Tuesday, 12th November 2024

IPL 2025: ಲಕ್ನೋಗೆ ರಾಹುಲ್‌ ಗುಡ್ ಬೈ; ಆರ್‌ಸಿಬಿ ಸೇರುವುದು ಫಿಕ್ಸ್‌

ನಾಳೆ(ಅ.31, ಗುರುವಾರ) ನಡೆಯುವ ಐಪಿಎಲ್‌(IPL 2025) ರಿಟೇನ್‌ ಪ್ರಕ್ರಿಯೆಗೆ ಎಲ್ಲ ಫ್ರಾಂಚೈಸಿಗಳು ಈಗಾಗಲೇ ಸಿದ್ಧತೆ ಮುಕ್ತಾಯಗೊಳಿಸಿದ್ದು ತಂಡದಲ್ಲಿ ಉಳಿಸಿಕೊಳ್ಳುವ ಮತ್ತು ರಿಲೀಸ್‌ ಮಾಡುವ ಪಟ್ಟಿಯನ್ನು ಅಂತಿಮಗೊಳಿಸಿದೆ. ಇದಕ್ಕೂ ಮುನ್ನವೇ ಲಕ್ನೋ ಸೂಪರ್‌ ಜೈಂಟ್ಸ್‌(LSG) ತಂಡದ ನಾಯಕರಾಗಿರುವ ಕನ್ನಡಿಗ ಕೆ.ಎಲ್‌. ರಾಹುಲ್‌(KL Rahul) ವೈಯಕ್ತಿ ಕಾರಣ ನೀಡಿ ತಂಡದಿಂದ ಹೊರನಡೆಯಲಿದ್ದಾರೆ ಎಂದು ವರದಿಯಾಗಿದೆ. ಈ ಸುದ್ದಿ ಹೊರಬಿದ್ದ ತಕ್ಷಣ ಆರ್‌ಸಿಬಿ(RCB) ಅಭಿಮಾನಿಗಳು ರಾಹುಲ್‌ ಅವರು ಈ ಹಿಂದೆ ಆರ್‌ಸಿಬಿಯಲ್ಲಿ ಆಡಿದ ವಿಡಿಯೊ ಮತ್ತು ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಆರ್‌ಸಿಬಿಗೆ ಸ್ವಾಗತಿಸಲು ಆರಂಭಿಸಿದ್ದಾರೆ.

ಮೂಲಗಳ ಪ್ರಕಾರ ಲಕ್ನೋ ತಂಡ ರಾಹುಲ್‌ ಅವರನ್ನು ರಿಟೇನ್‌ ಮಾಡಲು ಬಯಸಿತ್ತು. ಆದರೆ ಸ್ವತಃ ರಾಹುಲ್‌ ಅವರೇ ತಂಡದಿಂದ ಬಿಡುಗಡೆ ಮಾಡಲು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಮುಂದಿನ ಆವೃತ್ತಿಗೆ ವೆಸ್ಟ್‌ ಇಂಡೀಸ್‌ನ ಸ್ಫೋಟಕ ಬ್ಯಾಟರ್‌ ನಿಕೋಲಸ್‌ ಪೂರಣ್‌ ಅವರನ್ನು ನಾಯಕನನ್ನಾಗಿ ಮಾಡುವ ಸಾಧ್ಯತೆ ಇದೆ. ಯುವ ವೇಗಿ ಮಾಯಾಂಕ್‌ ಯಾದವ್‌ ಮತ್ತು ಸ್ಪಿನ್‌ ಬೌಲರ್‌ ರವಿ ಬಿಷ್ಣೋಯಿ ಅವರನ್ನು ರಿಟೇನ್‌ ಮಾಡಿಕೊಳ್ಳಲು ಫ್ರಾಂಚೈಸಿ ಯೋಚಿಸಿದೆ ಎನ್ನಲಾಗಿದೆ. ಕಳೆದ ಆವೃತ್ತಿಯಲ್ಲಿ ಲಕ್ನೋ ತಂಡದ ಮಾಲಿಕ ಗೋಯೆಂಕಾ ತೋರಿದ್ದ ವರ್ತನೆನಿಂದ ರಾಹುಲ್​ ಬೇಸರಗೊಂಡಿದ್ದರು. ಈ ವೇಳೆಯೇ ರಾಹುಲ್ ಮುಂದಿನ ಆವೃತ್ತಿಯಲ್ಲಿ ಲಕ್ನೋ ತೊರೆಯುವುದು ಬಹುತೇಕ ಖಚಿತ ಎನ್ನಲಾಗಿತ್ತು. ಹೀಗಾಗಿ ಅವರು ಆರ್​ಸಿಬಿಗೆ ಬರಲಿದ್ದಾರೆ ಎನ್ನಲಾಗಿತ್ತು.

