL 2025: ʻYes, definitelyʼ-Rajat Patidar 'happy' to lead RCB if given an opportunity

ಬೆಂಗಳೂರು: ಕಳೆದ ಹಲವು ದಿನಗಳಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಯುವ ಬ್ಯಾಟ್ಸ್‌ಮನ್‌ ರಜತ್‌ ಪಾಟಿದಾರ್‌ ನಾಯಕರಾಗಲಿದ್ದಾರೆಂಬ ಬಗ್ಗೆ ಚರ್ಚೆಗಳು ನಡಯುತ್ತಿವೆ. ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಫೈನಲ್‌ ಪಂದ್ಯದ ನಿಮಿತ್ತ ಬೆಂಗಳೂರಿನಲ್ಲಿರುವ ರಜತ್‌ ಪಾಟಿದಾರ್‌, ಆರ್‌ಸಿಬಿ ನಾಯಕತ್ವದ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಆರ್‌ಸಿಬಿ ನಾಯಕನಾಗಲು ಅವಕಾಶ ಸಿಕ್ಕರೆ ಖಂಡಿತಾ ಮುನ್ನಡೆಸುತ್ತೇನೆಂದು ಹೇಳಿದ್ದಾರೆ.

2025ರ ಐಪಿಎಲ್‌ ಮೆಗಾ ಹರಾಜಿನ ನಿಮಿತ್ತ ವಿರಾಟ್‌ ಕೊಹ್ಲಿ, ರಜತ್‌ ಪಾಟಿದಾರ್‌ ಹಾಗೂ ಯಶ್‌ ದಯಾಳ್‌ ಅವರನ್ನು ಬೆಂಗಳೂರು ಫ್ರಾಂಚೈಸಿ ಉಳಿಸಿಕೊಂಡಿತ್ತು. ಮೆಗಾ ಹರಾಜಿನಲ್ಲಿಯೂ ಆರ್‌ಸಿಬಿಯನ್ನು ಮುನ್ನಡೆಸಬಲ್ಲ ಸೂಕ್ತ ಆಟಗಾರನನ್ನು ಬೆಂಗಳೂರು ಫ್ರಾಂಚೈಸಿ ಖರೀದಿಸಿರಲಿಲ್ಲ. ಆ ಮೂಲಕ ವಿರಾಟ್‌ ಕೊಹ್ಲಿ ನಾಯಕತ್ವಕ್ಕೆ ಮರಳಬಹುದೆಂದು ಹೇಳಲಾಗುತ್ತಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಭವಿಷ್ಯದ ನಿಮಿತ್ತ ರಜತ್‌ ಪಾಟಿದಾರ್‌ಗೆ ನಾಯಕತ್ವ ನೀಡಬಹುದೆಂದು ಹೇಳಲಾಗುತ್ತಿದೆ.

ಆರ್‌ಸಿಬಿಯನ್ನು ಮುನ್ನಡೆಸಲು ಸಿದ್ದ: ಪಾಟಿದಾರ್

ಮುಂಬೈ ವಿರುದ್ಧ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಫೈನಲ್‌ ಪಂದ್ಯದ ನಿಮಿತ್ತ ಮಾಧ್ಯಮಗಳ ಜೊತೆ ಮಾತನಾಡಿದ ರಜತ್‌ ಪಾಟಿದಾರ್‌ಗೆ ಆರ್‌ಸಿಬಿ ನಾಯಕತ್ವದ ಬಗ್ಗೆ ಸುದ್ದಿಗಾರರು ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, “ಹೌದು, ಖಚಿತವಾಗಿಯೂ. ಆರ್‌ಸಿಬಿ ದೊಡ್ಡ ಫ್ರಾಂಚೈಸಿ ಹಾಗೂ ಆರ್‌ಸಿಬಿ ಪರ ಆಡುವುದನ್ನು ನಾನು ಇಷ್ಟಪಡುತ್ತೇನೆ. ನನ್ನನ್ನು ಉಳಿಸಿಕೊಂಡಿದ್ದರಿಂದ ನನ್ನಲ್ಲಿ ವಿಶ್ವಾಸ ಹೆಚ್ಚಾಗಿದೆ,” ಎಂದು ತಿಳಿಸಿದ್ದಾರೆ.

“ಆರ್‌ಸಿಬಿಗೆ ನಾಯಕನಾಗುವ ಅವಕಾಶ ಸಿಕ್ಕರೆ, ಸಂತೋಷದೊಂದಿಗೆ ತಂಡವನ್ನು ಮುನ್ನಡೆಸಲು ನಾನು ಸಿದ್ದನಿದ್ದೇನೆ. ಆದರೆ, ಇದೆಲ್ಲವೂ ಫ್ರಾಂಚೈಸಿಯನ್ನು ಅವಲಂಬಿಸಿದೆ,” ಎಂದು ಆರ್‌ಸಿಬಿ ಬ್ಯಾಟ್ಸ್‌ಮನ್‌ ಹೇಳಿದ್ದಾರೆ.

ಮಧ್ಯ ಪ್ರದೇಶವನ್ನು ಮುನ್ನಡೆಸುತ್ತಿರುವ ಪಾಟಿದಾರ್‌

ಇದೇ ಮೊದಲ ಬಾರಿ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಮಧ್ಯ ಪ್ರದೇಶ ತಂಡವನ್ನು ರಜತ್‌ ಪಾಟಿದಾರ್‌ ಮುನ್ನಡೆಸುತ್ತಿದ್ದಾರೆ. ಅದರಂತೆ ಇವರ ನಾಯಕತ್ವದಲ್ಲಿ ಮಧ್ಯ ಪ್ರದೇಶ ತಂಡ ಫೈನಲ್‌ಗೆ ಪ್ರವೇಶ ಮಾಡಿದೆ. ಭಾನುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಲಿಷ್ಠ ಮುಂಬೈ ಎದುರು ರಜತ್‌ ಪಾಟಿದಾರ್‌ ಬಳಗ ಕಾದಾಟ ನಡೆಸಲಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ

ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್, ಲಿಯಾಮ್ ಲಿವಿಂಗ್‌ಸ್ಟೋನ್‌, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜಾಶ್ ಹೇಝಲ್‌ವುಡ್, ರಾಸಿಖ್ ದಾರ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ಕೃಣಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ಜಾಕೋಬ್ ಬೆಥೆಲ್, ರೊಮಾರಿಯೋ ಶೆಫರ್ಡ್,
ನುವಾನ್ ತುಷಾರ, ದೇವದತ್ ಪಡಿಕಲ್, ಸ್ವಸ್ತಿಕ್ ಚಿಕಾರ, ಮನೋಜ್ ಭಾಂಡಗೆ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಥಿ

ಈ ಸುದ್ದಿಯನ್ನು ಓದಿ: IPL 2025: ಆರ್‌ಸಿಬಿಗೆ ರಜತ್​ ಪಾಟೀದಾರ್ ನಾಯಕ?