Saturday, 14th December 2024

ಸಾನಿಯಾ -ಮಾಜಿ ಕ್ರಿಕೆಟಿಗ ಶೋಯಬ್ ದಾಂಪತ್ಯದಲ್ಲಿ ಬಿರುಕು ಮೂಡಿತೇ?

ಬೆಂಗಳೂರು: ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಮಲಿಕ್ ದಾಂಪತ್ಯದಲ್ಲಿ ಬಿರುಕು ಮೂಡಿತೇ?

‘ಕಾನೂನು ತೊಡಕುಗಳನ್ನು ನಿವಾರಿಸಿಕೊಂಡು ಈ ದಂಪತಿ ಅಧಿಕೃತವಾಗಿ ವಿಚ್ಛೇದನ ಘೋಷಣೆ ಮಾಡಲಿದ್ದಾರೆ’ ಎಂದು ಪಾಕ್‌ನ ಸುದ್ದಿವಾಹಿನಿ ವರದಿ ಮಾಡಿದೆ.

‘ಸಾನಿಯಾ ಹಾಗೂ ಶೋಯಬ್ ದಾಂಪತ್ಯದಲ್ಲಿ ಈ ಹಿಂದೆ ಸಾಕಷ್ಟು ಸಾರಿ ಬಿರುಕು ಮೂಡಿತ್ತು. ಆದರೆ, ಅದು ವಿಚ್ಛೇದನ ತೆಗೆದುಕೊಳ್ಳುವ ಹಂತಕ್ಕೆ ಹೋಗಿರಲಿಲ್ಲ. ಇದೀಗ ವಿಚ್ಛೇದನ ದ ನಿರ್ಧಾರ ಮಾಡಿರುವ ದಂಪತಿ ಮಗುವನ್ನು ಸಹ ಪೋಷಕ (ಕೋ ಪೇರೆಂಟಿಂಗ್) ಪದ್ದತಿ ಅಡಿ ಬೆಳೆಸುವ ತೀರ್ಮಾನ ಮಾಡಿದ್ದಾರೆ’ ಎಂದು ಶೋಯಬ್ ಕಡೆಯ ಸಂಬಂಧಿ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದ ಸಾನಿಯಾ, ‘ಒಡೆದ ಹೃದಯಗಳು ಎಲ್ಲಿಗೆ ಹೋಗುತ್ತವೆ’? ಎಂದು ವದಂತಿ ಎಬ್ಬಿಸುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ದ್ದರು.

ಸಾನಿಯಾ ಮಿರ್ಜಾ ಹಾಗೂ ಶೋಯಬ್ ಮಲಿಕ್ 2010 ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ 2018 ರಲ್ಲಿ ಮಗುವಾಗಿತ್ತು. ಕಳೆದ ಅಕ್ಟೋಬರ್‌ನಲ್ಲಿ ಮಗನ ಜನ್ಮದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಿದ್ದರು.