ಇದನ್ನೂ ಓದಿ IPL 2025 Retention: ನಾಳೆ ಐಪಿಎಲ್​ ರಿಟೇನ್ ಪಟ್ಟಿ ಪ್ರಕಟ; ವೀಕ್ಷಣೆ ಹೇಗೆ?

ಕೊಹ್ಲಿ ನಾಯಕ

ಟಿ20ಗೆ ನಿವೃತ್ತಿ ಹೇಳಿ ಎಲ್ಲ ಒತ್ತಡ ಕಡಿಮೆ ಮಾಡಿರುವ ಕೊಹ್ಲಿಯೇ ಮತ್ತೆ ಆರ್​ಸಿಬಿಗೆ ನಾಯಕನಾಗಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ವಿರಾಟ್​ ಕೊಹ್ಲಿ ಅವರು ಭಾರತ ತಂಡದ ಮೂರು ಮಾದರಿಯ ನಾಯಕತ್ವ ವಹಿಸಿಕೊಂಡಿದ್ದ ವೇಳೆ ಐಪಿಎಲ್​ನಲ್ಲಿಯೂ ತಂಡವನ್ನು ಮುನ್ನಡೆಸುವುದು ಕಷ್ಟವಾಗುತ್ತದೆ, ಕೆಲಸದ ಒತ್ತಡದಿಂದಾಗಿ ಆಟದ ಕಡೆ ಸರಿಯಾಗಿ ಗಮನ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಐಪಿಎಲ್​ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. 

ವಿರಾಟ್​ ಕೊಹ್ಲಿ 2013ರಲ್ಲಿ ಆರ್​ಸಿಬಿಯ ಪೂರ್ಣ ಪ್ರಮಾಣದ ನಾಯಕನಾಗಿ ನೇಮಕಗೊಂಡಿದ್ದರು. 2021ರ ತನಕ ಅವರು ಆರ್​ಸಿಬಿಯನ್ನು ಮುನ್ನಡೆಸಿದ್ದರು. ಕೊಹ್ಲಿ ನಾಯಕತ್ವದಲ್ಲಿ ಒಟ್ಟು 140 ಪಂದ್ಯಗಳನ್ನು ಆಡಿದ್ದ ಆರ್​​ಸಿಬಿ 66 ಪಂದ್ಯಗಳನ್ನು ಜಯಿಸಿದೆ. 70 ಪಂದ್ಯಗಳಲ್ಲಿ ಸೋಲು ಕಂಡಿದೆ. ಐಪಿಎಲ್​ ಇತಿಹಾಸದಲ್ಲಿ ವಿನ್ನಿಂಗ್ಸ್​ ಸರಾಸರಿಯಲ್ಲಿ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರ ನಾಯಕತ್ವದ ಸರಾಸರಿ ಗೆಲುವು ಶೇ. 46.15 ರಷ್ಟಿದೆ. ದಾಖಲೆ ಧೋನಿ ಹೆಸರಿನಲ್ಲಿದೆ. ಧೋನಿ ನಾಯಕತ್ವದ ಗೆಲುವಿನ ಸರಾಸರಿ 60.38 ರಷ್ಟಿದೆ.